-ಡಾ.ಬಸವಕುಮಾರ ಸ್ವಾಮೀಜಿ ವಿಷಾದ । ಬಸವಕೇಂದ್ರ ಮುರುಘಾಮಠದಲ್ಲಿ 13 ಜೋಡಿ ಸರಳ ವಿವಾಹ ಕಾರ್ಯಕ್ರಮ
ಆಧುನಿಕ ಸೋಂಕಿನಿಂದಾಗಿ ದುಡಿದು ತಿನ್ನುವವರಿಗಿಂತ ದುಂದುವೆಚ್ಚ ಮಾಡುವವರೇ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಿದ್ದಾರೆ. ಇಂಥ ಪ್ರವೃತ್ತಿ ಸಮಾಜದ ಅಧಃಪತನಕ್ಕೆ ನಾಂದಿಯಾಗುತ್ತಿದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಸವಕೇಂದ್ರ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 36ನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಎರಡು ಜೋಡಿ ಅಂತರ್ಜಾತಿ ಸೇರಿ 13 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು ಸಮಾಜದಲ್ಲಿ ಈ ಮೊದಲೆಲ್ಲ ಸಂಬಂಧಿಕರು, ಸ್ನೇಹಿತರು, ಹಿರಿಯರನ್ನು ಗೌರವದಿಂದ ಕಾಣಲಾಗುತ್ತಿತ್ತು. ಆದರೆ ಇಂದಿನ ದಿನಮಾನಗಳಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಡವಳಿಕೆಗಳಿವೆ ಎಂದರು.ಯಾರು ಸಮಾಜದಲ್ಲಿ ಸದ್ಗತಿ ಸರಳತೆಯಿಂದ ನಡೆಯುತ್ತಾರೋ ಅಂಥವರನ್ನು ಅನೇಕರು ತಿರಸ್ಕರಿಸುತ್ತಾರೆ. ಇಂದು ಟ್ರೆಂಡಿಂಗ್ಗೋಸ್ಕರ ಬಂಗಲೆ, ಅರಮನೆ ಮುಂತಾದೆಡೆ ವಿವಾಹವಾಗುತ್ತ ದುಂದುವೆಚ್ಚಕ್ಕೆ ಕಾರಣೀಭೂತರಾಗುತ್ತಿದ್ದಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹದಲ್ಲಿ ಶರಣ ಸಂಸ್ಕೃತಿಯ ಪರಂಪರೆಯ ಆಧಾರವಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶ ನೀಡಲಾಗುತ್ತಿದೆ. ಸರಳ ವಿವಾಹ ಆಗುವವರ ಬಳಿ ಹಣ ಅಥವಾ ಜ್ಞಾನಭಂಡಾರವಿಲ್ಲದಿರಬಹುದು. ಆದರೆ, ತಂದೆ-ತಾಯಿ, ಅತ್ತೆ-ಮಾವ, ಅಣ್ಣ-ತಮ್ಮ ಹೀಗೆ ಒಂದು ಕುಟುಂಬದಲ್ಲಿ ಸಂತೋಷಕರವಾದ ವಾತಾವರಣ ಸೃಷ್ಟಿಸಿಕೊಂಡು ಪ್ರೀತಿ-ವಿಶ್ವಾಸದಿಂದ ಆರೋಗ್ಯಪೂರ್ಣ ಬದುಕನ್ನು ಸಾಗಿಸಿರಿ ಎಂದು ಮನವಿ ಮಾಡಿದರು.
ಸಾಲ ಶೂಲ:
ಬರಗಾಲದ ಪರಿಸ್ಥಿತಿಯಲ್ಲೂ ಶ್ರೀಮಠವು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಸಾಮೂಹಿಕ ಕಲ್ಯಾಣ ಮಾಡುತ್ತಿದೆ. ಎಲ್ಲರ ಕೈಯಲ್ಲಿ ಮೊಬೈಲ್ ಬಂದಾಗಿನಿಂದ ಪ್ರೋತ್ಸಾಹಪೂರ್ವವಾಗಿ ಚಪ್ಪಾಳೆ ತಟ್ಟುವುದನ್ನು ಬಿಟ್ಟಿದ್ದಾರೆ. ಮೊಬೈಲ್ ಇಟ್ಟುಕೊಳ್ಳಬೇಕೇ ಹೊರತು ಅದರೊಳಗೆ ಇಳಿಯಬಾರದು. ಅದರ ಮೋಹದಿಂದ ದೂರ ಇರಬೇಕಾಗುತ್ತದೆ.
ಯುಟ್ಯೂಬ್ ಚಾನೆಲ್ ಬಿಡುಗಡೆ:
ಇದೇ ಸಂದರ್ಭದಲ್ಲಿ ಹುಣಸೇಕಟ್ಟೆ ಮಾರುತಿ ಅವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಚಿನ್ಮಯದೇವರು ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಪ್ರೊ.ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
ಬಸವಕೇಂದ್ರ ಮುರುಘಾಮಠದಲ್ಲಿ ಆಯೋಜಿಸಲಾದ ಸರಳ ವಿವಾಹ ಮಹೋತ್ಸವದಲ್ಲಿ 13 ಜೋಡಿ ವಧೂವರರು ದಾಂಪತ್ಯಕ್ಕೆ ಅಡಿ ಇಟ್ಟರು.