ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಕಾಫಿ ಗಿಡಗಳಿಗೆ ಮತ್ತು ಬಳ್ಳಿಗಳಿಗೆ ಪೂರಕ ಆಹಾರವನ್ನು ಪೂರೈಕೆ ಮಾಡಬೇಕು ಎಂದರು.ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಈ ಭಾಗದಲ್ಲಿ ಕಾಳುಮೆಣಸಿನ ತೇವಂ ಮತ್ತು ಕೂರ್ಗ್ ಎಕ್ಸಲ್ ತಳಿಯನ್ನು ಬೆಳೆಯಯುವುದು ಸೂಕ್ತ. ಕೂರ್ಗ್ ಎಕ್ಸಲ್ ತಳಿಯು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಪಡೆದುಕೊಳ್ಳಬಹುದು ಎಂದರು.
ಅಡಕೆ, ಕಾಫಿ, ಕಿತ್ತಳೆ ಬೆಳೆಯ ಬಗ್ಗೆ ಮಾಹಿತಿ ಕೂಡ ನೀಡಿದರು.ಹುಣಸೂರು ತಂಬಾಕು ಸಂಶೋಧನ ಕೇಂದ್ರದ ವಿಷಯ ತಜ್ಞ ಕೆ.ಪಿ.ರಾಘವೇಂದ್ರ, ಮುಂಗಾರು ಹಂಗಾಮಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾಳುಮೆಣಸು ಕೃಷಿಯ ಬಗ್ಗೆ ಮಡಿಕೇರಿ ಅಪ್ಪಂಗಳ ವಿಸ್ತರಣಾ ಸಂಸ್ಕರಣ ಘಟಕದ ದೇವರಾಜು, ಭತ್ತ ಕೃಷಿಯ ಬಗ್ಗೆ ಮಡಿಕೇರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಮಾಹಿತಿ ನೀಡಿದರು.
ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಶಾಂತಳ್ಳಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶಾರದಾ, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ. ಜಯರಾಮ್, ಸೋಮವಾರಪೇಟೆಯ ಪುಷ್ಪಗಿರಿ ರೈತ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಬನ್ನಳ್ಳಿ ಸತೀಶ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಟಿ. ಪರಮೇಶ್, ತಾಲೂಕು ರೈತ ಸಂಘ ಅಧ್ಯಕ್ಷ ಕೆ.ಎಂ.ದಿನೇಶ್, ಪ್ರಮುಖರಾದ ನಾಪಂಡ ಪೂಣಚ್ಚ, ವಿದ್ಯಾ ಮಧುಕುಮಾರ್, ಶನಿವಾರಸಂತೆ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ವೇದಪ್ರಿಯಾ, ಕುಶಾಲನಗರ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ಅರ್ಪಿತಾ ಇದ್ದರು.