ಇಂದು ಪುಟ್ಟರಾಜ ಗುರು ಅಭಿಮಾನಿ ಭಕ್ತರ ಸಮಾವೇಶ

KannadaprabhaNewsNetwork |  
Published : May 12, 2024, 01:21 AM IST
ಕ್ಯಾಪ್ಷನಃ11ಕೆಡಿವಿಜಿ32ಃ ಗದುಗಿನ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳು | Kannada Prabha

ಸಾರಾಂಶ

ಸಾಧಕ ಸದಸ್ಯರುಗಳಿಗೆ ಗುರು ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ ಮತ್ತು ಗುರು ಸಾಹಿತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗದುಗಿನ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿಯಿಂದ ಪುಟ್ಟರಾಜ ಗುರು ಅಭಿಮಾನಿ ಭಕ್ತರ ಸಮಾವೇಶವನ್ನು ಮೇ 12ರಂದು ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಸಮಿತಿ ಗೌರವಾಧ್ಯಕ್ಷ ಅಣಬೇರು ಮಂಜಣ್ಣನವರ ಅಧ್ಯಕ್ಷತೆಯಲ್ಲಿ ಸಮಿತಿ ಮಹಾ ಪೋಷಕ ಪಿ.ಬಿ.ವಿನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಎಸ್.ಎಸ್.ಕೇರ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಅಭಾಶಸಾಪ ಅಧ್ಯಕ್ಷ ಬಿ.ಕೆ.ಪರಮೇಶ್ವರಪ್ಪ, ವೀರೇಶ್ವರ ಪುಣ್ಯಾಶ್ರಮದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ ಭಾಗವಹಿಸುವರು.

ರಾಜ್ಯಮಟ್ಟದ ಕವಿಗೋಷ್ಠಿ ಎಂಪಿಎಂ ಕೊಟ್ರಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಿತಿ ಸಂಸ್ಥಾಪಕರಾದ ಗದಗಿನ ವೇ.ಚನ್ನವೀರಸ್ವಾಮಿ ಹಿರೇಮಠ, ಜಿ.ಹಾಲೇಶ, ಮಮತಾ ನಾಗರಾಜ, ವಾಣಿ ಬಸವರಾಜ ಇತರರು ಪಾಲ್ಗೊಳ್ಳುವರು.

ಸಂಜೆ 4ಕ್ಕೆ ಸಮಾರೋಪ ಸಮಾರಂಭ ವೇ.ಚನ್ನವೀರಸ್ವಾಮಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದೇ ವೇಳೆ ಸಾಧಕ ಸದಸ್ಯರುಗಳಿಗೆ ಗುರು ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ ಮತ್ತು ಗುರು ಸಾಹಿತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಗೀತ ಶಿಕ್ಷಕ ಎಂ.ಕೆ.ರೇವಣಸಿದ್ದಪ್ಪ, ಶಿವರಾಜ ಹ. ಉಜ್ಜನಿ, ಡಾ.ಗೀತಾ ಸುತ್ತಕೋಟಿ, ಸೌಮ್ಯ ಸತೀಶ ಧಾರವಾಡ, ಗಿರಿಜಾ ವಿ.ಮುಳಗುಂದ, ಬಸವರಾಜ ಹಡಪದ ಹಳಿಯಾಳ, ಸರೋಜಿನಿ ಕಾ.ಮಾವಿನಮರ ಇಂಡಿ ಇವರಿಗೆ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸುಧಾ ಮಂಜುನಾಥ, ಬಸವರಾಜೇಶ್ವರಿ ಶಿರೂರ, ರಾಜಲಿಂಗಪ್ಪ ಸಜ್ಜನ, ಪ್ರಶಾಂತ ಸೊಕ್ಕೆ, ಅಕ್ಕಮಹಾದೇವಿ ಟಿ.ನೀರಲಗಿ ಇವರಿಗೆ ಸಾಹಿತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನಿಸಲಾಗುವುದು. ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಡಾ.ಅಥಣಿ ವೀರಣ್ಣ, ಕದಳಿ ವೇದಿಕೆಯ ಪ್ರಮೀಳಾ ನಟರಾಜ ಇತರರು ಭಾಗವಹಿಸುವರು.

ಪಂ.ರೇವಣಸಿದ್ಧಯ್ಯ ಹಿರೇಮಠ ಕಲಬುರ್ಗಿ, ಡಾ.ಸುಮಾ ಹಡಪದ ಹಳಿಯಾಳ ವಚನ ಸಂಗೀತ ನಡೆಸಿಕೊಡುವರು. ನಂತರ ಭಕ್ತಿಗೀತೆ, ಭರತನಾಟ್ಯ, ಕಿರು ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ