ಧಾರವಾಡ:
ಸಾಹಿತಿಗಳಾದ ಧಾರವಾಡದ ಡಾ. ವೀಣಾ ಶಾಂತೇಶ್ವರ ಮತ್ತು ತುಮಕೂರಿನ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಅಂಬಿಕಾತಯನಯದತ್ತ (ತಲಾ ₹ 50 ಸಾವಿರ ನಗದು) ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರದಾನ ಮಾಡಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಭಾಗವಹಿಸುವರು. ಪ್ರಶಸ್ತಿ ಪುರಸ್ಕೃತರಾದ ಡಾ. ವೀಣಾ ಶಾಂತೇಶ್ವರ ಕುರಿತು ಕಲಬುರಗಿ ಕೇಂದ್ರೀಯ ವಿವಿ ಅಧ್ಯಯನಾಂಗ ನಿರ್ದೇಶಕ ಪ್ರೊ. ಬಸವರಾಜ ಡೋಣೂರು ಅಭಿನಂದನಾಪರ ನುಡಿ ಮಾಡುವರು. ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕುರಿತು ಸಹಪ್ರಾಧ್ಯಾಪಕ ಡಾ. ಎಚ್.ಬಿ. ಕೊಲ್ಕಾರ ಅಭಿನಂದನಾಪರ ನುಡಿ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.