ಕನ್ನಡಪ್ರಭ ವಾರ್ತೆ ಕಲಬುರಗಿ
ಬಿಜೆಪಿ ಪಕ್ಷದ ಈ ಮಹತ್ವದ ಸಂಘಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾಲ್ಗೊಳ್ಳುತ್ತಿದ್ದಾರೆ. ಅಂದು ಸಂಜೆ 4 ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಿಂದ ನೂತನ ವಿದಯಾಲಯ ಮೈದಾನದವರೆಗೂ ಬಿವೈ ವಿಜಯೇಂದ್ರ, ನೂತನ ಅಧ್ಯಕ್ಷರಾದ ಚಂದು ಪಾಟೀಲ್, ಶಿವರಾಜ ರದ್ದೇವಾಡಗಿ ಅವರನ್ನು ಮೆರವಣಿಗೆಯಲ್ಲಿ ಸಮಾರಂಭದ ವೇದಿಕೆ ಕರೆತರಲಾಗುತ್ತಿದೆ.
ನೂತನ ಅಧ್ಯಕ್ಷರುಗಳ ಪದಗ್ರಹಗಹಣ ಸಮಾರಂಭದ ನಂತರ ಇದೇ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭ ಸಹ ನಡೆಯಲಿದೆ. ಈ ಸಮಾರಂಭದಲ್ಲಿ 10 ರಿಂದ 20 ಸಾವಿರ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ.ಕಲಬುರಗಿ ಜಿಲ್ಲೆಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡ ನಂತರದಲ್ಲಿ ಪಕ್ಷ ಸಂಘಟನೆಯ ಮಹತ್ವದ ಹಾಗೂ ಹೆಚ್ಚಿನ ಜನರನ್ನು ಸೇರಿಸಿ ಸಮಾರಂಭ ನಡೆಸಲು ಬಿಜೆಪಿ ಮುಂದಾಗಿದೆ. ಇದೀಗ ಪಕ್ಷ ಜಿಲ್ಲೆ ಹಾಗೂ ನಗರ ಅಧ್ಯಕ್ಷರ ನೇಮಕ ಮಾಡಿದ್ದರಿಂದ ಬರುವ ದಿನಗಳಲ್ಲಿ ಜಿಲ್ಲೆ ಹಾಗೂ ನಗರದಲ್ಲಿ ಬಿಜೆಪಿಯತ್ತ ಜಮನ ಸೆಳೆಯುವ ಪ್ರಯತ್ನಗಳಿಗೆ ಈ ಸಮಾರಂಭ ಮುನ್ನುಡಿ ಬರೆಯಲಿದೆ.