ಬಸ್ತೀಪುರದ ನಂಜಯ್ಯನಕಟ್ಟೆಯ 75 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿ

KannadaprabhaNewsNetwork |  
Published : Mar 12, 2025, 12:51 AM IST
ಬಸ್ತಿಪುರವಾಡ್೯ನ ನಂಜಯ್ಯನ ಕಟ್ಟೆ. 75ಕುಟುಂಬಗಳಿಗೆ ಗೆ ಹಕ್ಕು ಪತ್ರ ವಿತರಣೆಗೆಸಕಾ೯ರದ ಗಮನ ಸೆಳೆದ  ಶಾಸಕ ಎ ಆರ್ ಕೖಷ್ಣಮೂತಿ೯  | Kannada Prabha

ಸಾರಾಂಶ

ನಗರಸಭೆ ವ್ಯಾಪ್ತಿಯಲ್ಲಿರುವ ಬಸ್ತೀಪುರ ವಾರ್ಡ್‌ಗೆ ಸೇರುವ ನಂಜನಯ್ಯನಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ತೀರಾ ಹಿಂದುಳಿದ ಕುಟುಂಬದವರು ವಾಸವಿದ್ದು ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಮಂದಾಗಬೇಕು, ಆ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭೆ ವ್ಯಾಪ್ತಿಯಲ್ಲಿರುವ ಬಸ್ತೀಪುರ ವಾರ್ಡ್‌ಗೆ ಸೇರುವ ನಂಜನಯ್ಯನಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ತೀರಾ ಹಿಂದುಳಿದ ಕುಟುಂಬದವರು ವಾಸವಿದ್ದು ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಮಂದಾಗಬೇಕು, ಆ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.ನಂಜಯ್ಯನ ಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ಹಿಂದುಳಿದ ಸಮಾಜದ 75ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು ಅವರ ರಕ್ಷಣೆ, ಅನಕೂಲ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಬೇಕು, ಈ ಸಂಬಂಧ ಆ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಶಾಸಕರು ಸಭೆಯಲ್ಲಿ ಸುದೀರ್ಘವಾಗಿ ವಿಚಾರ ಪ್ರಸ್ತಾಪಿಸಿದರು.

ಈ ಸಂಬಂಧ ಕಂದಾಯ ಸಚಿವರ ಪರವಾಗಿ ಸದನದಲ್ಲಿ ಉಪ ಮುಖ್ಯಮಂತ್ರಿ ಉತ್ತರ ನೀಡಿದ್ದು ಈಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ವಾರ್ಡ್ ಸದಸ್ಯರಿಂದ ಶಾಸಕರಿಗೆ ಅಭಿನಂದನೆ:

ಈ ಭಾಗದ ನಗರಸಭೆ ಸದಸ್ಯನಾಗಿ ಈ ವಿಚಾರವನ್ನು ಶಾಸಕ ಕೃಷ್ಣಮೂರ್ತಿ ಗಮನಕ್ಕೆ ತಂದು ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದೆ. ಅದರಂತೆ ಶಾಸಕರು ಸದನದಲ್ಲಿ ನಂಜಯ್ಯನಕಟ್ಟೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಸಂಬಂಧಪಟ್ಟ ಸಚಿವರಿಂದಲೂ ಹಕ್ಕುಪತ್ರಕ್ಕೆ ಕ್ರಮ ಜರುಗಿಸುವ ಭರವಸೆ ದೊರೆತಿದೆ. ಈ ಭಾಗದ ಹಿಂದುಳಿದ ವರ್ಗಗಳ ಬವಣೆ ಕುರಿತು ಸದನದಲ್ಲಿ ಚರ್ಚಿಸಿದ ಶಾಸಕರಿಗೆ ಈ ಭಾಗದ ನಿವಾಸಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌