ನಿಷೇಧಿತ ಡ್ರಗ್ಸ್‌ ಸಾಗಾಟ: ಉಗಾಂಡಾ ಮಹಿಳೆಗೆ 10 ವರ್ಷ ಕಠಿಣ ಶಿಕ್ಷೆ ಪ್ರಕಟ

KannadaprabhaNewsNetwork |  
Published : Nov 20, 2026, 01:45 AM IST
19ಎಚ್ಎಸ್ಎನ್14 :  | Kannada Prabha

ಸಾರಾಂಶ

ಹುಬ್ಬಳ್ಳಿ ಮೂಲಕ ರೈಲಿನಲ್ಲಿ ನಿಷೇಧಿತ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಉಗಾಂಡಾ ದೇಶದ ಮಹಿಳೆಗೆ ಜಿಲ್ಲಾ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು ₹ 1 ಲಕ್ಷ ದಂಡದ ಶಿಕ್ಷೆ ವಿಧಿಸಿ ಆದೇಶಿಸಿದೆ.

ಧಾರವಾಡ:

ಹುಬ್ಬಳ್ಳಿ ಮೂಲಕ ರೈಲಿನಲ್ಲಿ ನಿಷೇಧಿತ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಉಗಾಂಡಾ ದೇಶದ ಮಹಿಳೆಗೆ ಜಿಲ್ಲಾ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು ₹ 1 ಲಕ್ಷ ದಂಡದ ಶಿಕ್ಷೆ ವಿಧಿಸಿ ಆದೇಶಿಸಿದೆ.

ಆಫ್ರೀಕಾದ ಉಗಾಂಡಾ ದೇಶದ ಅಗ್ನಸ್ ನಗ್ಗಾವಿ 2022ರ ಜ. 6ರಂದು ರಾತ್ರಿ 10ಕ್ಕೆ ದೆಹಲಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೆಟಾಮಾರ್ಫಿನ್ ಎಂಬ ನಿಷೇಧಿತ ಡ್ರಗ್ಸ್‌ ಸಾಗಾಟ ಮಾಡುತ್ತಿದ್ದಳು. ಈ ವೇಳೆ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಟೀಮ್‌ಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಆರ್‌ಪಿಎಫ್ (ರೈಲ್ವೆ ಪ್ರೊಟೆಕ್ಷನ್ ಪೋರ್ಸ್‌) ತಂಡದೊಂದಿಗೆ ರೈಲಿನಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿತಳಿಂದ 995 ಗ್ರಾಂ ನಿಷೇಧಿತ ಮೆಟಾಮಾರ್ಫಿನ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಇದೇ ವೇಳೆ ಅವಳೊಂದಿಗಿದ್ದ ಇನ್ನೊಬ್ಬ ಆರೋಪಿ ಉಗಾಂಡಾದ ಕಡು ವಿಲಿಯಮ್ ಅಗಷ್ಟಿಂನ್ ವಿಲ್ಲಿಯನ್‌ನ್ನು ಬಂಧಿಸಲಾಗಿತ್ತು.

ತನಿಖಾಧಿಕಾರಿ ಎನ್‌ಸಿಬಿ ಇಂಟಲಿಜೆನ್ಸ್ ಆಫೀಸರ್ ಬಿನೋದಕುಮಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಗ್ನಸ್ ನಗ್ಗಾವಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ಜತೆಗೆ ಎರಡನೇ ಆರೋಪಿ ಕಡು ವಿಲಿಯಮ್‌ಗೆ ಸೂಕ್ತ ಸಾಕ್ಷಾಧಾರಗಳ ಲಭ್ಯವಾಗದ ಕಾರಣ ಆತನನ್ನು ಪ್ರಕರಣದಿಂದ ಮುಕ್ತಗೊಳಿಸಿದೆ. ಈತನು ನಕಲಿ ಪಾಸ್‌ಪೋರ್ಟ್‌ ಮೇಲೆ ಭಾರತದಲ್ಲಿ ವಾಸವಾಗಿದ್ದರಿಂದ ಅವನಿಗೆ ಕೇಂದ್ರೀಯ ವಿದೇಶಾಂಗ ಕಾರ್ಯಾಲಯಕ್ಕೆ ಒಪ್ಪಿಸಲಾಗಿದೆ.

ಇಬ್ಬರೂ ಆರೋಪಿತರು ಈ ಪ್ರಕರಣ ದಾಖಲಾದಾಗಿನಿಂದ ಈ ವರೆಗೆ ನ್ಯಾಯಾಂಗ ಬಂಧನದಲ್ಲಿ ಇಟ್ಟಿರುವುದು ವಿಶೇಷ. ಕೇಂದ್ರ ಸರ್ಕಾರದ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಪರವಾಗಿ ನ್ಯಾಯವಾದಿ ಅವಿನಾಶ ಅಂಗಡಿ ವಾದ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರ್ಯಾಕ್ಟರ್‌ಗಳಲ್ಲಿ ಹಾಡುಗಳ ಅಬ್ಬರ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ