ನವಲಗುಂದ: ಶ್ರೀ ಕೃಷ್ಣ ಕಲ್ಯಾಣ ಕೇಂದ್ರ ಹಾಗೂ ಜನತಾ ಬಜಾರ ಸಹಯೋಗದೊಂದಿಗೆ ಕೆ.ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ವಿವಿಧ ಕಟ್ಟಡಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ಸಮಾರಂಭ ಮಾ. 9ರಂದು ಸಂಜೆ 4ಕ್ಕೆ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಿ.ಡಿ. ಅಧಾನಗೌಡ್ರ ಹೇಳಿದರು.
ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಆರ್.ಎಚ್. ಕೋನರಡ್ಡಿ ಮಾತನಾಡಿ, ಪಟ್ಟಣದಲ್ಲಿರುವ ಶ್ರೀ ಕೃಷ್ಣಾ ಪ್ರಾಥಮಿಕ ಶಾಲೆ ನೂತನ ಕೊಠಡಿ, ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ಜನತಾ ಬಜಾರ ನೂತನ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ ಭವನ, ಗಾಂಧಿ ಭವನ, ಶ್ರೀ ಎಚ್.ಕೆ.ಜಿ.ಕೆ. ಕೋನರಡ್ಡಿ ಸರ್ಕಾರಿ ಪಿ.ಯು. ಕಾಲೇಜು (ಕೆಪಿಎಸ್) ಚಿಲಕವಾಡ ಸೇರಿದಂತೆ ವಿವಿಧ ಕಟ್ಟಡಗಳಿಗೆ ಸಚಿವ ಎಚ್.ಕೆ. ಪಾಟೀಲ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸುವರು ಎಂದರು.
ಶಾಸಕ ಎನ್. ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಬಿ.ಆರ್. ಯಾವಗಲ್, ರಡ್ಡಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಫರಿದಾಬೇಗಂ ಬಬರ್ಚಿ, ವೇಮನ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಆರ್.ಟಿ. ಜಂಗಲ, ವಿ.ಡಿ. ಕಾಮರಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಭೂಮಣ್ಣವರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಎಚ್.ಎನ್. ಲಿಂಗರಡ್ಡಿ, ಪಾಂಡಪ್ಪ ಚವ್ವನವರ, ಮುದ್ದಣ್ಣ ನಡುವಿನಮನಿ, ಸದುಗೌಡ ಪಾಟೀಲ, ಸಂಜೀವ ರಾಯರಡ್ಡಿ, ಪಾಂಡು ಮೇಟಿ, ನಿಂಗಪ್ಪ ಕಿರೇಸೂರ, ಪ್ರಹ್ಲಾದರಡ್ಡಿ ಇನಾಮತಿ, ಶ್ರೀನಿವಾಸರಡ್ಡಿ ಬೂದಿಹಾಳ, ಶೇಶರಡ್ಡಿ ಚಾಲಕಬ್ಬಿ, ದೇವರಡ್ಡಿ ಸಾಸ್ವಿಹಳ್ಳಿ ಸೇರಿದಂತೆ ಹಲವರಿದ್ದರು.