ನಾಳೆ ಎಸ್‌. ಜಯಣ್ಣರ 75ನೇ ವರ್ಷದ ವಜ್ರ ಮಹೋತ್ಸವ

KannadaprabhaNewsNetwork |  
Published : Sep 08, 2025, 01:00 AM IST
7ಸಿಎಚ್ಎನ್‌52ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಡಾ.ಎಚ್‌.ಸಿ ಮಹದೇವಪ್ಪ ಅಭಿಮಾನಿ ಬಳಗ ಚಾಮರಾಜನಗರ ಲೋಕಸಭಾ ಕ್ಷೇತ್ರ ಅಧ್ಯಕ್ಷ ಡಾ. ವಿ.ಎನ್‌. ಮಹದೇವಯ್ಯ ಅ‍ವರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಎಸ್‌. ಜಯಣ್ಣ ಅವರ 75ನೇ ವರ್ಷದ ವಜ್ರ ಮಹೋತ್ಸವ ಜನ್ಮ ಜಯಂತಿ ಕಾರ್ಯಕ್ರಮ ಹಾಗೂ ಸುನೀಲ್‌ ಬೋಸ್‌ ಸಂಸದರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಸಂಭ್ರಮ-2025ರ ಕಾರ್ಯಕ್ರಮವನ್ನು ಸೆ. 9ರಂದು ಯಳಂದೂರು ತಾಲೂಕಿನ ವಡಗೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಚ್‌.ಸಿ ಮಹದೇವಪ್ಪ ಅಭಿಮಾನಿ ಬಳಗ ಚಾಮರಾಜನಗರ ಲೋಕಸಭಾ ಕ್ಷೇತ್ರ ಅಧ್ಯಕ್ಷ ಡಾ. ವಿ.ಎನ್‌. ಮಹದೇವಯ್ಯ ತಿಳಿಸಿದರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಎಸ್‌. ಜಯಣ್ಣ ಅವರ 75ನೇ ವರ್ಷದ ವಜ್ರ ಮಹೋತ್ಸವ ಜನ್ಮ ಜಯಂತಿ ಕಾರ್ಯಕ್ರಮ ಹಾಗೂ ಸುನೀಲ್‌ ಬೋಸ್‌ ಸಂಸದರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಸಂಭ್ರಮ-2025ರ ಕಾರ್ಯಕ್ರಮವನ್ನು ಸೆ. 9ರಂದು ಯಳಂದೂರು ತಾಲೂಕಿನ ವಡಗೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಚ್‌.ಸಿ ಮಹದೇವಪ್ಪ ಅಭಿಮಾನಿ ಬಳಗ ಚಾಮರಾಜನಗರ ಲೋಕಸಭಾ ಕ್ಷೇತ್ರ ಅಧ್ಯಕ್ಷ ಡಾ. ವಿ.ಎನ್‌. ಮಹದೇವಯ್ಯ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಎಚ್‌.ಸಿ ಮಹದೇವಪ್ಪ ಅಭಿಮಾನಿ ಬಳಗ ಚಾಮರಾಜನಗರ ಲೋಕಸಭಾ ಕ್ಷೇತ್ರ ವತಿಯಿಂದ ಸೆ. 9ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ಯಳಂದೂರು ತಾಲೂಕಿನ ವಡಗೆರೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೊಳ್ಳೇಗಾಲ ಜೇತವನ ಬುದ್ದವಿಹಾರ ಮನೋರಕ್ಖಿತ ಭಂತೆ ಹಾಗೂ ತಿ. ನರಸೀಪುರ ನಳಂದ ಬುದ್ಧವಿಹಾರ ಬೋಧಿರತ್ನ ಭಂತೆ ದಿವ್ಯಸಾನಿಧ್ಯ ವಹಿಸಲಿದ್ದು, ಶಾಸಕ ಎ.ಆರ್‌. ಕೃಷ್ಣಮೂರ್ತಿ ಹಾಗೂ ಸಂಸದ ಸುನೀಲ್‌ ಬೋಸ್‌ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಎಸ್‌.ಜಯಣ್ಣ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಪುಟ್ಟನಂಜಮ್ಮ ಮತ್ತು ಸಣ್ಣಯ್ಯ ಪುತ್ರರಾಗಿ 1950ರಲ್ಲಿ ಸೆ.9 ರಂದು ಜನಿಸಿದ್ದು, ಅವರ ಎಂಎ ಪದವಿಯನ್ನು ಮುಗಿಸಿ ವಿದ್ಯಾರ್ಥಿ ದೆಸೆಯಲ್ಲಿಯೇ ಹಲವಾರು ಚಳುವಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ದಿ.ವಿ.ಶ್ರೀನಿವಾಸ್‌ಪ್ರಸಾದ್‌ ಶಿಷ್ಯರಾಗಿ ನಂತರ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯರಾಗಿ ಪ. ಮಲ್ಲೇಶ, ಸಾಹಿತಿ ದೇವನೂರು ಮಹದೇವ, ದೇವನೂರು ಶಿವಮಲ್ಲು ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಡಿಗಳಾಗಿದ್ದರು. ಅವರು 1994 ಮತ್ತು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದರು. 2024ರಲ್ಲಿ ಉಗ್ರಣ ನಿಗಮದ ಅಧ್ಯಕ್ಷರಾಗಿ ಸಚಿವ ಸಂಪುಟ ಸ್ಥಾನಮಾನವನ್ನು ಪಡೆದಿದ್ದರು. ಅವರ ನೆನಪಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸಂಸದರಾಗಿರುವ ಸುನೀಲ್ ಬೋಸ್‌ ಅ‍ವರ 44ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸೆ. 9ರಂದು ಸಂಸದರಾಗಿ ಒಂದು ವರ್ಷ ಪೂರೈಸಿರುವ ಸುನೀಲ್‌ ಬೋಸ್‌ ಅವರ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಸಂಭ್ರಮವನ್ನು ಸಹ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಎಸ್‌.ಜಯಣ್ಣ ಅಭಿಮಾನಿಗಳು ಮತ್ತು ಹಿತೈಷಿಗಳು ಹಾಗೂ ಸಂಸದ ಸುನೀಲ್‌ ಬೋಸ್‌ ಅಭಿಮಾನಿಗಳು ಮತ್ತು ಹಿತೈಷಿಗಳು ಹಾಗೂ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಘಸೇನಾ, ಮರಿಸ್ವಾಮಿ, ಮರಿಸ್ವಾಮಿ ಚಾಟೀಪುರ, ರಾಜೇಂದ್ರ ಹೊನ್ನೂರು ಇದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌