ಟ್ರ್ಯಾಕ್ಟರ್ ಕಳವು ಪ್ರಕರಣ: ಆರೋಪಿ ಬಂಧನ

KannadaprabhaNewsNetwork |  
Published : Oct 14, 2023, 01:00 AM IST

ಸಾರಾಂಶ

ಟ್ರ್ಯಾಕ್ಟರ್ ಕಳವು ಪ್ರಕರಣ: ಆರೋಪಿ ಬಂಧನ

ಸಿರವಾರ : ತಾಲೂಕಿನ ಹರವಿ ಬಸವಣ್ಣ ಕ್ಯಾಂಪ್ ಸೇರಿದಂತೆ ಹಲವು ಕಡೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಗುರುಚಂದ್ರ ಯಾದವ್ ತಿಳಿಸಿದರು. ಕ್ಯಾಂಪ್ ಸೇರಿ ಹಲವೆಡೆ 12 ಲಕ್ಷ ರು.ಗೂ ಅಧಿಕ ಮೌಲ್ಯದ ಟ್ರ್ಯಾಕ್ಟರ್‌ ಮತ್ತು ಟ್ರ್ಯಾಲಿಗಳನ್ನು ಕಳ್ಳವು ಮಾಡಿದ್ದ ಮಲ್ಲಟ ಗ್ರಾಮದ ಮಲ್ಲಯ್ಯ ದುರುಗಪ್ಪನನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ತಿಳಿಸಿದರು. ಪಿಎಸ್ಐ ಗುರುಚಂದ್ರ ಯಾದವ್ ಅವರ ನೇತೃತ್ವದ ಮಲ್ಲೇಶ, ಸಂತೋಷ, ಭೀಮರಡ್ಡಿ, ಸುರೇಶ, ಅಮರೇಶ, ದೇವರಡ್ಡಿ ಪೊಲೀಸರ ತಂಡದಿಂದ ಕಾರ್ಯಚರಣೆ ಕೈಗೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ