ಶರಣರ ಪುಸ್ತಕ ಓದಿ ಉತ್ತಮ ಜೀವನ ನಡೆಸಿ

KannadaprabhaNewsNetwork |  
Published : Sep 08, 2025, 01:00 AM IST
7ಕೆಜಿಎಲ್8ಕೊಳ್ಳೇಗಾಲದ ಆದರ್ಶ ವಿದ್ಯಾಲಯದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪರ ಸಾರಿಗೆ ಇಲಾಖೆ ಆಯುಕ್ತೆ ಓಂಕಾರೇಶ್ವರಿ ಅವರನ್ನು ಗೌರವಿಸಲಾಯಿತು. ಶ್ರೀಕಂಠಸ್ವಾಮಿ, ನಾಗರಾಜು ಇದ್ದರು. | Kannada Prabha

ಸಾರಾಂಶ

ಶರಣರು, ಸಾಹಿತಿಗಳು, ಗಣ್ಯರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಾಯನ ಮಾಡುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠ ಸ್ವಾಮಿಜಿ ಹೇಳಿದರು

ಕೊಳ್ಳೇಗಾಲ: ಶರಣರು, ಸಾಹಿತಿಗಳು, ಗಣ್ಯರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಾಯನ ಮಾಡುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠ ಸ್ವಾಮಿಜಿ ಹೇಳಿದರು

ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ರಾಜೇಂದ್ರಮಹಾಸ್ವಾಮಿ ಗಳ 110ನೇ ಸಂಸ್ಥಾಪಕರ ದಿನಾಚರಣೆ, ವಚನ ದಿನ ಹಾಗೂ ಲಿಂಗೈಕ್ಯ ಪುಟ್ಟಬುದ್ಧಿ ರವರ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ವಚನಗಳಿಂದ ಕ್ರಾಂತಿಯಾಗಿದೆ. ಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು, ವಚನಗಳು ಬದುಕಿನ ದಾರಿದೀಪ, ಸಂಸ್ಕಾರ ಕಲಿಸುವಲ್ಲಿ

ಮಾನವೀಯ ನೆಲೆಗಟ್ಟಿನಡಿ ಸತ್ವಯುತ ಜ್ಞಾನ ದೀವಿಯಾಗಿವೆ ಎಂದರು.

ಅಪರ ಸಾರಿಗೆ ಇಲಾಖೆ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, ವಿಧ್ಯಾರ್ಥಿಗಳು ಸಮಾಜ ಮುಖಿ ಸೇವೆಗೂ ಅಣಿಯಾಗಿ, ಅಧ್ಯಯನದ ಮೂಲಕ ಸಾಧಕರಾಗಿ, ಮೌಲ್ಯಯುತ ಜೀವನ ನಿಮ್ಮದಾಗಲಿ ಎಂದರು.

ಪ್ರಾಂಶುಪಾಲ ನಾಗರಾಜು, ಸಾಹಿತ್ಯ ಪರಿಷತ್ ಅದ್ಯಕ್ಷ ನಾಗರಾಜು, ನಾಗೇಂದ್ರಮೂರ್ತಿ ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''