ಕನ್ನಡಪ್ರಭ ವಾರ್ತೆ ಗೋಕಾಕ
ಇನ್ನುಳಿದಂತೆ ಗೋಕಾಕ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲದಾರ (52), ಪವನಕುಮಾರ ಮಾಯಪ್ಪ ತಹಶೀಲದಾರ (22) ಅವರ ಪಾರ್ಥಿವ ಶರೀರ ಹೈದರಾಬಾದ್ ಮಾರ್ಗವಾಗಿ ಸೆ.13ರಂದು ಬೆಳಗ್ಗೆ ಗೋಕಾಕ ನಗರಕ್ಕೆ ಆಗಮಿಸಲಿದೆ. ನಗರದ ಕುಂಬಾರಗಲ್ಲಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಶುಕ್ರವಾರ ಅಂತ್ಯಸಂಸ್ಕಾರ ಜರುಗಲಿದೆ ಎಂದು ತಹಶೀಲದಾರ ಕುಟುಂಬದ ಮೂಲಗಳು ತಿಳಿಸಿದೆ.
ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದರು. ಗರ್ಭಿಣಿಯಾಗಿದ್ದ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ದುಬೈಗೆ ತಾಯಿ ಮಗ ವಿಸಿಟಿಂಗ್ ವಿಸಾದ ಮೇಲೆ ತೆರಳಿದ್ದರು. ಆ.26ರ ಸೋಮವಾರ ರಾತ್ರಿ 10ಗಂಟೆಗೆ ಕಾರ್ ಮೂಲಕ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರ ಶರೀರವನ್ನು ಹೈಮಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತರ ಶರೀರದ ಡಿಎನ್‌ಎ ಟೆಸ್ಟ್ ಸೇರಿ ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದ ಕ್ರಮಗಳು ವಿಳಂಬವಾದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ 17 ದಿನಗಳ ನಂತರ ಮೃತರ ಪಾರ್ಥಿವ ಶರೀರ ಭಾರತಕ್ಕೆ ಆಗಮಿಸಿದೆ.