ಇಂದು ನಿಧಿಲ್ಯಾಂಡ್‌ನ 2 ಐಷಾರಾಮಿ ವಸತಿ ಸಮುಚ್ಚಯ ಶಿಲಾನ್ಯಾಸ

KannadaprabhaNewsNetwork | Published : Apr 30, 2025 12:32 AM

ಸಾರಾಂಶ

ನಿಧಿ ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಇಂಡಿಯಾ ಪ್ರೈ.ಲಿ.ನಿಂದ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯಗಳಾದ ಸ್ಕೈ ಗಾರ್ಡನ್ ಮತ್ತು ಪೂರ್ವಜ್ ಶಿಲಾನ್ಯಾಸ ಸಮಾರಂಭ ಬುಧವಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿ ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಇಂಡಿಯಾ ಪ್ರೈ.ಲಿ.ನಿಂದ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯಗಳಾದ ಸ್ಕೈ ಗಾರ್ಡನ್ ಮತ್ತು ಪೂರ್ವಜ್ ಶಿಲಾನ್ಯಾಸ ಸಮಾರಂಭ ಬುಧವಾರ ನಡೆಯಲಿದೆ.

ಸ್ಕೈ ಗಾರ್ಡನ್ ಮಂಗಳೂರಿನ ಲೇಡಿಹಿಲ್- ಚಿಲಿಂಬಿ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಇದು 33 ಮಹಡಿಗಳ ಅತ್ಯಾಧುನಿಕ ಸೌಲಭ್ಯಯುಳ್ಳ ಐಶಾರಾಮಿ ವಸತಿ ಸಮುಚ್ಚಯ. ಕೆಳಗಿನ ಹಾಗೂ ಮೇಲಿನ ತಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್ ಮತ್ತು ಮೇಲಿನ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಸೌಲಭ್ಯಗಳನ್ನು ಒಳಗೊಂಡಿದೆ. ವಿಶಾಲವಾದ ೩ ಬಿಎಚ್‌ಕೆ, ೪ ಬಿಎಚ್‌ಕೆ ಹಾಗೂ ೫ ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ಹಾಗೂ ಎರಡು ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ಗ್ರಾಹಕರ ಆದ್ಯತೆಗೆ ಅನುಗುಣವಾಗಿ ನಿರ್ಮಿಸಲಾಗುವುದು.

ಅಲ್ಲದೆ ಝೆನ್ ರೂಂ, ಯೋಗ, ಮಕ್ಕಳ ಅಧ್ಯಯನ ಕೊಠಡಿ, ಮಕ್ಕಳ ಆಟದ ಪ್ರದೇಶ, ವಾಕಿಂಗ್/ ಜಾಗಿಂಗ್ ಟ್ರಾಕ್, ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಟೇಬಲ್, ಚೆಸ್, ಕ್ಯಾರಮ್, ಕಾರ್ಡ್ಸ್ ರೂಮ್, ಮಿನಿ ಥಿಯೇಟರ್, ಸೌನಾ ಸ್ಟೀಮ್ ರೂಂ, ಜಕುಜಿ, ಕಟ್ಟಡದ ಪ್ರವೇಶದ್ವಾರದ ಬಳಿ ನೀರಿನ ಫೌಂಟೇನ್ ಹೊಂದಿರುವ ವೈಶಿಷ್ಟಯುತ ಗೋಡೆಗಳು, ಸಮ್ಮೇಳನ ಸಭಾಂಗಣ ಮತ್ತು ಇನ್ನೂ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುತ್ತವೆ.

ಪೂರ್ವಜ್ ವಸತಿ ಸಮುಚ್ಚಯ ಶಿವಬಾಗ್‌ನಲ್ಲಿ ನಿರ್ಮಾಣಗೊಳ್ಳಲಿದ್ದು, ತಳ ಮತ್ತು ಕೆಳಗಿನ ನೆಲ ಅಂತಸ್ತಿನಲ್ಲಿ ಕಾರ್ ಪಾರ್ಕ್ ಸೌಲಭ್ಯ ಹಾಗೂ ಮೇಲಿನ ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್, ಉಳಿದ ೧೨ ಮಹಡಿಗಳಲ್ಲಿ ವಿಶಿಷ್ಟ ೪ ಬಿಎಚ್‌ಕೆ ಗೃಹಗಳನ್ನು ಹೊಂದಿರುತ್ತದೆ. ಪೂರ್ವಜ್‌ನಲ್ಲೂ ರೂಫ್‌ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಬಿಲಿಯರ್ಡ್ಸ್ ಟೇಬಲ್, ಚೆಸ್/ ಕ್ಯಾರಮ್/ ಇತರ ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಜಿ, ಸಮ್ಮೇಳನ ಸಭಾಂಗಣ ಮುಂತಾದ ಆಧುನಿಕ ಸೌಲಭ್ಯಗಳು ಸಿದ್ಧಗೊಳ್ಳಲಿವೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಸಂಸ್ಥೆಯ ಬಗ್ಗೆ ಮತ್ತು ಸಂಸ್ಥೆಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಜಾಲತಾಣ nidhiland.com ಸಂಪರ್ಕಿಸಬಹುದು.

Share this article