ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರು

KannadaprabhaNewsNetwork |  
Published : Mar 18, 2026, 01:15 AM IST
ಸ | Kannada Prabha

ಸಾರಾಂಶ

ಚಿಕ್ಕಮಗಳೂರುಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬುಧವಾರದಿಂದ ಆರಂಭಗೊಳ್ಳಲಿದ್ದು, ಜಿಲ್ಲಾದ್ಯಂತ ಸ್ಥಾಪಿಸಲಾಗಿರುವ 52 ಪರೀಕ್ಷಾ ಕೇಂದ್ರದಲ್ಲಿ 13,557 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವೆಬ್‌ ಕಾಸ್ಟಿಂಗ್‌ ವಿಚಕ್ಷಣಾ ದಳ ಸೇರಿದಂತೆ ಸಕಲ ರೀತಿ ಸಿದ್ಧತೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬುಧವಾರದಿಂದ ಆರಂಭಗೊಳ್ಳಲಿದ್ದು, ಜಿಲ್ಲಾದ್ಯಂತ ಸ್ಥಾಪಿಸಲಾಗಿರುವ 52 ಪರೀಕ್ಷಾ ಕೇಂದ್ರದಲ್ಲಿ 13,557 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವೆಬ್‌ ಕಾಸ್ಟಿಂಗ್‌ ವಿಚಕ್ಷಣಾ ದಳ ಸೇರಿದಂತೆ ಸಕಲ ರೀತಿ ಸಿದ್ಧತೆ ನಡೆಸಲಾಗಿದೆ.

ಬುಧವಾರ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ಉಳಿದಂತೆ ಏ.2ರ ವರೆಗೆ ವಿವಿಧ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಭೆಯಲ್ಲಿ ಪರೀಕ್ಷಾ ಅಧೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ಅಭಿರಕ್ಷಕರಿಗೆ ತರಬೇತಿ ನಡೆಸ ಲಾಗಿದೆ. ಮಾ.17 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗೆ ಆಯಾ ಪರೀಕ್ಷಾ ಕೇಂದ್ರ ದಲ್ಲಿ ತರಬೇತಿ ನೀಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಡೆಸ್ಕ್‌ ಮೇಲೆ ವಿದ್ಯಾರ್ಥಿಗಳ ನೋಂದಣೆ ಸಂಖ್ಯೆ ಬರೆಯುವ ಕಾರ್ಯ ನಡೆಯಿತು. ಕುಡಿಯುವ ನೀರು, ಗಾಳಿ, ಬೆಳಕಿನ ವ್ಯವಸ್ಥೆಯನ್ನು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರ ತಲಾ ಇಬ್ಬರು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಸಮೀಪದ ಜೆರಾಕ್ಸ್‌ ಅಂಗಡಿ ಬಂದ್‌ ಮಾಡಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಒಳಗೆ 30 ನಿಮಿಷ ಮುಂಚಿತವಾಗಿ ಆಗಮಿಸುವಂತೆ ತಿಳಿಸಲಾಗಿದೆ. ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪರೀಕ್ಷಾ ಹಾಲ್‌ ಟಿಕೆಟ್‌ ತೋರಿಸಿದರೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

607 ಪರೀಕಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ:

ಜಿಲ್ಲೆಯಲ್ಲಿ 52 ಪರೀಕ್ಷಾ ಕೇಂದ್ರದ 607 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಎಲ್ಲ ಕೊಠಡಿಗಳಿಗೆ ಸಿಸಿಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜತೆಗೆ, ಪರೀಕ್ಷಾ ಕೇಂದ್ರದ ಕಾರಿಡಾರ್‌ನಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡ ಲಾಗಿದೆ. ಎಲ್ಲ ವೆಬ್‌ ಕಾಸ್ಟಿಂಗ್‌ ಕ್ಯಾಮೆರಾಗಳಾಗಿವೆ. ಮಂಗಳವಾರ ಮಧ್ಯಾಹ್ನದಿಂದ ಡ್ರೈ ರನ್‌ ನಡೆಸುವ ಮೂಲಕ ಎಲ್ಲ ಸಿಸಿ ಕ್ಯಾಮೆರಾ ಕಾರ್ಯ ಪರಿಶೀಲಿಸಲಾಯಿತು.

-- ಬಾಕ್ಸ್‌ --

ವೆಬ್‌ ಕಾಸ್ಟಿಂಗ್‌ ನಿಗಾ ಕೇಂದ್ರ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತಲಾ ಆರು ಪರೀಕ್ಷಾ ಕೇಂದ್ರಗಳ ವೆಬ್‌ ಕಾಸ್ಟಿಂಗ್‌ ನಿಗಾವಹಿಸುವುದಕ್ಕೆ ಒಬ್ಬ ಸಿಬ್ಬಂದಿ ಯಂತೆ ಒಟ್ಟು 10 ಮಂದಿ ನೇಮಕ ಮಾಡಲಾಗಿದೆ. ಈ ಸಿಬ್ಬಂದಿ ಪರೀಕ್ಷಾ ಕೇಂದ್ರದ ಚಟುವಟಿಕೆ ಬಗ್ಗೆ ನಿಗಾವಹಿಸುವರು. ಇದಲ್ಲದೇ, ಬೆಂಗಳೂರಿನ ಕಚೇರಿಯಿಂದಲೂ ಯಾವುದೇ ಪರೀಕ್ಷಾ ಕೇಂದ್ರ ವೆಬ್‌ ಕಾಸ್ಟಿಂಗ್‌ ವೀಕ್ಷಣೆಗೆ ಅವಕಾಶ ಇರುತ್ತದೆ ಎಂದು ಶಿಕ್ಷಣಾಧಿಕಾರಿ ನಾಗರಾಜ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.-- ಬಾಕ್ಸ್‌ --

ತಾಲೂಕುವಾರು ವಿಚಕ್ಷಣಾ ದಳ

ಚಿಕ್ಕಮಗಳೂರು ಜಿಲ್ಲೆಯ ಎಂಟು ತಾಲೂಕುಗಳಿಗೆ ತಲಾ ಒಬ್ಬರಂತೆ ಡಯಟ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣಾ ದಳ ನಿಯೋಜನೆ ಮಾಡಲಾಗಿದೆ. ಇದಲ್ಲದೇ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸ್ಥಾನಿಕ ಜಾಗೃತಿದಾರರನ್ನು ನಿಯೋಜಿಸಿದೆ. ಈ ಅಧಿಕಾರಿ ಗಳು ಪರೀಕ್ಷಾ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಿದ್ದಾರೆ.

---ಬಾಕ್ಸ್‌---

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಹಾಗೂ ವಿದ್ಯಾರ್ಥಿಗಳ ವಿವರ

ತಾಲೂಕು ಪರೀಕ್ಷಾ ಕೇಂದ್ರ ಸಂಖ್ಯೆ ವಿದ್ಯಾರ್ಥಿ ಸಂಖ್ಯೆ

ಬೀರೂರು 6 1252

ಚಿಕ್ಕಮಗಳೂರು113754

ಕಡೂರು 10 2672

ಕೊಪ್ಪ41044

ಮೂಡಿಗೆರೆ51394

ನರಸಿಂಹರಾಜಪುರ4916

ಶೃಂಗೇರಿ2555

ತರೀಕೆರೆ101970

ಒಟ್ಟು5213,557

-----

ಅಂಕಿ ಅಂಶ

ಹೊಸ ವಿದ್ಯಾರ್ಥಿ :12,829

ಪುನರಾವರ್ತಿತ 728

ಫೋಟೋ

ಚಿಕ್ಕಮಗಳೂರು ನಗರದ ಟಿಎಂಎಸ್‌ ಹೈಸ್ಕೂಲ್‌ನಲ್ಲಿ ಬುಧವಾರದಿಂದ ಆರಂಭಗೊಳ್ಳುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊಠಡಿ ಸಿದ್ಧಪಡಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1,000 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬೀದರ್ ಟೂ ಬೆಂಗಳೂರುವರೆಗೆ ಪಾದಯಾತ್ರೆ: ಕೆ.ಪಿ.ನಂಜುಂಡಿ