ನಾಳೆ ಜೇನುಕಲ್ಲು ಸಿದ್ದೇಶ್ವರ ರಸ್ವಾಮಿ ರಥೋತ್ಸವ

KannadaprabhaNewsNetwork |  
Published : Apr 12, 2025, 12:46 AM IST
ಇತಿಹಾಸ ಪ್ರಸಿದ್ದ ಯಾದಾಪುರ ಶ್ರೀಜೇನುಕಲ್ಲು ಸಿದ್ದೇಶ್ವರರಸ್ವಾಮಿ ರಥೋತ್ಸವವು ಏ.೧೩ರಂದು ಭಾನುವಾರ  | Kannada Prabha

ಸಾರಾಂಶ

ಏ.೧೨ರಂದು ಶನಿವಾರ ಮುಂಜಾನೆ ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ಧ್ವಜಾರೋಹಣ, ಅಂಕುರಾರ್ಪಣೆ, ನೂರೊಂದೆಡೆ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಸಂಜೆ ೭ ಗಂಟೆಗೆ ಬಸವೇಶ್ವರಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೆತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಗುಗ್ಗಳಸೇವೆ ನೆರವೇರಲಿದೆ.

ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ದ ಯಾದಾಪುರ ಶ್ರೀಜೇನುಕಲ್ಲು ಸಿದ್ದೇಶ್ವರರಸ್ವಾಮಿ ರಥೋತ್ಸವವು ಏ.೧೨ರ ಶನಿವಾರದಿಂದ ೧೪ ಸೋಮವಾರ ಸಂಜೆಯವರೆಗೆ ಜರುಗಲಿದೆ.

ಏ.೧೨ರಂದು ಶನಿವಾರ ಮುಂಜಾನೆ ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ಧ್ವಜಾರೋಹಣ, ಅಂಕುರಾರ್ಪಣೆ, ನೂರೊಂದೆಡೆ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಸಂಜೆ ೭ ಗಂಟೆಗೆ ಬಸವೇಶ್ವರಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೆತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಗುಗ್ಗಳಸೇವೆ ನೆರವೇರಲಿದೆ.

ಏ.೧೩ರಂದು ಭಾನುವಾರ ಬೆಳಗ್ಗೆ ಮಹಾಮಂಗಳಾರತಿ ನಂತರ ೭ರಿಂದ ೮ ಗಂಟೆಯವರೆಗೆ ಮಹಾದಿವ್ಯ ರಥೋತ್ಸವ ನಡೆಯಲಿದೆ. ಬಳಿಕ ಉಯ್ಯಾಲೆ ಸೇವೆಯೊಂದಿಗೆ ಮಹಾಮಂಗಳಾರತಿ ಮಾಡಲಾಗುವುದು. ಏ.೧೪ರ ಸೋಮವಾರ ಮಧ್ಯಾಹ್ನ ೨ ಗಂಟೆಯಿಂದ ಸ್ವಾಮಿಯವರ ಪಲ್ಲಕ್ಕಿ ಉತ್ಸವ, ಜೋಳಿಗೆ ಸೇವೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗಾಗಿ ಜಾತ್ರಾ ದಿನಗಳಂದು ದಿನವಿಡೀ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ