ನಾಳೆ ರಣಜಿ ಪಂದ್ಯ: ಮೈದಾನದಲ್ಲಿ ಬೆವರಿಳಿಸಿದ ಆಟಗಾರರು

KannadaprabhaNewsNetwork |  
Published : Nov 15, 2025, 02:00 AM IST
ಭಾನುವಾರದಿಂದ ನಡೆಯಲಿರುವ ಕರ್ನಾಟಕ ಮತ್ತು ಚಂಡೀಗಢ ನಡುವಣ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿದರು. | Kannada Prabha

ಸಾರಾಂಶ

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನ. 16ರಿಂದ ನಡೆಯಲಿರುವ ಕರ್ನಾಟಕ ಮತ್ತು ಚಂಡೀಗಢ ನಡುವಣ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿ ಬೆವರಿಳಿಸಿದರು.

ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನ. 16ರಿಂದ ನಡೆಯಲಿರುವ ಕರ್ನಾಟಕ ಮತ್ತು ಚಂಡೀಗಢ ನಡುವಣ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿ ಬೆವರಿಳಿಸಿದರು.

ಮಧ್ಯಾಹ್ನ 2.15ರ ಸುಮಾರಿಗೆ ಮೈದಾನಕ್ಕೆ ಬಂದಿಳಿದ ಉಭಯ ತಂಡದ ಆಟಗಾರರು ಸಂಜೆಯ ವರೆಗೂ ಅಭ್ಯಾಸ ನಡೆಸಿದರು. ನಂತರ ಉಭಯ ತಂಡದ ಆಟಗಾರರು ನೆಟ್ ಪ್ರ್ಯಾಕ್ಟೀಸ್‌ ಮಾಡಿ ಬೆವರು ಸುರಿಸಿದರು. ಈ ವೇಳೆ ನಗರದ ವಿವಿಧ ಕ್ರಿಕೆಟ್ ಕ್ಲಬ್‌ಗಳ ಆಟಗಾರರು ಅವರಿಗೆ ಸಾಥ್ ನೀಡಿದರು.

ವಿಶೇಷವಾಗಿ ಕರ್ನಾಟಕ ತಂಡದ ನಾಯಕ ಮಯಾಂಕ ಅಗರವಾಲ್, ಕರುಣ್ ನಾಯರ್, ಅಭಿನವ ಮನೋಹರ ರನ್ನಿಂಗ್ ಪ್ರ್ಯಾಕ್ಟಿಸ್ ಮಾಡಿದರು. ಇನ್ನೊಂದೆಡೆ ವಿದ್ವತ್ ಕಾವೇರಪ್ಪ ಬೌಲಿಂಗ್ ಅಭ್ಯಾಸ ಮಾಡಿದರು.

ಇನ್ನೊಂದೆಡೆ ಪಿಚ್ ಕ್ಯುರೇಟರ್‌ಗಳಾದ ಆರ್. ವೆಂಕಟಕೃಷ್ಣನ್, ಶ್ರೀರಾಮ ಮತ್ತು ಕೆಎಸ್‌ಸಿಎ ಧಾರವಾಡ ವಲಯದ ಹಂಗಾಮಿ ನಿಯಂತ್ರಕ ನಿಖಿಲ್ ಭೂಸದ ಮೈದಾನದ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡದಲ್ಲಿ ಸಚಿವರ ಕಾರಿಗೆ ಡೀಸಿ ಡ್ರೈವರ್‌ !
ಮೊದಲ ಸ್ವದೇಶಿ ಬುಲೆಟ್‌ ರೈಲಿನ ನಿರ್ಮಾಣ ಬೆಂಗಳೂರಲ್ಲಿ ಆರಂಭ