ಒಳ್ಳೆಯ ವಿಚಾರಗಳಿಗೆ ಸಮಯ ಉಳಿಸಿಕೊಳ್ಳಬೇಕು

KannadaprabhaNewsNetwork |  
Published : Sep 30, 2024, 01:16 AM IST
ತರೀಕೆರೆಯಲ್ಲಿ ವಿಶೇಷ ಸತ್ಸಂಗ ಮತ್ತು ಆರೋಗ್ಯ ಸಿಂಚನ ಕಾರ್ಯಕ್ರಮ | Kannada Prabha

ಸಾರಾಂಶ

ಒಳ್ಳೆಯ ವಿಚಾರಗಳಿಗೆ ಸಮಯವನ್ನು ಉಳಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಮಕ್ಕಳ ತಜ್ಞರು, ಎವಿ ಅಧಿಕಾರಿ ಡಾ. ಮಾಧವ ಪೈ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಒಳ್ಳೆಯ ವಿಚಾರಗಳಿಗೆ ಸಮಯವನ್ನು ಉಳಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಮಕ್ಕಳ ತಜ್ಞರು, ಎವಿ ಅಧಿಕಾರಿ ಡಾ. ಮಾಧವ ಪೈ ಹೇಳಿದರು.

ಅವರು, ಭಾನುವಾರ ವಿವೇಕ ಜಾಗ್ರತೆ ಬಳಗ ತರೀಕೆರೆ (ಡಿವೈನ್ ಪಾರ್ಕ್ ಸಾಲಿಗ್ರಾಮ ಅಂಗಸಂಸ್ಥೆ) ವತಿಯಿಂದ ಪಟ್ಟಣದ ಕಾಳಿದಾಸ ನಗರ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ವಿಶೇಷ ಸತ್ಸಂಗ ಮತ್ತು ಆರೋಗ್ಯ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಜನೆಯಿಂದ ಆನಂದ ದೊರೆಯುತ್ತದೆಯೇ ಹೊರತು, ವಿಭಜನೆ ಅಲ್ಲ. ಗುರೂಜಿ ಅವರ ಸೇವೆ ಮಾಡಬೇಕು. ಭಗವಂತನ ಸ್ಮರಣೆ ಅಗತ್ಯ. ಡಿವೈನ್ ಪಾರ್ಕ್ನಿಂದ ಆನಂದ, ಆರೋಗ್ಯ, ಆಯುಷ್ ಎಲ್ಲವೂ ದೊರಯುತ್ತದೆ. ಎಲ್ಲವೂ ಭಗವಂತ ಕೊಟ್ಟ ಪ್ರಸಾದ ಎಂದು ಭಾವಿಸಬೇಕು ಎಂದು ನುಡಿದರು.ಸಾಲಿಗ್ರಾಮ ಡಿವೈನ್ ಪಾರ್ಕ್ ಬಿ2 ಅಧಿಕಾರಿ ಪ್ರೇಮಕಲಾ ಮಲ್ಯ ಅವರು ಮಾತನಾಡಿ, ಜ್ಞಾನದಾನ ಶ್ರೇಷ್ಠ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು. ಚಿಂತೆ ಇಲ್ಲದ ಹಾಗೆ ಇರಬೇಕು. ದೇವರು ಕರುಣಾಳು, ನಾವು ಭಗವಂತನ ದಾಸ ಆಗಬೇಕು. ಭಗವಂತನ ವಾಣಿಯೇ ಡಿವೈನ್ ಪಾರ್ಕ್ ಆಗಿದೆ. ನಾವು ದೇವರಿಗಾಗಿ ಸಮಯ ಕೊಡುತ್ತೇವೆ ಎನ್ನುವ ಸಂಕಲ್ಪ ಮಾಡಬೇಕು ಎಂದರು

ಶ್ರೀ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಬೇಕು. ದೇವರ ಬಳಿ ಎಷ್ಟು ಹತ್ತಿರವಾಗುತ್ತೇವೆ ಅಷ್ಟು ಒಳ್ಳೆಯದು. ಸದ್ವಿಚಾರದ ಮೂಲಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿದರು.ಮಾಜಿ ಪುರಸಭಾಧ್ಯ, ಕುರುಬ ಸಮಾಜದ ಅಧ್ಯಕ್ಷರೂ ಆದ ಟಿ.ಎಸ್. ರಮೇಶ್ ಮಾತನಾಡಿ, ಇದೊಂದು ಸಮಾಜಮುಖಿ ಕಾರ್ಯಕ್ರಮವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ವಿವೇಕ ಜಾಗೃತಿ ಬಳಗದ ಕಾರ್ಯಕ್ರಮಗಳಿಗೆ ನಾವೂ ಸಹಕರಿಸುತ್ತೇವೆ ಎಂದು ತಿಳಿಸಿದರು.

ತರೀಕೆರೆ ವಿವೇಕ ಜಾಗ್ರತಾ ಬಳಗದ ಅಧ್ಯಕ್ಷೆ ಅಶ್ವಿನಿ ಮಂಜುನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಮತ್ತು ನೆಮ್ಮದಿ ಪಡೆಯುವುದಕ್ಕೆ ಡಿವೈನ್ ಪಾರ್ಕ್ ನಮಗೆ ದಾರಿ ತೋರಿಸುತ್ತದೆ ಎಂದು ಹೇಳಿದರು.

ಮಧುಸೂದನ್ ಕಕ್ರಿ, ರವಿಕುಮಾರ್, ಮಂಜುನಾಥ್, ಕಿರಣ್ ನಾಯಕ್, ಶಿಲ್ಪ ದೋರನಾಳು. ಉಮಾ ಬಸವರಾಜು, ಜಾಗ್ರತಾ ವಿವೇಕ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ