ಮಾನವ ಕಳ್ಳ ಸಾಗಣೆ ತಡೆಗೆ ಕಠಿಣ ಶಿಕ್ಷೆ: ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ

KannadaprabhaNewsNetwork |  
Published : Jul 31, 2025, 12:47 AM IST
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ ಮಾತನಾಡಿದರು. | Kannada Prabha

ಸಾರಾಂಶ

ಅಪ್ರಾಪ್ತರನ್ನು ಅಪಹರಿಸಿ ಲೈಂಗಿಕ ಶೋಷಣೆ ಉದ್ದೇಶದಿಂದ ಮಾರಾಟ ಮಾಡುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬ್ಯಾಡಗಿ: ಮಾನವ ಕಳ್ಳಸಾಗಣೆಯ ಹಿಂದಿನ ಉದ್ದೇಶವೇ ಬಲವಂತದ ಜೀತ ಪದ್ಧತಿ ಹಾಗೂ ಲೈಂಗಿಕ ಶೋಷಣೆಯಾಗಿದ್ದು. ಇಂತಹ ಪ್ರಕರಣದಲ್ಲಿ ಭಾಗಿಯಾದವರಿಗೆ 10 ವರ್ಷದಿಂದ ಜೀವಾವಧಿಯವರೆಗೆ ಶಿಕ್ಷೆ ವಿಧಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ ತಿಳಿಸಿದರು.

ತಾಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪ್ರಾಪ್ತರನ್ನು ಅಪಹರಿಸಿ ಲೈಂಗಿಕ ಶೋಷಣೆ ಉದ್ದೇಶದಿಂದ ಮಾರಾಟ ಮಾಡುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಹೊರಗೆ ಬಂದು ಹೇಳಿಕೊಳ್ಳಿ: ದಿವಾಣಿ ನ್ಯಾಯಾಧೀಶ ಸುರೇಶ್ ವಗ್ಗನವರ ಮಾತನಾಡಿ, ಇಂತಹ ಭಯಾನಕ ಶಿಕ್ಷೆಯನ್ನು ಎದುರಿಸುತ್ತಿರುವ ಪುರುಷರ ಬಲೆಗಳಿಂದ ಮುಕ್ತರಾದ ಮಹಿಳೆಯರು ಕಾನೂನು ಮೂಲಕ ರಕ್ಷಣೆ ಪಡೆದುಕೊಳ್ಳಲು ಮುಂದಾಗಬೇಕು. ಅಂದಾಗ ಮಾತ್ರ ನಿಸ್ಸಂದೇಹವಾಗಿ, ಅಹಿಂಸಾತ್ಮಕವಾಗಿ ಪರಿಣಾಮಕಾರಿ ಮಾನವ ಕಳ್ಳಸಾಗಣೆ ಹತ್ತಿಕ್ಕಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ರಾಜು ಶಿಡೇನೂರ ವಹಿಸಿದ್ದರು. ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ನ್ಯಾಯವಾದಿಗಳಾದ ಪ್ರಕಾಶ್ ಬನ್ನಿಹಟ್ಟಿ, ಬಸವರಾಜ ಬನ್ನಿಹಟ್ಟಿ, ಎಂ.ಕೆ. ವೀರನಗೌಡರು, ಎಂ.ಎಂ. ದೇಸೂರ, ಭಾರತಿ ಕುಲಕರ್ಣಿ, ಮುಖ್ಯಶಿಕ್ಷಕ ಎಂ.ಡಿ. ಮೋಮಿನ್ ಪ್ರೌಢಶಾಲೆಯ ಶಿಕ್ಷಕ ಶಿಕ್ಷಕಿಯರು ನ್ಯಾಯಾಲಯದ ಸಿಬ್ಬಂದಿ ಇದ್ದರು.ರಟ್ಟಿಹಳ್ಳಿ ಪಪಂ ಚುನಾವಣೆ: ಅಧಿಕಾರಿಗಳ ನೇಮಕ

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ವಿವಿಧ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗೆ ನೋಡಲ್ ಅಧಿಕಾರಿಗಳಾಗಿ ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮ್ಯಾನೇಜರ್ ಎಸ್.ಎಸ್. ರಾಜನಾಳ (ಮೊ.9480920769) ನೇಮಕ ಮಾಡಲಾಗಿದೆ.ಚುನಾವಣೆಗೆ ಸಂಬAಧಿಸಿದAತೆ ಎಲ್ಲ ಸಿದ್ಧತೆಗಳ ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿಯಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ನಿಯೋಜಿಸಲಾಗಿದೆ.ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ತಂಡ ರಚಿಸಲಾಗಿದ್ದು, ರಟ್ಟಿಹಳ್ಳಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಎನ್(9986578657), ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರಿ(ಮೊ.9742778894) ಹಿರೇಕೆರೂರು ಅಬಕಾರಿ ವಲಯ ನಿರೀಕ್ಷಕರು, ಪೊಲೀಸ್ ಸಬ್ ಇನ್ಸಪೆಕ್ಟರ್ ಹಾಗೂ ವಿಡಿಯೋ ಗ್ರಾಫರ್‌ನ್ನು ನಿಯೋಜಿಸಲಾಗಿದೆ.ಜಿಲ್ಲಾ ಮಟ್ಟದ ಮಾಧ್ಯಮ ಸಮಿತಿಗೆ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಎನ್.ಐಸಿ ಡಿಐಒ ಅಭಿಷೇಕ ಕುಮಾರ(8318010677), ಸದಸ್ಯರಾಗಿ ರಾಣಿಬೆನ್ನೂರ ಉಪ ವಿಭಾಗದ ಡಿವೈಎಸ್‌ಪಿ ಜೆ.ಲೋಕೇಶ(9480804521), ಕುಣಿಮೆಳ್ಳಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅರವಿಂದ ಐರಣಿ(9731636575), ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ ಎಚ್.ಎಸ್.ಪ್ರಕಾಶ (ಮೊ.99866882338) ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. (9480841238) ಅವರನ್ನು ನೇಮಕ ಮಾಡಲಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ