ಹಾನಗಲ್ಲ: ಭಾರತದ ಸೈನಿಕರ ಸಾಹಸ ಹಾಗೂ ದೇಶದ ರಕ್ಷಣೆಗೆ ಬದ್ಧರಾಗಿ ಎದೆಗೊಟ್ಟು ನಿಂತಿರುವುದನ್ನು ಬೆಂಬಲಿಸಿ ತಾಲೂಕು ಬಿಜೆಪಿ ಘಟಕ ಆಡೂರಿನಲ್ಲಿ ಆಯೋಜಿಸಿದ ತಿರಂಗಾ ಯಾತ್ರೆಯಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಶ್ರೀಗಳನ್ನೊಳಗೊಂಡು ಹಲವು ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು.ಮಂಗಳವಾರ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಕಾರ್ಯಕರ್ತರನ್ನೊಳಗೊಂಡು ಆಡೂರಿನ ವಿರಕ್ತಮಠದಿಂದ ತಿರಂಗಾ ಯಾತ್ರೆ ನಡೆಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು, ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಾವೆಲ್ಲರೂ ನಿಲ್ಲೋಣ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮಿಗಳು, ಹಿರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡಪಂಡಿತಾರಾಧ್ಯ ಸ್ವಾಮೀಜಿ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಭೋಜರಾಜ ಕರೂಡಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಸಿದ್ದಲಿಂಗಪ್ಪ ಶಂಕ್ರಕೊಪ್ಪ, ಕಲ್ಯಾಣಕುಮಾರ ಶೆಟ್ಟರ, ಚಂದ್ರಪ್ಪ ಹರಿಜನ, ಶಿವಲಿಂಗಪ್ಪ ತಲ್ಲೂರ, ಸಂತೋಷ ಭಜಂತ್ರಿ, ಸಚಿನ ರಾಮಣ್ಣನವರ, ವಿಜೇಂದ್ರ ಕನವಳ್ಳಿ, ನಿಜಲಿಂಗಪ್ಪ ಮುದೆಪ್ಪನವರ, ಬಸವರಾಜ ಹಾದಿಮನಿ, ಮನೋಜ ದೇಸಾಯಿ, ಸುನೀಲ ಹಿರೇಮಠ ಮೊದಲಾದವರು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಹಿರೇಕೆರೂರಿನಲ್ಲಿ ತಿರಂಗಾ ಯಾತ್ರೆ
ಹಿರೇಕೆರೂರು: ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಹಿನ್ನೆಲೆ ಹಾಗೂ ರಾಷ್ಟ್ರ ರಕ್ಷಣೆಗಾಗಿ ದೇಶಭಕ್ತ ನಾಗರಿಕರ ವೇದಿಕೆಯಡಿ ಪಟ್ಟಣದಲ್ಲಿ ಮಂಗಳವಾರ ಬೃಹತ್ ತಿರಂಗಾ ಯಾತ್ರೆ ನಡೆಯಿತು.200 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಪಟ್ಟಣದ ಸರ್ವಜ್ಞ ಸರ್ಕಲ್‌ನಿಂದ ಆರಂಭವಾದ ತಿರಂಗಾ ಯಾತ್ರೆ ಜಿ.ಬಿ. ಶಂಕರರಾವ್ ವೃತ್ತದವರೆಗೆ ಸಾಗಿತು.ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನರು ಆಗಮಿಸಿ ಯಾತ್ರೆಯಲ್ಲಿ ಪಾಲ್ಗೊಂಡರು. ಪಟ್ಟಣದ ರಸ್ತೆಗಳಲ್ಲಿ ಜನಸಾಗರವೇ ಹರಿದುಬಂದಿತ್ತು.ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ದೇಶದ ಸಾರ್ವಭೌಮತ್ವದ ಪ್ರಶ್ನೆ ಬಂದಾಗ ಜಾತಿ, ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ದೇಶದ ರಕ್ಷಣೆಗೆ ನಿಲ್ಲಬೇಕು. ಭಾರತೀಯರಾಗಿ ಇದು ನಮ್ಮ ಕರ್ತವ್ಯವೂ ಕೂಡ ಹೌದು. ನಮ್ಮ ದೇಶದ ಸೈನಿಕರು ದೇಶದ ಹಿರಿಮೆ ಹಾಗೂ ಗರಿಮೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಶತ್ರುಗಳು ದೇಶದೊಳಗೆ ನುಗ್ಗಿ ನಡೆಸಿದ ಹತ್ಯಾಕಾಂಡಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.ಯಾತ್ರೆಯಲ್ಲಿ ನ್ಯಾಯವಾದಿಗಳು, ನಿವೃತ್ತ ಸೈನಿಕರು, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.ಮುಖಂಡರಾದ ಗವಿಸಿದ್ದಪ್ಪ ದ್ಯಾಮಪ್ಪನವರ, ಎಸ್.ಎಸ್. ಪಾಟೀಲ, ಶಿವಕುಮಾರ ತಿಪ್ಪಶಟ್ಟಿ, ಪಾಲಾಕ್ಷಗೌಡ ಪಾಟೀಲ್, ಎನ್.ಎಂ. ಈಟೇರ, ಸೃಷ್ಟಿ ಪಾಟೀಲ, ದುರಗೇಶ ತಿರಕಪ್ಪಮವರ, ರುದ್ರಗೌಡ ಹುಲ್ಮನಿ, ಜಗದೀಶ ದೊಡ್ಡಗೌಡ್ರ, ರವಿಶಂಕರ ಬಾಳಿಕಾಯಿ, ರುದ್ರೇಶ ಬೆತ್ತೂರು, ಬಸವರಾಜ ಚಿಂದಿ, ಸಂಜೀವಯ್ಯ ಕಬ್ಬಿಣಕಂತಿಮಠ, ನಾಗರಾಜ ಬಣಕಾರ, ಮನೋಜ ಹಾರ‍್ನಳ್ಳಿ, ರಾಜು ತಿಪ್ಪಶಟ್ಟಿ, ಮಂಜುನಾಥ ಚಲವಾದಿ, ಮಹ್ಮದಣ್ಣ ವಡ್ಡಿನಕಟ್ಟಿ, ಲಕ್ಷ್ಮಣ ಪುಜಾರ, ಕುಬೇರಗೌಡ ಭರಮಣ್ಣನವರ, ಮಹೇಶ ಭರಮಗೌಡ್ರ, ಈರಣ್ಣ ಚಿಟೂರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.