ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ವಿತರಣೆಯಾಗಲಿ

KannadaprabhaNewsNetwork |  
Published : May 25, 2025, 02:26 AM IST
ಶಾಸಕ ಅಶೋಕ ಪಟ್ಟಣ ರಿಯಾಯತಿದರದಲ್ಲಿ ಬಿತ್ತನೆ ಬೀಜ ವಿತರಿಸಿದರು. | Kannada Prabha

ಸಾರಾಂಶ

ರೈತರ ಅನುಕೂಲಕ್ಕಾಗಿ ರಜೆ ದಿನಗಳಲ್ಲಿ ಕೂಡಾ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕೃಷಿ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕೆಂದರು

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ರಾಜ್ಯ ಸರ್ಕಾರ ರೈತರಿಗೆ ಸಕಾಲದಲ್ಲಿ ಬೀಜ ಗೊಬ್ಬರಗಳ ಪೂರೈಕೆ ಮಾಡಿದ್ದು, ಅಧಿಕಾರಿಗಳು ಸಮರ್ಪಕ ವಿತರಣೆಗೆ ವ್ಯವಸ್ಥೆ ಮಾಡಿಕೊಂಡು ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಸುರೇಬಾನದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಈಗಾಗಲೇ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ರೈತರ ಅನುಕೂಲಕ್ಕಾಗಿ ರಜೆ ದಿನಗಳಲ್ಲಿ ಕೂಡಾ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕೃಷಿ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕೆಂದರು. ತಾಲೂಕಿನಲ್ಲಿ ವಾಡಿಕೆಗಿಂತ ಮುಂಗಾರು ಪೂರ್ವ ಅಧಿಕ ಮಳೆಯಾಗಿದೆ. ಬರಗಾಲದ ಲಕ್ಷಣಗಳಿಲ್ಲ. ರೈತರು ಸರ್ಕಾರದ ರಿಯಾಯತಿ ಪ್ರಯೋಜನ ಪಡೆದುಕೊಂಡು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರ ಅನುಕೂಲಕ್ಕಾಗಿ ತಾಲೂಕಿನ ಕೆ.ಚಂದರಗಿ, ಸಾಲಹಳ್ಳಿ, ಕಟಕೋಳ, ಸುರೇಬಾನ, ಮುದಕವಿ, ಬಟಕುರ್ಕಿ, ಮುದೇನೂರ, ಹೊಸಕೋಟಿ ಗ್ರಾಮಗಳ ಕೃಷಿ ಕೇಂದ್ರಗಳಲ್ಲಿ ಮುಂಗಾರು ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದ್ದು, ಆಯಾ ಹೊಬಳಿಯಲ್ಲಿ ಬರುವ ಕೃಷಿ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಬೀಜ ಗೊಬ್ಬರ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕರಯ್ಯ ಚಿಕ್ಕಮಠ, ಸತೀಶ ಕೋಟಗಿ, ಶಿವಾನಂದ ಚಿಕ್ಕನಗೌಡ್ರ, ಶಿವಪ್ಪ ಮೇಟಿ, ಹನಮಂತ ಬೆಳದಡಿ, ಜಿ,ಬಿ ರಂಗನಗೌಡ್ರ, ಸಿದ್ಲಿಂಗಪ್ಪ ಶಿಂಗಾರಕೊಪ್ಪ, ಕೃಷಿ ಇಲಾಖೆಯ ಸಿಬ್ಬಂದಿಗಳಾದ ಸಂಗಮೇಶ ಜಲಗೇರಿ, ಶ್ರೀಶೈಲ ಪಾಟೀಲ, ಈರಣ್ಣ ಬೆಳವಣಕಿ, ಶಂಕ್ರಪ್ಪ ರಾಚಪ್ಪಗೋಳ, ಜಗದೀಶ ದಂಡಿನ ಸೇರಿದಂತೆ ಇತರರಿದ್ದರು. ಕೃಷಿ ಅಧಿಕಾರಿ ನವೀನಕುಮಾರ ಪಾಟೀಲ ಸ್ವಾಗತಿಸಿದರು. ಗೋವಿಂದರಡ್ಡಿ ಜಾಯನ್ನವರ ನಿರೂಪಿಸಿದರು. ರಮೇಶ ದಾಸರ ವಂದಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌