ಇಂದು ವೃತ್ತಿ ರಂಗಭೂಮಿ ರಂಗಾಯಣ ಚಟುವಟಿಕೆಗೆ ನಾಂದಿ

KannadaprabhaNewsNetwork | Published : Sep 15, 2024 1:47 AM

ಸಾರಾಂಶ

ವೃತ್ತಿ ರಂಗಭೂಮಿ ದಾವಣಗೆರೆ ರಂಗಾಯಣದ 2024- 2025ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮ ಸೆ.15ರಂದು ನಗರದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಹೇಳಿದ್ದಾರೆ.

- ರಂಗಜ್ಯೋತಿ ಬೆಳಗಲಿರುವ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ: ಮಲ್ಲಿಕಾರ್ಜುನ ಕಡಕೋಳ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ವೃತ್ತಿ ರಂಗಭೂಮಿ ದಾವಣಗೆರೆ ರಂಗಾಯಣದ 2024- 2025ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮ ಸೆ.15ರಂದು ನಗರದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬೆಳಗ್ಗೆ 10.30ಕ್ಕೆ ‘ವರ್ತಮಾನದ ವೃತ್ತಿ ರಂಗಭೂಮಿ ಬಿಕ್ಕಟ್ಟು ಮತ್ತು ಪರಿಹಾರ’ ವಿಷಯವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣವು ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ. ಷೇಕ್ ಮಾಸ್ತರ್ ಅಧ್ಯಕ್ಷತೆಯಲ್ಲಿ ಖ್ಯಾತ ರಂಗ ನಿರ್ದೇಶಕ ಸಿ.ಬಸವಲಿಂಗಪ್ಪ ದಿಕ್ಸೂಚಿ ನುಡಿಗಳನ್ನಾಡುವರು ಎಂದು ಹೇಳಿದರು.

ಡಾ.ಪ್ರಕಾಶ ಗರುಡ ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ, ಬಸವರಾಜ ಬೆಂಗೇರಿ ಸಾಹಿತ್ಯ ಮತ್ತು ಸಂಗೀತ, ಅರುಣ ಸಾಗರ್‌ ರಂಗ ಪರಿಕರ ಮತ್ತು ರಂಗ ಸಜ್ಜಿಕೆ ವಿಷಯ ಮಂಡನೆ ಮಾಡುವರು. ಅನೇಕ ರಂಗಕರ್ಮಿಗಳು, ನಟಕರು ಭಾಗವಹಿಸುವರು. ಸಂಜೆ 4 ಗಂಟೆಗೆ ನಾಂದಿ- ಆರಂಭೋತ್ಸವದ ಸಾನಿಧ್ಯವನ್ನು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸುವರು ಎಂದು ಹೇಳಿದರು.

ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ರಂಗಜ್ಯೋತಿ ಬೆಳಗುವರು. ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್‌, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ವಿಪ ಮಾಜಿ ಸದಸ್ಯ ಕೊಂಡಜ್ಜಿ ಮೋಹನಕುಮಾರ, ರಂಗಭೂಮಿ ನಟರಾದ ರಾಜು ತಾಳಿಕೋಟೆ, ಚಿಂದೋಡಿ ಶ್ರೀಕಂಠೇಶ್‌, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಇತರರು ಭಾಗವಹಿಸುವರು ಎಂದರು.

ಸಂಜೆ 6 ಗಂಟೆಗೆ ಗದಗಿನ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಪ್ರಸ್ತುತಪಡಿಸುವ ಅಕ್ಕ ಮಹಾದೇವಿ ನಾಟಕವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸುವರು. ಎಸ್‌ಪಿ ಉಮಾ ಪ್ರಶಾಂತ ಉಪಸ್ಥಿತರಿರುವರು. ರಂಗಾಯಣದ ಪ್ರಸಕ್ತ ಸಾಲಿನ ಕಾರ್ಯಕ್ರಮ, ಚಟುವಟಿಕೆಗಳ ಚಾಲನೆ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ, ರಂಗಗೀತೆಗಳ ಗಾಯನ, ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ಈ ಸಂದರ್ಭ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ನೀಲಗುಂದ ಬಸವನಗೌಡ ಇತರರು ಇದ್ದರು.

- - - ಬಾಕ್ಸ್‌ * 3 ಎಕರೆಯಲ್ಲಿ ವಸ್ತು ಸಂಗ್ರಹಾಲಯ ವೃತ್ತಿ ರಂಗಭೂಮಿ ದಾವಣಗೆರೆ ರಂಗಾಯಣದ ಮೂಲಕ ಹಲವಾರು ಅಲ್ಪಾವಧಿ ಮತ್ತು ದೀರ್ಘಾವಧಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಸರ್ಕಾರ ನೀಡಿರುವ 10 ಎಕರೆ ಜಾಗದ ಪೈಕಿ, 3 ಎಕರೆಯಲ್ಲಿ ರಂಗಭೂಮಿ ನಡೆದು ಬಂದ ದಾರಿಯ ಕುರಿತಂತೆ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು. ಶಾಲಾ-ಕಾಲೇಜುಗಳಲ್ಲಿ ರಂಗ ಸಂಗೀತ ತರಬೇತಿ, ಕಲಿಸುವಿಕೆ ಮತ್ತು ಅಭಿನಯಿಸುವಿಕೆ ತರಬೇತಿ, ವರ್ಷಕ್ಕೆ ಅಭಿಜಾತ ಪರಂಪರೆ ಬಿಂಬಿಸುವ ಕನಿಷ್ಠ 3 ನಾಟಕಗಳ ರಚನೆ ಇತರೆ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಿಕಾರ್ಜುನ ಕಡಕೋಳ ಹೇಳಿದರು.

- - - -12ಕೆಡಿವಿಜಿ4:

ಸುದ್ದಿಗೋಷ್ಠಿಯಲ್ಲಿ ವೃತ್ತಿ ರಂಗಭೂಮಿ ದಾವಣಗೆರೆ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿದರು.

Share this article