ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಭಾನುವಾರ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಗರ ಬೂತ್ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಕೇವಲ ನೀವು ಮಾತ್ರ ನನಗೆ ಓಟು ಹಾಕಿದರೆ ಸಾಲದು, ನಿಮ್ಮ ಬೂತ್ ಓಪನ್ ಆದಾಗ ರಾಘವೇಂದ್ರಗಿಂತ ಹೆಚ್ಚು ಓಟು ನನಗೆ ಬರಬೇಕು ಎಂದರು.
ಯುಗಾದಿ ಹಬ್ಬದಲ್ಲಿ ದೇವರಿಗೆ ಹೂ ಹಾಕುವ ಸಮಯದಲ್ಲಿ ಅನ್ಯಾಯವಾಗಿರುವ ಈಶ್ವರಪ್ಪಗೆ ನ್ಯಾಯ ಕೊಡಪ್ಪ ಎಂದು ಕೇಳಿಕೊಳ್ಳಿ. ಧರ್ಮದ ಪರವಾಗಿ ಹೋರಾಟ ಮಾಡುತ್ತಿರುವ ನನ್ನ ಹೋರಾಟಕ್ಕೆ ಸರಿಯಾದ ನ್ಯಾಯವನ್ನು ಮತದಾರರು ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.ಬೈಂದೂರಿನಲ್ಲಿ ಈ ಬಾರಿ ನನ್ನ ಗೆಲ್ಲಿಸಲು ಹಿಂದು ಸಂಘಟನೆಯವರು ಗೆಲ್ಲುವವರೆಗೂ ನನ್ನ ಜೊತೆ ಇರುತ್ತೇವೆ ಎಂದಿದ್ದಾರೆ.
ಎಲ್ಲಾ ಸಮಾಜಕ್ಕೆ ಅನುದಾನ ಕೊಟ್ಟಿದ್ದೇನೆ. ಯಾವ ಜನ್ಮದಲ್ಲಿ ನಿಮ್ಮ ಮಕ್ಕಳಾಗಿ ಹುಟ್ಟಿದ್ದೇನೋ ಗೊತ್ತಿಲ್ಲ. ಈ ಜನ್ಮದಲ್ಲಿ ಅನುದಾನ ಕೊಡುವ ಮೂಲಕ ಋಣ ತೀರಿಸಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಹೆಸರಿಗೆ ಮಾತ್ರ ಬಿಜೆಪಿ ಜೊತೆ ಇದೆ. ಅವರೆಲ್ಲಾ ದೊಡ್ಡ ಸಂಖ್ಯೆಯಲ್ಲಿ ನನಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ಮಾ.12ಕ್ಕೆ ನಾಮ ಪತ್ರ ಸಲ್ಲಿಸಲಿದ್ದೇನೆ. ಅಂದು ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ಪೂಜೆ ಮಾಡಿ ಮೆರವಣಿಗೆ ಮಾಡಲಿದ್ದೇನೆ. ಗಣಪತಿ ಧರ್ಮಕ್ಕೆ ಜಯ ಸಿಗಲಿ, ಈಶ್ವರಪ್ಪ ಗೆಲ್ಲಲಿ ಎಂದು ಆಶೀರ್ವಾದ ಮಾಡುತ್ತಾನೆ ಎಂದರು.
ಎಲ್ಲಾ ಸಮಾಜದ ಅಭಿವೃದ್ಧಿಗೆ ಕೋಡಿಗಟ್ಟಲೆ ಅನುದಾನ ನೀಡಿದ್ದಾರೆ. ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಬೇರೆಯವರು ಜಾತಿಗೆ ಅಂಟಿಕೊಂಡಿದ್ದಾರೆ. ಆದರೆ, ಈಶ್ವರಪ್ಪ ಎಲ್ಲಾ ಜಾತಿ, ಧರ್ಮಗಳಿಗೆ ನೆರವಾಗಿದ್ದಾರೆ. ಮಾ.12ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನೀವೆಲ್ಲರರೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ. ನಾಮಪತ್ರ ಹಿಂಪಡೆಯುವ ದಿನಾಂಕ ನಂತರ ಬೇರೆ ಪಕ್ಷದವರು ಈಶ್ವರಪ್ಪ ಜೊತೆಗೆ ಬರಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈಶ್ವರಪ್ಪರವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮುಕುಡಪ್ಪ, ಮಹಾಲಿಂಗ ಶಾಸ್ತ್ರಿ, ಇ.ವಿಶ್ವಾಸ್ ಶಂಕರ್ ಗನ್ನಿ, ಲತಾ ಗಣೇಶ್, ಆರತಿ ಅ.ಮ ಪ್ರಕಾಶ್, ಲಕ್ಷ್ಮಿ ಶಂಕರನಾಯ್ಕ್, ಭೂಪಾಲ್, ಸುವರ್ಣ ಶಂಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.