ಕಾನಿಪ ಸಂಘದ ಸರ್ವ ಸದಸ್ಯರ ಮಹಾಸಭೆ ಇಂದು

KannadaprabhaNewsNetwork |  
Published : Sep 13, 2024, 01:32 AM IST
12ಕೆಡಿವಿಜಿ15-ದಾವಣಗೆರೆಯಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಧ್ಯಮ ಮಾಣಿಕ್ಯ ಪ್ರಶಸ್ತಿಗೆ ಪಾತ್ರರಾದ ಮಾಧ್ಯಮ ಸಿಬ್ಬಂದಿ .............12ಕೆಡಿವಿಜಿ16-ದಾವಣಗೆರೆಯಲ್ಲಿ ಗುರುವಾರ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಕುವೆಂಪು ಕನ್ನಡ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಾವಣಗೆರೆ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಸೆ.13 ರಂದು ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದ್ದು, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ವಾರ್ಷಿಕ ವರದಿ ಮಂಡಿಸಲಿದ್ದು, ಖಜಾಂಚಿ ಎನ್.ವಿ.ಬದರೀನಾಥ ಲೆಕ್ಕಪತ್ರ ಮಂಡಿಸುವರು ಎಂದು ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಇ.ಎಂ.ಮಂಜುನಾಥ ಅಧ್ಯಕ್ಷತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಶಿವಮೊಗ್ಗ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಅನುಸೂಯಾಜಿ ಸಾನ್ನಿಧ್ಯದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.

ಎಸ್.ಮಲ್ಲಿಕಾರ್ಜುನ ಸಾಧಕರಿಗೆ ಗೌರವಾರ್ಪಣೆ ಮಾಡುವರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು. ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ವಿಶೇಷ ಉಪನ್ಯಾಸ ನೀಡುವರು ಎಂದು ಹೇಳಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ, ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಪತ್ರಿಕೆ ತಯಾರಿ ಹಿಂದಿರುವ ಎಲ್ಲಾ 8 ವಿಭಾಗಗಳಿಂದ ಒಬ್ಬೊಬ್ಬರಂತೆ ಹಿರಿಯ ಶ್ರಮಿಕರಿಗೆ ‘ಮಾಧ್ಯಮ ಮಾಣಿಕ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ದಾವಣಗೆರೆ ಜಿಲ್ಲೆಯ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ತಲಾ 1 ಸಾವಿರ ರು. ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ದಾವಣಗೆರೆ ವಿವಿ ಬಿ.ಎಸ್.ಸಿ. ಪಠ್ಯಕ್ಕೆ ಹಿರಿಯ ಪತ್ರಕರ್ತರೂ ಆದ ಸಾಹಿತಿ ಬಿ.ಎನ್.ಮಲ್ಲೇಶ್‌ರರ ‘ಉತ್ತರೆ ಮಳೆ’ ಕವಿತೆ ಆಯ್ಕೆಯಾಗಿದ್ದು, ದಾವಣಗೆರೆ ವಿವಿ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಪಾತ್ರರಾದ ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ, ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ, ‘ಕನ್ನಡಪ್ರಭ’ ಜಿಲ್ಲಾ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್, ಸಂಘದ ಚನ್ನಗಿರಿ ನೂತನ ಅಧ್ಯಕ್ಷ ವಿ. ಲಿಂಗರಾಜು ಅವರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್‌, ಖಜಾಂಚಿ ಎನ್.ವಿ.ಬದರೀನಾಥ, ಉಪಾಧ್ಯಕ್ಷ ಆರ್.ಎಸ್.ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಜೆ.ಎಸ್.ವೀರೇಶ, ಬಿ.ಚನ್ನವೀರಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಪಿ.ಸಂಜಯ್‌, ಸಿ.ವೇದಮೂರ್ತಿ ಇತರರು ಇದ್ದರು.

ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪುರಸ್ಕೃತರು

ಮುದ್ರಣ ಮಾಧ್ಯಮ ವಿಭಾಗದಿಂದ ‘ಸಂಯುಕ್ತ ಕರ್ನಾಟಕ’ದ ಹಿರಿಯ ಉಪ ಸಂಪಾದಕ ಮಂಜುನಾಥ ಪಿ.ಕಾಡಜ್ಜಿ, ವಿದ್ಯುನ್ಮಾನ ಮಾಧ್ಯಮದಿಂದ ಟಿವಿ-9 ಜಿಲ್ಲಾ ಹಿರಿಯ ವರದಿಗಾರ ಬಸವರಾಜ ದೊಡ್ಮನಿ, ಛಾಯಾಗ್ರಹಣ ವಿಭಾಗದಲ್ಲಿ ‘ಸುವರ್ಣ ಟೈಮ್ಸ್ ಆಫ್‌ ಕರ್ನಾಟಕ’ದ ವಿಜಯಕುಮಾರ ಜಾಧವ್, ಡಿಟಿಪಿ-ಡಿಸೈನರ್ ವಿಭಾಗದಲ್ಲಿ ‘ವಿಜಯ ಕರ್ನಾಟಕ’ದ ಕೆ.ಜೆ. ದಾನೇಶ್, ಕಚೇರಿ ಸಿಬ್ಬಂದಿ ವಿಭಾಗದಲ್ಲಿ ‘ಜನತಾವಾಣಿ’ ಕರಡು ತಿದ್ದುಪಡಿಯ ಎಚ್.ನಿಂಗಪ್ಪ, ಜಾಹೀರಾತು ವಿಭಾಗದಿಂದ ಶ್ವೇತಾ, ಅಡ್ವರ್ಟೈಸರ್ಸ್‌ನ ಎಚ್‌.ಜಿ.ರುದ್ರೇಶಿ ಕೋಲ್ಕುಂಟೆ, ಮುದ್ರಣ ವಿಭಾಗದಿಂದ ‘ನಗರವಾಣಿ’ಯ ಎಸ್.ಎನ್.ಮಹೇಶ ಕಾಶೀಪುರ, ಪತ್ರಿಕೆ ವಿತರಣಾ ವಿಭಾಗದಲ್ಲಿ ಹಿರಿಯ ಪತ್ರಿಕಾ ವಿತರಕ ಟಿ.ಕೆ. ದಿನೇಶ್ ಬಾಬು ಅವರಿಗೆ ಮಾಧ್ಯಮ ಮಾಣಿಕ್ಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಲೂಕು ಘಟಕಗಳಿಂದ ಮಾಧ್ಯಮ ಮಾಣಿಕ್ಯ ಪ್ರಶಸ್ತಿಗೆ ಹರಿಹರದ ‘ಪ್ರಜಾವಾಣಿ’ ಯ ಇನಾಯತ್‌ವುಲ್ಲಾ, ಹೊನ್ನಾಳಿ ಜನತಾವಾಣಿಯ ಎಚ್.ಸಿ.ಮೃತ್ಯುಂಜಯ ಪಾಟೀಲ, ಜಗಳೂರಿನ ನನ್ನ ಮಿತ್ರ ಸಂಪಾದಕ ಅಣಬೂರು ಮಠದ ಕೊಟ್ರೇಶ, ಚನ್ನಗಿರಿ ವಿಜಯವಾಣಿಯ ಟಿ.ಎನ್‌.ಜಗದೀಶ, ನ್ಯಾಮತಿ ವಿಜಯ ಕರ್ನಾಟಕದ ಎಂ.ಎಸ್.ಶಾಸ್ತ್ರಿ ಹೊಳಿಮಠರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇ.ಎಂ.ಮಂಜುನಾಥ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ