- ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರರ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಜಗಳೂರು
೨೧ರಂದು ಮುಂಜಾನೆ ಬ್ರಾಹೀ ಮುಹೂರ್ತದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿಕೆರೆ ಮಠದ ಶ್ರೀ ಜಗದ್ಗುರು ವೀರ ಗಂಗಾಧರೇಶ್ವರ ಮಾನಸ ಪುತ್ರರಾದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ೪:೩೦ರಿಂದ ೯:೩೦ ರವರೆಗೆ ಗಣಹೋಮ ಹಾಗೂ ಗುರು ಹೋಮವನ್ನು ಶ್ರೀ ಸಾಯಿ ಬಾಬಾ ಮೂರ್ತಿಗೆ ಹಾಲಿನ ಅಭಿಷೇಕ, ಶ್ರೀ ಸಾಯಿ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ ಮಾಡಲಾಗುವುದು.
ಬೆಳಗ್ಗೆ ೧೦:೩೦ರಿಂದ ಬಾಬಾ ಉತ್ಸವ ಮೂರ್ತಿ ಮೆರವಣಿಗೆಯನ್ನು ಶ್ರೀ ವೀರಭಧ್ರೇಶ್ವರ ಭಕ್ತ ಮಂಡಳಿಯಿಂದ ಸಮಾಳ, ನಾಸಿಕ್ ಡೋಲು ವಾದ್ಯಗಳ ಮುಖಾಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ೧೨:೩೦ರಿಂದ ಶ್ರೀ ಸಾಯಿಬಾಬಾ ಮಂಗಳಾರತಿ ನಂತರ ೧೧:೩೦ ರಿಂದ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೬:೩೦ರಿಂದ ಧೂಪಾರತಿ ರಾತ್ರಿ ೯:೩೦ ರಿಂದ ತೇಜ ಆರತಿ ಇರುತ್ತದೆ ಎಂದು ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.ವಿಶಾಲವಾದ ಸ್ಥಳದಲ್ಲಿ ನಿರ್ಮಿಸಿರುವ ದೇಗುಲದಲ್ಲಿ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಸಲಾಗುತ್ತಿದೆ. ಪ್ರತಿದಿನ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿದಿನ ೩ ಹೊತ್ತು ಆರತಿ ಪೂಜೆ ನಡೆಯುವ ಈ ದೇಗುಲಕ್ಕೆ ಪ್ರತಿ ಗುರುವಾರ ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಜಗಳೂರು ತಾಲೂಕುಗಳಿಂದ ಸಾವಿರರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತರು ಇರುವ ಈ ದೇಗುಲದಲ್ಲಿ ಬೆಳಗ್ಗೆ ಪ್ರಸಾದ ವ್ಯವಸ್ಥೆ, ಸಂಜೆ ಪಲ್ಲಕ್ಕಿ ಉತ್ಸವದ ನಂತರ ೧ ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆರಂಭದಿಂದ ಇಲ್ಲಿಯವರೆಗೂ ಪ್ರತಿದಿನ ಸಾಯಿಬಾಬಾ ಮಂದಿರದಲ್ಲಿ ಭಜನೆ ನಡೆಯುತ್ತಿದೆ.
- - - -19ಜಿಎಲ್ಆರ್01: