ಅಕ್ರಮ ಪಡಿತರ ಅಕ್ಕಿ ಸಾಗಾಟ: ಪ್ರಕರಣ ದಾಖಲು

KannadaprabhaNewsNetwork |  
Published : Nov 20, 2023, 12:45 AM IST
19ಐಎನ್‌ಡಿ3,ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಬುಲೇರೋ ವಾಹನ ಹಾಗೂ ಆರೋಪಿಯನ್ನು ಬಂಧಿಸಿದ ಹೊರ್ತಿ ಪೊಲೀಸರು. | Kannada Prabha

ಸಾರಾಂಶ

ಇಂಡಿ ಗ್ರಾಮೀಣ ಸಿಪಿಐ ಎಂ.ಎಂ.ಡಪ್ಪಿನ ಹಾಗೂ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ದಾಳಿ ಮಾಡಿ ಬುಲೆರೋ ವಾಹನ ವಶಪಡಿಸಿಕೊಂಡು ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.

ಇಂಡಿ: ತಾಲೂಕಿನ ತಡವಲಗಾ ಹಳೆ ರಸ್ತೆಯ ಸಾಧು ಮುತ್ಯಾನ ವಸತಿ ಸಮೀಪ ಬುಲೇರೋ ಪಿಕ್‌ಆಪ್‌ ವಾಹನದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂಡಿ ಗ್ರಾಮೀಣ ಸಿಪಿಐ ಎಂ.ಎಂ.ಡಪ್ಪಿನ ಹಾಗೂ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ದಾಳಿ ಮಾಡಿ ಬುಲೆರೋ ವಾಹನ ವಶಪಡಿಸಿಕೊಂಡು ಹಾಗೂ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. 50 ಕೆಜಿ ಪಡಿತರ ಅಕ್ಕಿ ತುಂಬಿದ ಒಟ್ಟು 15 ಚೀಲಗಳು ,ಒಟ್ಟು 640 ಕೆಜಿಯ 14,080 ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಇಂಡಿ ಹೊರ್ತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!