ಕನ್ನಡಪ್ರಭ ವಾರ್ತೆ ಆಲೂರು
ಹಲವಾರು ಗ್ರಾಮೀಣ ಭಾಗದ ರೈಲ್ವೆ ನಿಲ್ದಾಣಗಳಲ್ಲಿ ಮೆಸೆಂಜರ್ ರೈಲುಗಳ ನಿಲುಗಡೆ ಮಾಡುತ್ತಾ ಬಂದಿರುವ ರೈಲ್ವೆ ಇಲಾಖೆಯವರು ತಾಲೂಕು ಕೇಂದ್ರವಾದ ಆಲೂರು ರೈಲ್ವೆ ನಿಲ್ದಾಣದಲ್ಲಿ ಕುಂಟು ನೆಪ ಹೇಳಿ ನಿಲುಗಡೆಯನ್ನು ರದ್ದುಗೊಳಿಸಿರುವುದು ತಾಲೂಕಿನ ಜನತೆಗೆ ಮಾಡಿದ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಗುರುವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಆಲೂರಿಗೆ ದಂಪತಿಗಳಿಬ್ಬರಿಗೆ ಟಿಕೆಟ್ ನೀಡಿ ಇಲ್ಲಿ ರೈಲನ್ನು ನಿಲ್ಲಿಸದೆ ಸಕಲೇಶಪುರ ನಿಲ್ದಾಣದಲ್ಲಿ ಅವರನ್ನು ಇಳಿಸಲಾಗಿದೆ. ನಿಲುಗಡೆಯನ್ನು ರದ್ದುಗೊಳಿಸಿದ್ದರೆ ಯಶವಂತಪುರ ನಿಲ್ದಾಣದಲ್ಲಿ ಟಿಕೆಟ್ ಪಡೆದ ದಂಪತಿಗೆ ಆಲೂರಿಗೆ ಟಿಕೆಟ್ ನೀಡಿರುವುದಾದರೂ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಆಲೂರಿನಲ್ಲಿ ನಿಲುಗಡೆ ರದ್ದುಗೊಳಿಸಿರುವುದು ರೈಲ್ವೆ ಇಲಾಖೆಯವರಿಗೆ ತಿಳಿದಿದೆಯೋ ಇಲ್ಲವೋ ಅಥವಾ ಇಲಾಖೆಯವರಲ್ಲಿಯೇ ಸಂವಹನ ಇಲ್ಲವೇ ಎಂಬುದು ತಿಳಿಯದಾಗಿದೆ. ರೈಲುಗಳ ಬರುವಿಕೆ ನಿಲುಗಡೆ ಕ್ರಾಸಿಂಗ್ ಪ್ರತಿಯೊಂದು ವಿಚಾರದ ಕ್ಷಣದ ಮಾಹಿತಿಯು ಸಹ ರೈಲ್ವೆ ಸಿಬ್ಬಂದಿಗೆ ರೈಲ್ವೆ ನೌಕರರಿಗೆ ಇರಬೇಕಲ್ಲವೇ. ನಿಲ್ದಾಣದಲ್ಲಿ ನಿಲುಗಡೆ ರದ್ದುಗೊಳಿಸಿರುವ ವಿಚಾರವೇ ತಿಳಿಯದೆ ಇದ್ದರೆ ಇನ್ನೂ ರೈಲಿನ ಬರುವಿಕೆ ನಿಲುಗಡೆ ಮತ್ತೊಂದರ ವಿಚಾರಗಳು ಇವರಿಗೆ ಹೇಗೆ ತಿಳಿಯುತ್ತದೆ.
ಒಂದೆಡೆ ರೈಲು ನಿಲುಗಡೆ ರದ್ದಾಗಿರುವ ಬೇಸರ ಇನ್ನೊಂದೆಡೆ ರೈಲ್ವೆ ಇಲಾಖೆಯವರ ಬೇಜವಬ್ದಾರಿತನದ ವರ್ತನೆ. ಇವೆರಡರಿಂದಾಗಿಯೂ ಅನುಭವಿಸುತ್ತಿರುವವರು ಆಲೂರಿನ ಜನತೆ. ಇಷ್ಟಾದರೂ ಸಹ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದೆ ಏನು ಮಾಡುತ್ತಿದ್ದಾರೆ, ಅವರಿಗೂ ಇದಕ್ಕೂ ಅವರಿಗೂ ಸಂಬಂಧವಿಲ್ಲವೇ ಎಂಬುದು ತಿಳಿಯದಾಗಿದ್ದು, ಸಂಬಂಧಪಟ್ಟವರು ಶೀಘ್ರ ಇತ್ತ ಗಮನ ಹರಿಸಿ ರೈಲು ನಿಲುಗಡೆಯನ್ನು ನೀಡದೆ ಹೋದರೆ ಪುನಃ ನಾಗರಿಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಹೇಮಂತ್ ಮಾತನಾಡಿ, ಇದಕ್ಕೆಲ್ಲ ಇಲಾಖೆಯವರ ಬೇಜವಾಬ್ದಾರಿಯೇ ಕಾರಣ. ಈ ಸಂಬಂಧವಾಗಿ ಈಗಾಗಲೇ ರೈಲ್ವೆ ಸಚಿವರು ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು ಅವರುಗಳಿಗೆ ಇಲ್ಲಿ ರೈಲು ನಿಲುಗಡೆ ರದ್ದುಗೊಳಿಸಿರುವುದು ತಿಳಿದಿಲ್ಲ, ಶೀಘ್ರದಲ್ಲಿ ಇಲ್ಲಿ ಪುನಃ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆಂದು ತಿಳಿಸಿದರು.
ಹಲವಾರು ವರ್ಷಗಳ ಹೋರಾಟದ ಫಲವಾಗಿ ಈ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಲಾಗಿತ್ತು, ಆದರೆ ಇಲಾಖೆಯವರು ಏಕಾಏಕಿ ನಿಲುಗಡೆ ರದ್ದುಗೊಳಿಸಿರುವುದು ಖಂಡನೀಯ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಪುನಃ ಇಲ್ಲಿ ರೈಲು ನಿಲುಗಡೆ ನೀಡದೇ ಹೋದರೆ ರೈಲು ತಡೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು.
* ಹೇಳಿಕೆ 2
- ಶ್ರೀಧರ್, ಪ್ರಯಾಣಿಕ =================================================
ಯಶವಂತಪುರದಿಂದ ಆಲೂರಿಗೆ ನೀಡಿರುವ ರೈಲ್ವೆ ಟಿಕೆಟ್.