ಸಿಂಧನೂರು: ನಗರದ ಟೌನ್ ಹಾಲ್‌ನಲ್ಲಿ ಭಾನುವಾರ ಸಾಹಿತ್ಯ ದಸರಾ ಮಹೋತ್ಸವದ ಪ್ರಯುಕ್ತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಜಾನಪದ ಕಲಾ ತಂಡಗಳಿಂದ ಗಾಯನ ನಡೆಯಲಿವೆ. ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಆಯ್ದ 25 ಕವಿಗಳ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಸ್ಕಿಯ ಹಿರಿಯ ಸಾಹಿತಿ ಸಿ.ದಾನಪ್ಪ ವಹಿಸುವರು. ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ದೇವಿಂದ್ರಪ್ಪ ಜಾಜಿ ಉದ್ಘಾಟಿಸಲಿದ್ದಾರೆ. ಗಂಗಾವತಿಯ ಸಾಹಿತಿ ರಮೇಶ್ ಗಬ್ಬೂರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ ಕಾವ್ಯ ಪ್ರತಿಕ್ರಿಯೆ ನೀಡುವರು. ಸಹ ಪ್ರಾಧ್ಯಾಪಕ ಡಾ.ಕೆ.ಖಾದರ್ಬಾಷಾ ಆಶಯ ನುಡಿಗಳನ್ನಾಡಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ.