ಕುಂದಾಪುರ : ತ್ರಾಸಿ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ಬೋಟ್ ರೈಡರ್ ನಾಪತ್ತೆ

KannadaprabhaNewsNetwork |  
Published : Dec 23, 2024, 01:01 AM ISTUpdated : Dec 23, 2024, 12:36 PM IST
Beach

ಸಾರಾಂಶ

ಘಟನೆ ವೇಳೆ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ಬೋಟ್ ರೈಡ್ ನಡೆಸುತ್ತಿದ್ದ ರೈಡರ್ ತ್ರಾಸಿಯಲ್ಲಿ ನೆಲೆಸಿದ್ದು, ಮೂಲತಃ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ರೋಹಿ ದಾಸ್ ಆಲಿಯಾಸ್‌ ರವಿ (41) ನಾಪತ್ತೆಯಾಗಿದ್ದಾರೆ.

 ಕುಂದಾಪುರ :  ತ್ರಾಸಿ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ಬೋಟ್ ರೈಡರ್ ನಾಪತ್ತೆಯಾಗಿದ್ದು, ಪ್ರವಾಸಿಗ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಶನಿವಾರ ಸಂಜೆ ತ್ರಾಸಿಯಲ್ಲಿ ನಡೆದಿದೆ.ಘಟನೆ ವೇಳೆ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ಬೋಟ್ ರೈಡ್ ನಡೆಸುತ್ತಿದ್ದ ರೈಡರ್ ತ್ರಾಸಿಯಲ್ಲಿ ನೆಲೆಸಿದ್ದು, ಮೂಲತಃ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ರೋಹಿ ದಾಸ್ ಆಲಿಯಾಸ್‌ ರವಿ (41) ನಾಪತ್ತೆಯಾಗಿದ್ದಾರೆ.

ತ್ರಾಸಿ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅನುಗ್ರಹ ಬಾರ್ ಸಮೀಪ ಅರಬ್ಬಿ ಸಮುದ್ರದ ಕಡಲ ಕಿನಾರೆಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಮುದ್ರದ ಮೋಜನ್ನು ತೋರಿಸಲು ಖಾಸಗಿ ಟೂರಿಸ್ಟ್ ಬೋಟಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರಶಾಂತ್ (25) ಎನ್ನುವ ಪ್ರವಾಸಿಗ ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬಂದ ಭಾರಿ ಗಾತ್ರದ ಅಲೆಯಲ್ಲಿ ಬೋಟ್ ಆಯ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದಿದ್ದಾರೆ.

ನಾಪತ್ತೆಯಾದ ರೋಹಿದಾಸ್ ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಕಾವಲು ಪಡೆಯ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌