ಕನ್ನಡಪ್ರಭ ವಾರ್ತೆ ಮೂಲ್ಕಿ
2023-24ನೇ ಸಾಲಿನಲ್ಲಿ ಕಟೀಲು ಆರೂ ಮೇಳಗಳು 168 ದಿನಗಳ ಕಾಲ ತಿರುಗಾಟ ನಡೆಸಿ ಒಟ್ಟು 1,008 ಬಯಲಾಟಗಳನ್ನು ಪ್ರದರ್ಶಿಸಿದೆ. ಆರೂ ಮೇಳಗಳು ಈ ಬಾರಿಯ ತಿರುಗಾಟದಲ್ಲಿ ಒಟ್ಟು 554 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಿವೆ.
ಈ ಪೈಕಿ ಒಂದನೇ ಮೇಳ 80, ಎರಡನೇ ಮೇಳ 95, ಮೂರನೇ ಮೇಳ 105, ನಾಲ್ಕನೇ ಮೇಳ 89, ಐದನೇ ಮೇಳ 94, ಆರನೇ ಮೇಳ 91 ದೇವಿ ಮಹಾತ್ಮೆ ಪ್ರದರ್ಶನ ನೀಡಿವೆ.ಆರೂ ಮೇಳಗಳು ಈ ವರ್ಷ ಒಟ್ಟು 51 ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನ ನೀಡಿವೆ. ಈ ಪೈಕಿ 1ನೇ ಮೇಳ 12, 2ನೇ ಮೇಳ 7, 3ನೇ ಮೇಳ 11, 4ನೇ ಮೇಳ 6, 5ನೇ ಮೇಳ 5, 6ನೇ ಮೇಳ 10 ಕಡೆ ಕ್ಷೇತ್ರ ಮಹಾತ್ಮೆ ಪ್ರದರ್ಶಿಸಿವೆ.
20 ವರ್ಷಕ್ಕೆ ಬುಕ್ಕಿಂಗ್:
ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಯಕ್ಷ ಧರ್ಮ ಬೋಧಿನಿ ಟ್ರಸ್ಟ್ ಮೂಲಕ ಯಕ್ಷಗಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ತಳ ಮತ್ತಿತರ ವಿಧದಲ್ಲಿ ಬರುವ ಅನುದಾನದಲ್ಲಿನ ಉಳಿಕೆ ಮೊತ್ತವನ್ನು ಕಟೀಲಿನ ಎಲ್ಲಾ ಆರು ಮೇಳದ ಸುಮಾರು ೩೦೦ ಕಲಾವಿದರಿಗೆ ಆರು ತಿಂಗಳ ಕಾಲ ಮಾಸಿಕ ವೇತನ ರೂಪದಲ್ಲಿ ನೀಡಲಾಗುತ್ತಿದೆ.
ಕಟೀಲು ಯಕ್ಷಗಾನ ಮಂಡಳಿಯ ಎಲ್ಲಾ ಆರೂ ಮೇಳಗಳ 2023-24ನೇ ಸಾಲಿನ ತಿರುಗಾಟದ ಪ್ರಥಮ ಪ್ರದರ್ಶನ ಕಳೆದ ಡಿ.7ರಂದು ಕಟೀಲು ದೇವಿ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿ ರಥಬೀದಿಯಲ್ಲಿ ಏಕಕಾಲದಲ್ಲಿ ಆರು ಮೇಳಗಳ ಸೇವೆಯಾಟ ನಡೆಸುವ ಮೂಲಕ ಆರಂಭಗೊಂಡಿತ್ತು. ಡಿ.7ರಿಂದ ಮೇ 25 ರ ವರೆಗೆ ಒಟ್ಟು 171 ದಿನಗಳ ಪ್ರದರ್ಶನದಲ್ಲಿ ಕಟೀಲು ದೇವಳದ ರಥಬೀದಿಯಲ್ಲಿ ನಡೆದ ಡಿ.7 ರ ತಿರುಗಾಟದ ಆರಂಭ, ಏ.20ರಂದು ದೇವಳದ ಜಾತ್ರೆಯಂದು ಆರಾಟದ ರಜೆ ಹಾಗೂ ಮೇ 25 ರಂದುನಡೆದ ತಿರುಗಾಟದ ಕೊನೆಯ ಪ್ರದರ್ಶನ ಹೊರಟು ಪಡಿಸಿ ಒಟ್ಟು 167 ದಿನಗಳ ತಿರುಗಾಟ ನಡೆಸಿವೆ.
ಕಟೀಲು ಆರೂ ಮೇಳಗಳಲ್ಲಿ ದೇವಿಮಹಾತ್ಮೆ ಪ್ರಸಂಗದಲ್ಲಿ ದೇವಿಯ ಪಾತ್ರ ನಿರ್ವಹಿಸುವವರ ಪೈಕಿ 1ನೇ ಮೇಳ ರಾಜೇಶ್ ಬೆಳ್ಳಾರೆ: 3 ವರ್ಷದಲ್ಲಿ 268 ಕಡೆಗಳಲ್ಲಿ , 2ನೇ ಮೇಳ ಪ್ರಶಾಂತ್ ಶೆಟ್ಟಿ ನೆಲ್ಯಾಡಿ 13 ವರ್ಷಗಳಲ್ಲಿ 1,500ಕ್ಕೂ ಹೆಚ್ಚು, 3ನೇ ಮೇಳ ಗುರುತೇಜ ಶೆಟ್ಟಿ ಎರಡು ವರ್ಷಗಳಲ್ಲಿ 210ರಷ್ಟು ಕಡೆ, 4ನೇ ಮೇಳ ಸಂದೀಪ್ ಕೋಳ್ಯೂರು 5 ವರ್ಷಗಳಲ್ಲಿ ಸುಮಾರು 480, 5ನೇ ಮೇಳ ಮಹೇಶ್ ಸಾಣೂರು 6 ವರ್ ಗಳಿಂದ 675 ಕ್ಕೂ ಹೆಚ್ಚು, 6ನೇ ಮೇಳ ಅರುಣ್ ಕೋಟ್ಯಾನ್ 7 ವರ್ಷಗಳಲ್ಲಿ 500ಕ್ಕೂ ಹೆಚ್ಚು ಕಡೆ ದೇವಿ ಪಾತ್ರ ನಿರ್ವಹಿಸಿದ್ದಾರೆ.