ಚನ್ನರಾಯಪಟ್ಟಣದಲ್ಲಿ ತಿರಂಗಾ ಯಾತ್ರೆ ಯಶಸ್ವಿ

KannadaprabhaNewsNetwork |  
Published : May 25, 2025, 01:36 AM IST
ಚನ್ನರಾಯಪಟ್ಟಣದ ನಾಗರಿಕರ ವತಿಯಿಂದ ಆಯೋಜಿಸಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗಾಗಿ ಪಟ್ಟಣದ ನಾಗರಿಕರ ವತಿಯಿಂದ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಯಶಸ್ವಿಗೊಳಿಸಿದರು. ಪಾಪಿ ಪಾಕಿಸ್ತಾನದ ದೇಶದ್ರೋಹಿ ಕೆಲಸಗಳನ್ನು ಭಾರತೀಯರಾದ ನಾವೂ ಯಾವಾಗಲೂ ಖಂಡಿಸುತ್ತೇವೆ. ದೇಶ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತೇವೆ. ಆದ್ದರಿಂದ ಎಲ್ಲರೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಮತ್ತು ದೇಶದ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

"ಆಪರೇಷನ್ ಸಿಂದೂರ " ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗಾಗಿ ಪಟ್ಟಣದ ನಾಗರಿಕರ ವತಿಯಿಂದ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಯಶಸ್ವಿಗೊಳಿಸಿದರು.

ಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಾಥಕ್ಕೆ ಚಾಲನೆ ನೀಡಲಾಯಿತು. ಹಳೇ ಬಸ್‌ನಿಲ್ದಾಣ, ರೇಣುಕಾಂಬ ರಸ್ತೆ, ಬಾಗೂರು ರಸ್ತೆ, ಕೋಟೆ, ಹೊಸ ಬಸ್‌ನಿಲ್ದಾಣ, ಮೈಸೂರು ರಸ್ತೆ ಮಾರ್ಗವಾಗಿ ರಾಷ್ಟ್ರಬಾವುಟವನ್ನು ಹಿಡಿದು ಘೋಷಣೆಗಳನ್ನು ಕೂಗಲಾಯಿತು. ರಸ್ತೆ ಬದಿ ದೇಶಾಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ದೇಶಾಭಿಮಾನ ಮೆರೆದರು. ಇದೇ ಸಂದರ್ಭದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ ಉಗ್ರಗಾಮಿಗಳನ್ನು ಹುಡುಕಿ ಹೊಡೆದುಹಾಕಿದ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಪಾಪಿ ಪಾಕಿಸ್ತಾನದ ದೇಶದ್ರೋಹಿ ಕೆಲಸಗಳನ್ನು ಭಾರತೀಯರಾದ ನಾವೂ ಯಾವಾಗಲೂ ಖಂಡಿಸುತ್ತೇವೆ. ದೇಶ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತೇವೆ. ಆದ್ದರಿಂದ ಎಲ್ಲರೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಮತ್ತು ದೇಶದ ಬಗ್ಗೆ ಚಿಂತನೆ ಮಾಡಬೇಕು ಎಂದರು. ಖ್ಯಾತ ಅಂಕಣಕಾರ ಹಾಗೂ ಮಾಜಿ ಸೈನಿಕರಾದ ಡ್ಯಾನಿಯಲ್ ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್‌ ನಿಂಬೇಹಳ್ಳಿ ಮಾತನಾಡಿ, ಹಿಂದೆ ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿದಕ್ಕೆ ರಾವಣನ ಸಂಹಾರವಾಯಿತು. ಮಹಾಭಾರತದಲ್ಲಿ ದೌರ್ಪದಿಯ ಕೇಶಕ್ಕೆ ಕೈಹಾಕಿ ಕೌರವರು ಸುಟ್ಟುಹೋದರು. ಅದೇ ರೀತಿ ಭಾರತವನ್ನು ಪಾಕಿಸ್ತಾನ ಮುಟ್ಟಿ ಸುಟ್ಟುಹೋಗಿದೆ. ಇದಕ್ಕೆ ನಮ್ಮ ಸೈನಿಕರ ಶೌರ್ಯ ಮೆಚ್ಚಲೇಬೇಕು, ವಿಶ್ವಗುರು ಭಾರತ ಆಗಲು ನಾವೆಲ್ಲರೂ ಪ್ರಧಾನಮಂತ್ರಿಗಳಿಗೆ ಹಾಗೂ ಸೈನಿಕರಿಗೆ ಬೆಂಬಲ ನೀಡಬೇಕು ಎಂದರು.

ಮೆರವಣಿಗೆಯಲ್ಲಿ ಕತ್ತರಿಘಟ್ಟದ ಚಂದ್ರಶೇಖರ ಗುರೂಜಿ, ಶಕ್ತಿ ಮಠದ ಚೈತನ್ಯ ಸ್ವಾಮೀಜಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಮೆಡಿಕಲ್‌ ವೆಂಕಟೇಶ್, ಅಧ್ಯಕ್ಷ ಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ, ಪುಟ್ಟಣ್ಣ ಗೋಕಾಕ್, ಗಜಾನನ ಮನೋಹರ್, ಡಾ. ನಾಗೇಶ್, ಡಾ.ವಿಶ್ವೇಶ್ವರಯ್ಯ, ಅರುಣ್‌ ನವದೆಹಲಿ, ಕಾಂಗ್ರೆಸ್ ಮುಖಂಡರಾದ ಪಿ. ಎ. ಮಂಜಣ್ಣ, ಯುವರಾಜ್, ಮಖಾನ್‌ ವಿನೋದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಎನ್. ಲೋಕೇಶ್, ಪುರಸಭಾ ಅಧ್ಯಕ್ಷ ಮೋಹನ್, ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಿ, ಭರತ್‌ಗೌಡ, ಮೀಸೆಮಂಜಣ್ಣ, ಶಿವಣ್ಣಸೊಪ್ಪಿನಹಳ್ಳಿ, ಮುರಾರ್ಜಿ ಮಂಜಣ್ಣ, ಶಂಕರಚಾರ್, ಜಗದೀಶ್‌ ಕೆರೆಬೀದಿ, ಗಂಗಾಧರ್‌ ಪರಮ, ರವಿದಮ್ಮನಿಂಗಲ, ಜಬೀಉಲ್ಲಾಬೇಗ್, ಜಾವಿದ್, ಅನ್ನು, ಮಾಜಿ ಸೈನಿಕ ದೇವರಾಜ್, ಯಶೋಧ ಜೈನ್, ಪ್ರೇಮಮ್ಮ, ಸಾವಿತ್ರಿ, ದ್ರಾಕ್ಷಾಯಿಣಿ ಮತ್ತಿತರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ