ಸಾಂಪ್ರದಾಯಿಕ ದಿರಿಸು ಸಂಸ್ಕೃತಿಯ ಪ್ರತಿಬಿಂಬ: ರಿತಿಕಾ ಕಿಣಿ

KannadaprabhaNewsNetwork |  
Published : Nov 19, 2026, 02:15 AM IST
ಭಟ್ಕಳದ ಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ಮತ್ತು ಗುಂಪು ನೃತ್ಯ ಸ್ಪರ್ಧೆ ನೃತ್ಯಾಂಜಲಿ- ೨೦೨೬ರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ನಮ್ಮ ಆಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ನಾವು ಧರಿಸಿರುವ ಸಾಂಪ್ರದಾಯಿಕ ಉಡುಗೆಗಳು ಕೇವಲ ಬಟ್ಟೆಗಳಲ್ಲ. ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ.

ಭಟ್ಕಳ: ಇಲ್ಲಿಯ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ ಮತ್ತು ಗುಂಪು ನೃತ್ಯ ಸ್ಪರ್ಧೆ ನೃತ್ಯಾಂಜಲಿ- ೨೦೨೬ಅನ್ನು ಉದ್ಯಮಿ ರಿತಿಕಾ ಕಿಣಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಮ್ಮ ಆಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ನಾವು ಧರಿಸಿರುವ ಸಾಂಪ್ರದಾಯಿಕ ಉಡುಗೆಗಳು ಕೇವಲ ಬಟ್ಟೆಗಳಲ್ಲ. ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಪರಂಪರೆಯ ಸಂಕೇತ ಹಾಗೂ ನಮ್ಮ ಪೂರ್ವಜರು ನಮಗೆ ನೀಡಿರುವ ಅಮೂಲ್ಯ ಕೊಡುಗೆಗಳಾಗಿವೆ ಎಂದರು.

ನಿರ್ಣಾಯಕರಾದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ರೋಟರಿ ವೋಕೇಷನಲ್ ಟ್ರೇನಿಂಗ್ ಸೆಂಟರನ ತರಬೇತುದಾರೆ ರೇಷ್ಮಾ ನಾಯ್ಕ ಮಾತನಾಡಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪ್ರಕಾಶ ಶಿರಾಲಿ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಸಲ್ಮಾನ ಮತ್ತು ನಂದಿತಾ ಕಾಮತ ನಿರ್ಣಾಯಕರಾಗಿ ಭಾಗವಹಿಸಿದ್ದರು. ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಿಭಾಗದಲ್ಲಿ ಕರಣ ಸೋಮಶೇಖರ ನಾಯ್ಕ, ವಿದ್ಯಾರ್ಥಿನಿಯರ ವಿಭಾಗದಲ್ಲಿ ಸಿಂಧು ಶಿವಾಜಿ ಆರೇರಾ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಿಭಾಗದಲ್ಲಿ ಸಂಜೀವ ಗೊಂಡ ಮತ್ತು ವಿದ್ಯಾರ್ಥಿನಿಯರ ವಿಭಾಗದಲ್ಲಿ ತನ್ಮಯಿ ಕಿಣಿ ಪ್ರಥಮ ಬಹುಮಾನ ಪಡೆದುಕೊಂಡರು. ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಬಿ. ವಿಭಾಗ ಪ್ರಥಮ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ದ್ವಿತೀಯ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ ತ್ರತೀಯ ಬಹುಮಾನ ಪಡೆದುಕೊಂಡರೆ, ವಿದ್ಯಾರ್ಥಿನಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ಎ ವಿಭಾಗ ಪ್ರಥಮ, ಪ್ರಥಮ ಪಿಯುಸಿ ವಿಜ್ಞಾನ ಎ ವಿಭಾಗ ದ್ವಿತೀಯ ಮತ್ತು ಪ್ರಥಮ ಪಿಯುಸಿ ವಿಜ್ಞಾನ ಬಿ ವಿಭಾಗ ತ್ರತೀಯ ಬಹುಮಾನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ