ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸ್ತುತ ನಗರದ ಕೆಎಸ್‌ಆರ್, ಯಶವಂತಪುರ ಮತ್ತು ಎಸ್‌ಎಂವಿಟಿ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ನಿಲ್ದಾಣದ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರು ಇದರ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಮುಂದಿನ ಹಂತಗಳಲ್ಲಿ ಇತರೆ ಜನದಟ್ಟಣೆಯ ನಿಲ್ದಾಣಗಳಲ್ಲಿ ಎಂ-ಯುಟಿಎಸ್ ಜಾರಿಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಟಿಕೆಟ್ ನೀಡುವ ಪ್ರಕ್ರಿಯೆ ಸರಳಗೊಳಿಸುವ ಮತ್ತು ಬಹುಬೇಗ ಪ್ರಯಾಣಿಕರು ಟಿಕೆಟ್ ಪಡೆಯುವಂತಾಗಲು ಈ ಸೌಲಭ್ಯ ತರಲಾಗಿದೆ. ಇದಕ್ಕಾಗಿ ನವೀನ ಸಾಧನ ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಸಿಬ್ಬಂದಿ ನಿರ್ವಹಿಸುವ ಈ ಹ್ಯಾಂಡ್‌ಹೆಲ್ಡ್ ಸಾಧನಗಳು ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ತ್ವರಿತವಾಗಿ ವಿತರಿಸಲಿವೆ.ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಇರುವ ಸಾಂಪ್ರದಾಯಿಕ ಟಿಕೆಟ್ ಕೌಂಟರ್‌ಗಳಂತೆ, ಈ ಯಂತ್ರಗಳಿಗೆ ನಿಶ್ಚಿತ ಜಾಗ ಮತ್ತಿತರ ಸಾಧನಗಳು ಅಗತ್ಯವಿಲ್ಲ. ನಿಲ್ದಾಣದ ಯಾವುದೇ ಸ್ಥಳದಲ್ಲಾದರೂ ಟಿಕೆಟ್ ನೀಡಬಹುದಾಗಿದೆ, ಇದರಿಂದ ಟಿಕೆಟ್ ಕೌಂಟರ್ ಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಜೊತೆಗೆ ಪ್ರಯಾಣಿಕರಿಗೆ ತಾವಿದ್ದಲ್ಲೇ ಟಿಕೆಟ್ ಪಡೆಯುವ ಅವಕಾಶ ಲಭ್ಯವಾಗಲಿದೆ.
ಎಂ-ಯುಟಿಎಸ್ ಸೌಲಭ್ಯ ವಿಶೇಷವಾಗಿ ಪ್ರಯಾಣಿಕರ ದಟ್ಟಣೆ ಸಮಯದಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಈ ಯಂತ್ರಗಳನ್ನು ನಿಲ್ದಾಣದಲ್ಲಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದ್ದು, ಸರದಿಯಲ್ಲಿ ಟಿಕೆಟ್‌ಗಾಗಿ ಕಾಯುವ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.-ತ್ರಿನೇತ್ರ, ಬೆಂಗಳೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು, ನೈಋತ್ಯ ರೈಲ್ವೆ