ಪಾವಗಡ: ಇದೇ ಡಿ.26ಕ್ಕೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ತಾಲೂಕಿನ ನಾಗಲಮಡಿಕೆ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 10ಗಂಟೆಗೆ ಸುಬ್ರಮಣ್ಯ ಸ್ವಾಮಿ ಅದ್ಧೂರಿ ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಬಳಿಕ ವಿವಿಧ ಪೂಜಾ ಕಾರ್ಯಗಳೊಂದಿಗೆ ದೇವರ ದರ್ಶನಪಡೆದು ಉಪವಾಸ ಬಿಡಲಿದ್ದಾರೆ.
ಈ ಕುರಿತು ರಾಜ್ಯ ರೈತ ಸಂಘದ ಅಧ್ಯಕ್ಷರಾದ ವಿ.ನಾಗಭೂಷಣ ರೆಡ್ಡಿ ಪ್ರತಿಕ್ರಿಯಿಸಿ, ಐತಿಹಾಸಿಕ ಹಿನ್ನೆಲೆಯ ಇಲ್ಲಿನ ಶ್ರೀ ಸ್ವಾಮಿಗೆ 400 ವರ್ಷಗಳ ಇತಿಹಾಸವಿದೆ. ಅಂತ್ಯ ಸುಬ್ರಮಣ್ಯಸ್ವಾಮಿ ಎಂದು ಖ್ಯಾತಿಗೆ ಒಳಪಟ್ಡಿದೆ. ನಾಗರ ಹಾವಿನ ರೀತಿ ಇರುವ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯಸ್ವಾಮಿ ತಲೆ. ಚಿಕ್ಕಬಳ್ಳಾಪುರದ ಶ್ರೀ ಸ್ವಾಮಿ ಮಧ್ಯ ಹಾಗೂ ಇಲ್ಲಿನ ನಾಗಲಮಡಿಕೆ ಶ್ರೀ ಸುಬ್ರಮಣ್ಯಸ್ವಾಮಿ ಅಂತ್ಯ, ಅಂದರೆ ಕೊನೆಯ ಭಾಗವಾಗಿದೆ. ಹೀಗಾಗಿ ಇಲ್ಲಿನ ದೇವಸ್ಥಾನವು ಅಂತ್ಯ ಸುಬ್ರಮಣ್ಯಸ್ವಾಮಿ ಎಂದು ಹೆಸರು ಗಳಿಸಿದೆ ಎಂದು ತಿಳಿಸಿದರು.ಸಕಲ ಸಿದ್ಧತೆ:
ಜಾತ್ರೆ ಪ್ರಯುಕ್ತ, ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಕೈಗೊಂಡಿದ್ದು, ಕುಡಿಯುವ ನೀರು, ದೇವಸ್ಥಾನದ ಮುಂಭಾಗ ಹರಿಯುವ ಉತ್ತರಪಿನಾಕಿನಿ ನದಿಯಲ್ಲಿ ಸ್ನಾನಕ್ಕೆ ವ್ಯವಸ್ಥೆ, ಭಕ್ತರು ಸರದಿ ಸಾಲಿನಲ್ಲಿ ತೆರಳಲು ಬ್ಯಾರಿಕೇಡ್ ನಿರ್ಮಾಣ ಸೇರಿ ಕಳ್ಳರ ಹಾವಳಿ ತಪ್ಪಿಸಲು ಬಿಗಿ ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಡಿಗಳ ನಿರ್ಮಾಣ ಇತರೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಎ.ರವಿ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹೋಗಿ ಬರಲು ಪಾವಗಡದಿಂದ ಪ್ರತಿ 10 ನಿಮಿಷಕ್ಕೊಮ್ಮೆ ಸರ್ಕಾರಿ ಸೌಲಭ್ಯ ಕಲ್ಪಿಸಲಾಗಿದೆ.-------
ಪೊಟೋ25ಪಿವಿಜಿ1ಪಾವಗಡ ತಾಲೂಕು ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯಸ್ವಾಮಿ