ಅಂಗಾಂಗ ದಾನ ಕುರಿತು ಅರಿವು ಮೂಡಿಸಬೇಕು

KannadaprabhaNewsNetwork |  
Published : Nov 15, 2025, 01:45 AM IST
೧೩ಕೆಎಲ್‌ಆರ್-೬ಕೋಲಾರದ ಪತ್ರಕರ್ತರ ಭವನದಲ್ಲಿ ಸುದಿಗೋಷ್ಟಿಯಲ್ಲಿ ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಸಿ ವೈದ್ಯ ಡಾ.ಬಿ.ಆರ್.ವಿಷ್ಣುವರ್ಧನ್ ಮಾತನಾಡಿದರು. | Kannada Prabha

ಸಾರಾಂಶ

ಒಬ್ಬ ಅಂಗಾಂಗ ದಾನಿಯು ಎಂಟು ಜೀವಗಳನ್ನು ಉಳಿಸುವ ಕ್ಷಮತೆ ಹೊಂದಿರುತ್ತಾರೆ. ಅಂಗಾಂಶಗಳ ದಾನದ ಮೂಲಕ ಅನೇಕರ ಆರೋಗ್ಯ ಸುಧಾರಿಸಬಹುದು. ಕರ್ನಾಟಕವು ರಚನಾತ್ಮಕ ಮತ್ತು ಪಾರದರ್ಶಕ ನೋಂದಣಿ ವ್ಯವಸ್ಥೆಯ ಮೂಲಕ ಮರಣೋತ್ತರ ಅಂಗಾಂಗ ದಾನ ಸುಗಮಗೊಳಿಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಅಂಗಾಂಗ ದಾನದ ಮೂಲಕ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮರಣೋತ್ತರ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ದೃಢಸಂಕಲ್ಪದೊಂದಿಗೆ, ವೈಟ್ ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಯು ಮುಂದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಸಿ ವೈದ್ಯ ಡಾ.ಬಿ.ಆರ್.ವಿಷ್ಣುವರ್ಧನ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷವೂ ದೇಶದಲ್ಲಿ ಸಾವಿರಾರು ಜನರು ಅಂಗಾಂಗ ದಾನ ಪಡೆಯಲು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ವಾರ್ಷಿಕ ಸುಮಾರು ೧.೫ ಲಕ್ಷಜನರಿಗೆ ಅಂಗಾಂಗ ಕಸಿಯ ಶಿಫಾರಸು ಮಾಡಲಾಗುತ್ತಿದೆದೆ. ಆದರೆ ವಾಸ್ತವದಲ್ಲಿ ಕೇವಲ ೧೦,೦೦೦ ಕಸಿ ಶಸ್ತ್ರಚಿಕಿತ್ಸೆ ಮಾತ್ರ ನಡೆಯುತ್ತಿವೆ ಎಂದರು.

ಒಬ್ಬ ದಾನಿಯಿಂದ 8 ಜೀವ ರಕ್ಷಣೆ

ಒಬ್ಬ ಅಂಗಾಂಗ ದಾನಿಯು ಎಂಟು ಜೀವಗಳನ್ನು ಉಳಿಸುವ ಕ್ಷಮತೆ ಹೊಂದಿರುತ್ತಾರೆ. ಅಂಗಾಂಶಗಳ ದಾನದ ಮೂಲಕ ಅನೇಕರ ಆರೋಗ್ಯ ಸುಧಾರಿಸಬಹುದು. ಕರ್ನಾಟಕವು ರಚನಾತ್ಮಕ ಮತ್ತು ಪಾರದರ್ಶಕ ನೋಂದಣಿ ವ್ಯವಸ್ಥೆಯ ಮೂಲಕ ಮರಣೋತ್ತರ ಅಂಗಾಂಗ ದಾನ ಸುಗಮಗೊಳಿಸುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಡಾ. ಶೆಟ್ಟಿ ಮಾತನಾಡಿ, ಕೆಲವು ವರ್ಷಗಳ ಹಿಂದೆ, ಕೋಲಾರದ ಮೂರು ಕುಟುಂಬಗಳು ಮೃತಪಟ್ಟ ತಮ್ಮ ಪ್ರೀತಿ ಪಾತ್ರರ ಅಂಗಾಂಗಗಳನ್ನು ದಾನಮಾಡಲು ಸಮ್ಮತಿಸಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ಈ ಸಂಖ್ಯೆ ಶೂನ್ಯವಾಗಿದೆ. ಇದು ಅರಿವಿನ ಕೊರತೆಯೇ ಮುಖ್ಯ ಅಡಚಣೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಡಚಣೆ ಮುಕ್ತಸಂಭಾಷಣೆ-ಸಂವಾದಗಳ ಮೂಲಕ ನಿವಾರಿಸಬಹುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ