ಜೈನ್ ಧರ್ಮದ ದೀಕ್ಷಾರ್ಥಿಗಳ ಅನುಮೋದನೆ ಸಮಾರಂಭ
ನಗರದ ಪಾರ್ಶ್ವನಾಥ ಜೈನ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಜೈನ್ ಧರ್ಮದ ದೀಕ್ಷಾರ್ಥಿಗಳ (ಮುಮುಕ್ಷಗಳು)ಅನುಮೋದನೆ ಸಮಾರಂಭದಲ್ಲಿ ಧರ್ಮೋಪದೇಶದ ಪ್ರವಚನದಲ್ಲಿ ಅವರು ಮಾತನಾಡಿದರು.
ಜೈನ ಧರ್ಮದಲ್ಲಿ ಸನ್ಯಾಸ ದೀಕ್ಷೆ ಮಹತ್ವದ್ದಾಗಿದೆ. ಆಸ್ತಿ, ಅಂತಸ್ತು ಸಂಸಾರವನ್ನು, ಐಷಾರಾಮಿ ಜೀವನವನ್ನು ತ್ಯಜಿಸಿ ಲೋಕ ಕಲ್ಯಾಣಾರ್ಥವಾಗಿ ಧರ್ಮ ಗುರು, ಮುನಿಗಳಿಂದ ದೀಕ್ಷೆ ಪಡೆದು ಲೋಕ ಸಂಚಾರ ಮಾಡುತ್ತ ಧರ್ಮ ಪ್ರಚಾರ, ಭಕ್ತರಿಗೆ ಬೋಧನೆ ಮಾಡುವುದಾಗಿದೆ ಎಂದರು.ಜೈನ್ ಧರ್ಮ, ತತ್ವ ಸಿದ್ಧಾತಗಳಿಂದ ಪ್ರೇರೇಪಿತರಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಪಡೆಯಲು ಕುಟುಂಬದವರ ಅನುಮತಿಯೊಂದಿಗೆ ಮುಂದಾಗಿರುವ ಮುಮುಕ್ಷಗಳು ಧರ್ಮ ಕಾರ್ಯ ಕೈಗೊಂಡು ಭಕ್ತರಿಗೆ ಧರ್ಮೋದೇಶ ಮಾಡಲಿ ಧರ್ಮ ಪ್ರಚಾರಕ್ಕಾಗಿ ಬಿಟ್ಟು ಕೊಟ್ಟ ಇವರ ಪಾಲಕರ ತ್ಯಾಗವೂ ಸಹ ದೊಡ್ಡದು ಎಂದರು.
ಗದುಗಿನ ಮೊಮ್ಮಳಾದ ರುನಾಲಕುಮಾರ ಕೋಠಾರಿ ೨೦೨೪ ಜನವರಿ ೨೮ರಂದು ಹುಬ್ಬಳ್ಳಿಯಲ್ಲಿ ಜೈನ್ ಗುರುಗಳಾದ ಆಚಾರ್ಯ ಅಜೀತಶೇಖರ ಸುರಿಶ್ವರಜೀ ಮಹಾರಾಜರ ಸಾನಿಧ್ಯದಲ್ಲಿ ದೀಕ್ಷೆ ಪಡೆಯಲಿದ್ದಾರೆ. ವಿನಿತ್‌ಕುಮಾರ ಪರಮಾರ ೨೦೨೪ ಜನವರಿ ೧೫ರಂದು ಕರಾಡ್‌ದಲ್ಲಿ ದೀಕ್ಷೆ ಪಡೆಯಲಿದ್ದಾರೆ ಎಂದರು.
ಈ ವೇಳೆ ವಿಗ್ನಾಯಣಪ್ರಭಾ ಸುರೀಶ್‌ವರ್ಜಿ.ಎಂ.ಎಸ್., ಸಾಧ್ವಿ ಅರಿಹಂತಪ್ರಭಾಶ್ರೀಜೀ. ಎಂ.ಎಸ್., ಪರಾಗಪ್ರಭಾಶ್ರೀ ಎಂ.ಎಸ್., ವಿಮಲಾಬಾಯಿ ಮಿಲಾಪಚಂದ ಕೊಠಾರಿ, ಜಯಶ್ರೀ ಲಲಿತಕುಮಾರ ಕೊಠಾರಿ, ಸಾರಿಕಾ ಈಶ್ವರಚಂದ ಪರಮಾರ, ರಾಣಮಲ್ಲ ಸೋಳಂಕಿ, ನರಭಯಲಾಲಜಿ ಹುಂಡಿಯಾ, ಪ್ರಕಾಶ ಬಾಫಣಾ, ಅಶೋಕ ಜೈನ್, ಚಂದ್ರಕಾಂತ ಜೈನ್, ಸುರೇಶ ಕೋಠಾರಿ, ನರೇಶ ಜೈನ್, ಸುರೇಶ ಓಸವಾಲ, ಪ್ರಕಾಶ ಶಹಾ, ಜೀತೇಂದ್ರ ಶಹಾ ಸೇರಿದಂತೆ ಜೈನ್ ಸಮಾಜ ಬಾಂಧವರು ಇದ್ದರು. ಪ್ರಾಚಿ ಜೈನ್ ಸ್ವಾಗತಿಸಿ, ನಿರೂಪಿಸಿದರು. ತನುಜಾ ಜೈನ್ ಪರಿಚಯಿಸಿದರು. ದಿಲೀಪ ಜೈನ್ ವಂದಿಸಿದರು.