ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ 2ನೇ ಹಂತದ ಚುನಾವಣೆ ನಡೆಯುತ್ತಿದೆ. 1 ಎಸ್.ಪಿ, 1 ಎ.ಎಸ್.ಪಿ. 6 ಡಿವೈಎಸ್.ಪಿ. 14 ಇನ್ಸ್ ಪೆಕ್ಟರ್, 45 ಸಬ್ ಇನ್ಸ್ ಪೆಕ್ಟರ್, 59 ಸಹಾಯ ಉಪನಿರೀಕ್ಷಕರು, 678 ಪೇದೆ, 280 ಗೃಹ ರಕ್ಷಕ ದಳ, 8 ಡಿ.ಎ.ಆರ್. ತುಕಡಿ, ಗುಜಾರಾತ್ ನಿಂದ 2 ಶಸ್ತ್ರಾಸ್ತ್ರ ಪಡೆಯ 190 ಮಂದಿ ಸೇರಿ 1600 ಸಿಬ್ಬಂದಿ ನಿಯೋಜನೆಯಾಗಿದೆ ಎಂದು ತಿಳಿಸಿದರು.
ಗುರುವಾರ ಮಸ್ಟರಿಂಗ್ ಕಾರ್ಯ ನಡೆಯಲಿದೆ. 45 ಸೆಕ್ಟರ್ ಮೊಬೈಲ್ ಇರುತ್ತದೆ. ಈ ಮೂಲಕ ಅಮಿಷ, ಹಣ ಹಂಚುವುದನ್ನು ತಡೆಗಟ್ಟಲಾಗುವುದು. ಫ್ಲೈಯಿಂಗ್ ಸ್ಕ್ವಾಡ್ ಕೂಡ ಇರುತ್ತದೆ. ಒಳ್ಳೆ ಸಮಾಜ ನಿರ್ಮಾಣಕ್ಕೆ, ನಿರ್ಭಿತಿಯಿಂದ ಮತದಾನ ಮಾಡುವಂತೆ ತಿಳಿಸಿದರು.ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಇತ್ತೀಚಿಗೆ ನಕ್ಸಲ್ ಚಟುವಟಿಕೆ, ಸಾವಿನ ಪ್ರಕರಣ ಇರುವ ಹಿನ್ನೆಲೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸೇರಿದಂತೆ ವಿವಿಧ ಭಾಗದ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.