ಟಿಎಂಸಿಸಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಭ

KannadaprabhaNewsNetwork |  
Published : Sep 30, 2024, 01:20 AM IST
ಸಂಸ್ಥೆಯ ವಿಶಿಷ್ಟ ಸೇವೆಗೆ ಗೃಹ ಸಚಿವ ಡಾ.ಪರಮೇಶ್ವರ್ ಶ್ಲಾಘನೆ | Kannada Prabha

ಸಾರಾಂಶ

ತುಮಕೂರು: ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸಂಸ್ಥೆ ಎಟಿಎಂನಲ್ಲಿ ಚಿನ್ನದ ನಾಣ್ಯ ಪಡೆಯುವ ಗೋಲ್ಡ್ ಕಾಯಿನ್ ಎಟಿಎಂ ಸೇವೆಯನ್ನು ನಗರದಲ್ಲಿ ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಈ ವಿಶೇಷ ಸೇವೆಯು ಬೆಳೆಯುತ್ತಿರುವ ತುಮಕೂರು ನಗರಕ್ಕೆ ಪೂರಕವಾಗಿ ದೊಡ್ಡ ಬ್ರ್ಯಾಂಡ್‌ ಸೇವೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ತುಮಕೂರು: ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸಂಸ್ಥೆ ಎಟಿಎಂನಲ್ಲಿ ಚಿನ್ನದ ನಾಣ್ಯ ಪಡೆಯುವ ಗೋಲ್ಡ್ ಕಾಯಿನ್ ಎಟಿಎಂ ಸೇವೆಯನ್ನು ನಗರದಲ್ಲಿ ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಈ ವಿಶೇಷ ಸೇವೆಯು ಬೆಳೆಯುತ್ತಿರುವ ತುಮಕೂರು ನಗರಕ್ಕೆ ಪೂರಕವಾಗಿ ದೊಡ್ಡ ಬ್ರ್ಯಾಂಡ್‌ ಸೇವೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಭಾನುವಾರ ನಗರದ ಎಂ.ಜಿ.ರಸ್ತೆಯಲ್ಲಿ ಟಿಎಂಸಿಸಿಯ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಡಾ.ಪರಮೇಶ್ವರ್, ಎಟಿಎಂನಲ್ಲಿ ಚಿನ್ನದ ನಾಣ್ಯ ಪಡೆಯುವುದೆಂದರೆ ಇದೊಂದು ವಿಶಿಷ್ಟ, ವಿಶೇಷ ಸೇವೆ. ಪ್ರಪಂಚದಲ್ಲೇ ಮೊದಲ ಬಾರಿಗೆ ನಮ್ಮ ತುಮಕೂರಿನಲ್ಲಿ ಈ ಸೇವೆ ಒದಗಿಸಿದ ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಹಾಗೂ ತಂಡವನ್ನು ಅಭಿನಂದಿಸುತ್ತೇನೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಧುನಿಕ ಸೇವೆ ಒದಗಿಸಿದ ಇವರ ಕೊಡುಗೆ ಪ್ರಶಂಸನೀಯ ಎಂದರು. ತುಮಕೂರು ನಗರ ಬೆಂಗಳೂರಿನ ಭಾಗವಾಗಿ ಬೆಳವಣಿಗೆಯಾಗುತ್ತಿದೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಲ್ಲಿ ತುಮಕೂರು ನಗರವೂ ಅದರ ಭಾಗವಾಗಲಿದೆ. ಅದಕ್ಕೆ ಪೂರಕವಾಗಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ವಿಶೇಷವಾಗಿದೆ. ಇಂತಹ ಸೇವೆ ನನಗೆ ಆಶ್ಚರ್ಯ ಹಾಗೂ ಆನಂದ ತಂದಿದೆ ಎಂದು ಟಿಎಂಸಿಸಿಯ ಆಡಳಿತ ಮಂಡಳಿ ಸೇವಾಕಾರ್ಯವನ್ನು ಸಚಿವ ಡಾ.ಪರಮೇಶ್ವರ್ ಶ್ಲಾಘಿಸಿದರು.ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಮಾತನಾಡಿ, ಭಾರತದ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಟಿಎಂಸಿಸಿ ವತಿಯಿಂದ ನಗರದಲ್ಲಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಭಿಸಲಾಗಿದೆ. ಸಾಮಾನ್ಯ ಎಟಿಎಂಗಳಲ್ಲಿ ಹಣ ಪಡೆಯುವಂತೆ ಇಲ್ಲಿ ಚಿನ್ನದ ನಾಣ್ಯಗಳನ್ನು ಪಡೆಯಬಹುದು. ಅರ್ಧ ಗ್ರಾಂನಿಂದ ಹತ್ತು ಗ್ರಾಂವರೆಗೆ ಚಿನ್ನದ ನಾಣ್ಯಗಳನ್ನು ಗ್ರಾಹಕರಿಗೆ ಈ ಎಟಿಎಂನಲ್ಲಿ ಖರೀದಿ ಮಾಡಬಹುದು ಎಂದರು. ಸಾಮಾನ್ಯ ಗ್ರಾಹಕರೂ ಚಿನ್ನ ಖರೀದಿ ಮೂಲಕ ಉಳಿತಾಯ ಮಾಡಲು ಸಹಾಯವಾಗಲೆಂದು ಅರ್ಧ ಗ್ರಾಂ ತೂಕದ ನಾಣ್ಯಗಳನ್ನೂ ಎಟಿಎಂನಲ್ಲಿ ಕೊಳ್ಳುವ ಅವಕಾಶ ಮಾಡಲಾಗಿದೆ. ಅಂದಿನ ಮಾರುಕಟ್ಟೆ ಬೆಲೆಯಲ್ಲಿ ೨೪ ಕ್ಯಾರೆಟ್‌ನ ಚಿನ್ನ ಪಡೆಯಬಹುದು, ಗ್ಯಾರೇಂಟಿ ಕಾರ್ಡ್, ಚಿನ್ನ ಖರೀದಿಸಿದ ಬಿಲ್ ಪಡೆಯಬಹುದು ಎಂದು ಹೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದಾ ಅತ್ಯಾಧುನಿಕ ಸೇವೆ ನೀಡುತ್ತಾ ಬಂದಿರುವ ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಅವರು ಇಂದು ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಭಿಸಿದ್ದಾರೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರೊಂದಿಗೆ ತಮ್ಮ ಬ್ಯಾಂಕ್ ಬೆಳವಣಿಗೆಗೂ ಸಹಕಾರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿ ಗೋಲ್ಡ್ ಕಾಯಿನ್ ಎಟಿಎಂ ಸೇವೆಗೆ ಚಾಲನೆ ನೀಡಿ ಶುಭ ಆಶೀರ್ವಾದ ನೀಡಿದರು. ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಟಿಎಂಸಿಸಿಯ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ