ಮಾರಿಷಸ್ ಜೆಎಸ್‌ಎಸ್- ಎಎಚ್ಇಇಆರ್ ನಲ್ಲಿ ಎಂಬಿಬಿಎಸ್ ಕೋರ್ಸ್

KannadaprabhaNewsNetwork |  
Published : Oct 14, 2025, 01:00 AM IST
3 | Kannada Prabha

ಸಾರಾಂಶ

ಗ್ರಾಮದಲ್ಲಿ ಜ್ಯೋತಿ ಎಂಬವವರು ಸರ್ವೇ ಸಂಖ್ಯೆ 16/10 ರಲ್ಲಿ ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿದ್ದರು. ಈ ಜಾಗಕ್ಕೆ ಪಂಚಾಯಿತಿ ವತಿಯಿಂದ ಈ ಸ್ವತ್ತು ಕೂಡ ಮಾಡಿಕೊಡಲಾಗಿದೆ ಹಾಗೂ ಚೆಕ್ಕು ಬಂದಿ ಪಹಣಿಯಲ್ಲಿ ಸರ್ವೇ ಸಂಖ್ಯೆಯಲ್ಲಿ ರಸ್ತೆಯನ್ನು ಕೂಡ ತೋರಿಸಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಮಾರಿಷಸ್ ನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್- ಎಎಚ್‌ಇಆರ್) ವತಿಯಿಂದ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗಿದ್ದು, ನವೆಂಬರ್ ನಲ್ಲಿ ಮೊದಲ ವರ್ಷದ 100 ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಪ್ರೊ ಚಾನ್ಸಲರ್ ಡಾ.ಬಿ. ಸುರೇಶ್ ತಿಳಿಸಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಿಷಸ್‌ ನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅಲ್ಲಿನ ಸರ್ಕಾರದ ಉನ್ನತ ಶಿಕ್ಷಣ ಆಯೋಗದಿಂದ ಅನುಮೋದನೆ ಸಿಕ್ಕಿದೆ. ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಪ್ರಸಕ್ತ ವರ್ಷದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ದಿವ್ಯಸಂಕಲ್ಪ ಹಾಗೂ ದೂರದೃಷ್ಟಿಯ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಅಧಿಕೃತ ಅಂಗೀಕಾರದೊಂದಿಗೆ, ಜೆಎಸ್‌ಎಸ್ ಮಹಾವಿದ್ಯಾಪೀಠ ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಮೊದಲ ವರ್ಷ 100 ಸೀಟುಗಳ ಪ್ರವೇಶಕ್ಕೆ ಮಾರಿಷಸ್ ಸರ್ಕಾರದಿಂದ ಅನುಮತಿ ದೊರೆತಿದೆ. ಇದೇ ನವೆಂಬರ್‌ ನಲ್ಲಿ ಆರಂಭಿಸಲಾಗುವುದು. ಭಾರತದ ನೀಟ್ ಹಾಗೂ ಬೇರೆ ದೇಶದ ವಿದ್ಯಾರ್ಥಿಗಳು ಅಲ್ಲಿನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಎನ್‌ಎಂಸಿ (ನ್ಯಾಷನಲ್ ಮೆಡಿಕಲ್ ಕೌನ್ಸಿಲ್) ಮಾರ್ಗಸೂಚಿಯಂತೆ ಕೋರ್ಸ್ ನಡೆಸಲಾಗುವುದು ಎಂದರು.ವೈದ್ಯಕೀಯ ಶಿಕ್ಷಣವನ್ನು ಭಾರತೀಯ ಪಠ್ಯಕ್ರಮದಲ್ಲೇ ಬೋಧಿಸಲಾಗುವುದು. ಬೋಧಕರಲ್ಲಿ ಬಹುತೇಕರು ನಮ್ಮ ದೇಶದವರೇ ಇರುತ್ತಾರೆ. ಅಲ್ಲದೆ ಕ್ಲಿನಿಕಲ್ ತರಬೇತಿಯನ್ನು ಕೊಡಲಾಗುವುದು. ಇದಕ್ಕೆ ಬೇಕಾದ ಸೌಕರ್ಯ, ಅತ್ಯಾಧುನಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ, ಎಫ್‌ಎಂಜಿ (ಫಾರಿನ್ ಮೆಡಿಕಲ್ ಗ್ರಾಜುಯೇಟ್) ಪರೀಕ್ಷೆಗೆ ಬೇಕಾಗುವ ತರಬೇತಿಯನ್ನು ನೀಡಲಾಗುವುದು. ಅಲ್ಲಿನ ಆರೋಗ್ಯ ಇಲಾಖೆ ಎಸ್‌ಎಸ್‌ಆರ್‌ಎನ್ ಆಸ್ಪತ್ರೆ, ಐದು ಪ್ರಾದೇಶಿಕ ಆಸ್ಪತ್ರೆಗಳು ಮತ್ತು ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 600 ಹಾಸಿಗೆಗಳ ಸೌಲಭ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗೆ ಒದಗಿಸಿದೆ ಎಂದು ಅವರು ವಿವರಿಸಿದರು.ಭಾರತದಿಂದ ವಿದ್ಯಾರ್ಥಿಗಳು ಹೊರ ದೇಶಗಳಿಗೆ ಎಂಬಿಬಿಎಸ್‌ ಗಾಗಿ ತೆರಳುವುದು ಹಾಗೂ ಕೊರೋನಾ, ಯುದ್ಧದ ವೇಳೆ ಅಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದೇ ವಾಪಸಾಗುವುದು ಗಮನಕ್ಕೆ ಬಂತು. ಹೀಗಾಗಿ, ಮಾರಿಷಸ್ ಸರ್ಕಾರದ ಅನುಮೋದನೆಯೊಡನೆ ಸಂಸ್ಥೆಯ ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯದಲ್ಲಿ ಎಂಬಿಬಿಎಸ್ ಶಿಕ್ಷಣ ಪ್ರಾರಂಭಿಸಲಾಗುತ್ತಿದೆ. ಭಾರತದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಭಾರತೀಯ ಮೂಲದವರು, ಇನ್ನಿತರರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.ಮಾರಿಷಸ್‌ನಲ್ಲಿ ಬಹುತೇಕ ಮಂದಿ ಭಾರತೀಯ ಮೂಲದವರೇ ಆಗಿದ್ದಾರೆ. ಹೀಗಾಗಿ, ಇಲ್ಲಿಂದ ಭಾರತೀಯರು ಹೋಗಿ ವಿದ್ಯಾಭ್ಯಾಸ ಮಾಡುವುದು ಕಷ್ಟದ ಕೆಲಸವಾಗದು. ಈ ಕೋರ್ಸ್‌ ಗೆ ಮಾರಿಷಸ್ ಸರ್ಕಾರದಿಂದ ಅನುಮೋದನೆ ದೊರೆತಿದೆ. ಶುಲ್ಕ ಸಹಾ ಕಡಿಮೆ ಇರಲಿದೆ. ಅಕಾಡೆಮಿ ಎಂಬಿಬಿಎಸ್ ಪದವಿ ನೀಡಿದರೆ, ಅದಕ್ಕೆ ಎಲ್ಲೆಡೆ ಮಾನ್ಯತೆ ಇದೆ ಎಂದು ಅವರು ತಿಳಿಸಿದರು. ಮಾರಿಷಸ್ ನಲ್ಲಿ 2006ರಲ್ಲಿ ಆರಂಭಮಾರಿಷಸ್‌ ನಲ್ಲಿ 2006 ರಲ್ಲಿ ಸ್ಥಾಪಿತವಾದ ಜೆಎಸ್‌ಎಸ್ ಅಕಾಡೆಮಿ ಆ ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಿದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಬಳಿಕ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಆರೋಗ್ಯ ವಿಜ್ಞಾನ, ಲೈಫ್ ಸೈನ್ಸ್ ಹಾಗೂ ಮ್ಯಾನೇಜ್‌ ಮೆಂಟ್ ವಿಭಾಗದಲ್ಲಿ 9 ಯುಜಿ, ಪಿಜಿ ಕೋರ್ಸ್‌ ಗಳನ್ನು ನಡೆಸುತ್ತಿದೆ. ಜೆಎಸ್‌ಎಸ್ ಎಜುಕೇಶನ್ ಫೌಂಡೇಷನ್ ಪ್ರೈ.ಲಿ ಇದನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಮಾರಿಷಸ್‌ ನ ವಕೋಯಾಸ್ ಉಪನಗರದ ಬೋನ್‌ ಟೇರ್‌ ನಲ್ಲಿ 8 ಎಕರೆ ಪ್ರದೇಶದ ಕ್ಯಾಂಪಸ್‌ ನ 14689 ಚ.ಮೀ. ವಿಸ್ತೀರ್ಣದಲ್ಲಿ ಅಕಾಡೆಮಿಯ ಕಟ್ಟಡ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ದರ್ಜೆಯ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಸಿಮ್ಯುಲೇಷನ್ ಮತ್ತು ಕೌಶಲ ತರಬೇತಿ ಹಾಗೂ ವಸತಿ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪದವಿ ಪ್ರದಾನ ಅಧಿಕಾರ ಹೊಂದಿರುವ ಸಂಸ್ಥೆಯಾಗಿ 2018 ರಲ್ಲಿ ನೋಂದಣಿಯಾಗಿದೆ. 12 ದೇಶಗಳ ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.ಮಾರಿಷಸ್‌ ನ ಜೆಎಸ್‌ಎಸ್- ಎಎಚ್‌ಇಆರ್ ಸಂಸ್ಥೆ 2024ರಲ್ಲಿ ಟೈಮ್ಸ್ ಹೈಯರ್ ಎಜುಕೇಶನ್ ಸಬ್- ಸಹಾರನ್ ಆಫ್ರಿಕಾದ ರ್ಯಾಂಂಕಿಂಗ್‌ ನಲ್ಲಿ 81- 100 ಶ್ರೇಣಿಯಲ್ಲಿದ್ದರೆ, ವಿದ್ಯಾರ್ಥಿ ಪಾಲ್ಗೊಳ್ಳುವಿಕೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎಂಬಿಬಿಎಸ್ ಶಿಕ್ಷಣ ಮಾರಿಷಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನ ಸೆಳೆಯಲಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಿ ಮಾರಿಷಸ್‌ ನ ಶಿಕ್ಷಣ ಕ್ಷೇತ್ರವನ್ನು ಸುಭದ್ರಗೊಳಿಸುತ್ತದೆ. ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನವೀನತೆಗೆ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ನಿರ್ದೇಶಕ ಶಂಕರಪ್ಪ, ಜೆಎಸ್‌ಎಸ್‌- ಎಎಚ್‌ಇಆರ್ ಉಪಕುಲಪತಿ ಡಾ.ಎಚ್. ಬಸವನಗೌಡಪ್ಪ, ಕುಲಸಚಿವ ಡಾ.ಬಿ. ಮಂಜುನಾಥ್ ಮೊದಲಾದವರು ಇದ್ದರು.----ಕೋಟ್...ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯ ಮೇರೆಗೆ ಮಾರಿಷಸ್‌ ನಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಯಿತು. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಅನುವಾಗಲೆಂದು ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದ್ದು, ಮಾರಿಷಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. - ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ