ಕನ್ನಡಪ್ರಭ ವಾರ್ತೆ ಮಂಗಳೂರು
ತಳ್ಳು ಗಾಡಿಗಳನ್ನು ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಟೆಂಟ್ ಸೇರಿದಂತೆ ಶಾಶ್ವತ ವ್ಯವ್ಥೆಯೊಂದಿಗೆ ವ್ಯಾಪಾರ ನಡೆಸುತ್ತಿರುವವರನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುವುದು ಎಂದು ಅವರು ಹೇಳಿದರು.
ನಗರ ವ್ಯಾಪ್ತಿಯ ಲೇಡಿಗೋಶನ್ ಬಳಿ ಎರಡು ಕಡೆ, ಸುರತ್ಕಲ್, ಮಣ್ಣಗುಡ್ಡ, ಕಾವೂರು ಸೇರಿ ಐದು ಕಡೆ ವ್ಯಾಪಾರ ವಲಯಗಳನ್ನು (ವೆಂಡಿಂಗ್ ಝೋನ್) ಗುರುತಿಸಲಾಗಿದೆ. ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳು ಈ ಜಾಗದಲ್ಲಿಯೇ ವ್ಯಾಪಾರ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಮಣ್ಣಗುಡ್ಡ ಪ್ರದೇಶದ ವ್ಯಾಪಾರ ವಲಯಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಈ ಸಂದರ್ಭ ತಿಳಿಸಿದರು.
ಅನುದಾನ ಸಿಕ್ಕಿದರೆ ಕೆಲಸ:
ವಾಮಂಜೂರಿನ ತಿರುವೈಲ್ ವಾರ್ಡ್‌ನಲ್ಲಿ ಡ್ರೈನೇಜ್ ವ್ಯವಸ್ಥೆ ಆಗಿ ಎರಡು ವರ್ಷವಾಗಿದ್ದರೂ ಮನೆಗಳಗೆ ಸಂಪರ್ಕ ಒದಗಿಸಿಲ್ಲ ಎಂದು ಆಸ್ಟಿನ್ ಡಿಸೋಜಾ ದೂರಿದಾಗ, ತಕ್ಷಣ ಕ್ರಮ ವಹಿಸುವುದಾಗ ಮೇಯರ್ ಭರವಸೆ ನೀಡಿದರು.
ಅದು ರೈಲ್ವೆ ಇಲಾಖೆಯ ಆಸ್ತಿ ಆಗಿದ್ದು, ಅವರಿಗೆ ಅಲ್ಲಿ ಕೆಲಸ ಮಾಡುವ ಅಧಿಕಾರ ಇದೆ ಎಂಬುದಾಗಿ ಇತ್ತೀಚೆಗೆ ಸಂಸದರ ನೇತೃತ್ವದ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು ಉತ್ತರಿಸಿದ್ದಾರೆ. ಈಗಾಗಲೇ ಸ್ಥಳೀಯ ಸಮಸ್ಯೆಗಳ ನಿವಾರಣೆಯ ನಿಟ್ಟಿನಲ್ಲಿ ಎರಡು ಸಮಿತಿಗಳನ್ನು ರಚಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಸಂಸದರು, ಶಾಸಕರ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಮೇಯರ್ ಹೇಳಿದರು.
ನಗರದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳ ನೋಂದಣಿ ಆಗುತ್ತಿದೆ. ಸುಮಾರು 600 ರಷ್ಟು ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ದುಡಿಮೆಗೆ ತೊಂದರೆಯಾಗಿದೆ. ಸಾಲದ ಕಂತು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಫೋನ್ ಇನ್ ಕಾರ್ಯಕ್ರಮದ ವೇಳೆ ಹಲವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ, ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ ಮೂಲಕ ವಲಯ ನಿರ್ಧಾರ ಮಾಡಿ ಪರ್ಮಿಟ್ ನೀಡಲಾಗುತ್ತದೆ. ರಿಕ್ಷಾ ಖರೀದಿಸಿದವರು ಎಲ್ಲೂ ಪಾರ್ಕಿಂಗ್ ಮಾಡಬಹುದು. ಸದ್ಯ ನಗರ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿದ ಸುಮಾರು ಆರು ಸಾವಿರದಷ್ಟುಇರುವ ಇತರೆ ರಿಕ್ಷಾದವರಿಗೆ ಈಗಾಗಲೇ ಬಾಡಿಗೆ ಇಲ್ಲದೆ ತೊಂದರೆ ಆಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆ ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.