ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆ ಕೊಡಗು ಸಹಯೋಗದಲ್ಲಿ ಕೊಡಗಿನ ಸುಂಟಿಕೊಪ್ಪದ ಡಾ.ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಸಂವಿಧಾನ ಪ್ರಸ್ತಾವನೆ ಓದುವ ಮೂಲಕ ಉದ್ಘಾಟಿಸಲಾಯಿತು.
ಸುಂಟಿಕೊಪ್ಪ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆ ಕೊಡಗು ಸಹಯೋಗದಲ್ಲಿ ಕೊಡಗಿನ ಸುಂಟಿಕೊಪ್ಪದ ಡಾ.ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಸಂವಿಧಾನ ಪ್ರಸ್ತಾವನೆ ಓದುವ ಮೂಲಕ ಉದ್ಘಾಟಿಸಲಾಯಿತು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್ ಮಾತನಾಡಿ, ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಲು ಇಂತಹ ಕಾರ್ಯಕ್ರಮಗಳು ಮುಖ್ಯ ಎಂದರು.
ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ್ ಮ್ಯಾಥ್ಯೂ, 17 ವಿಷಯಗಳನ್ನು ಸಿ,ಎಂ.ಸಿ.ಎ(ಚಿಲ್ಡ್ರನ್ ಮುಮೆಂಟ್ ಫಾರ್ ಸಿವಿಕ್ ಅವೆರ್ನೆಸ್) ಸಹಯೋಗದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು. ಜಿಲ್ಲೆಯ ಸಂಯೋಜಕರಾದ ನೀತು, ಶಾಲೆಯ ಪ್ರಾಂಶುಪಾಲ ಷಡಕ್ಷರಿ, ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ತರಬೇತುದಾರರಾದ ಅನಿತಾ ಮತ್ತು ಜಿಲ್ಲೆಯ ಎಲ್ಲಾ ಸಮಾಜ ಶಿಕ್ಷಕರು ಮತ್ತು ನಾವು ಸಂಸ್ಥೆಯ ಶಿಲ್ಪ, ಸುಬಾನ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.