ಅಕ್ಟೋಬರ್‌ 10ರಿಂದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

KannadaprabhaNewsNetwork |  
Published : Oct 01, 2025, 01:01 AM IST
ಪೊಟೋ ಪೈಲ್ ನೇಮ್ 28ಎಸ್‌.ಜಿ.ವಿ 7 ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ರ ಪಾಟೀಲ ಮಾತನಾಡುತ್ತಿರುವದು | Kannada Prabha

ಸಾರಾಂಶ

ಪಂಚಮಸಾಲಿ ಸಮಾಜದ ಸ್ವಾಭಿಮಾನದ ವಿಶೇಷ ಉಚಿತ ತರಬೇತಿ ಕಾರ್ಯಾಲಗಾರವನ್ನು ಅ. 10ರಿಂದ ಎರಡು ದಿನ ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಹಮ್ಮಿಕೊಳ್ಳಲಾಗಿದೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ರ ಪಾಟೀಲ ಹೇಳಿದರು.

ಶಿಗ್ಗಾಂವಿ:ಪಂಚಮಸಾಲಿ ಸಮಾಜದ ಸ್ವಾಭಿಮಾನದ ವಿಶೇಷ ಉಚಿತ ತರಬೇತಿ ಕಾರ‍್ಯಾಗಾರವನ್ನು ಅ. 10ರಿಂದ ಎರಡು ದಿನ ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಹಮ್ಮಿಕೊಳ್ಳಲಾಗಿದೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ರ ಪಾಟೀಲ ಹೇಳಿದರು. ಪಟ್ಟಣದ ವೀರಶೈವ ಪಂಚಮಸಾಲಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ವಿಶೇಷ ತರಬೇತಿಯನ್ನು ಶಿಗ್ಗಾಂವಿ ಪಂಚಮಸಾಲಿ ಭವನದಲ್ಲಿ ಅ.೧೦ ಮತ್ತು ೧೧ರಂದು ಹಮ್ಮಿಕೊಂಡು ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರ ಚೇತನಕುಮಾರ ಅವರಿಂದ ವಿಶೇಷ ತರಬೇತಿ ಮತ್ತು ಸಾಯಂಕಾಲ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮುಖ್ಯ ಉದ್ದೇಶ ನಮ್ಮದಾಗಿದೆ ಹಾಗೂ ೨೫೦ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅದರಲ್ಲಿ ೧೦ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ತರಬೇತಿ ನೀಡುತ್ತೇವೆ ಅಲ್ಲದೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫೇಲಾದ ೧೮-೩೫ ವರ್ಷದ ವಯೋಮಾನದ ವಿದ್ಯಾರ್ಥಿ ಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತೇವೆ ಎಂದರು.ಅ. ೧೧ರ ಸಾಯಂಕಾಲ ೪ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಮಾಜ ಸೇವಕಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸುತ್ತೇವೆ ಎಂದರು. ವ್ಯಕ್ತಿತ್ವ ವಿಕಸನ ತರಬೇತಿ ಮಹೇಶ ಡಾವಣಗೆರೆಯವರ ನೇತೃತ್ವದಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಲು ೯೭೩೯೭೮೮೮೦೧ ಕೋರಲಾಗಿದೆ. ಸಮಾಜದ ಅಧ್ಯಕ್ಷ ವೀರೇಶ್ ಆಜೂರ್ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಪಿ.ಡಿ. ಶಿರೂರ, ಮಹೇಶ್ ಹಾವೇರಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ್ ಮತ್ತಿಹಳ್ಳಿ, ರಾಜ್ಯ ಉಪಾಧ್ಯಕ್ಷ ಶಂಕರ್ ಬಿಸರಹಳ್ಳಿ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪ್ರೇಮಾ ಪಾಟೀಲ, ಅರುಣ ಹುಡೇದಗೌಡ್ರ, ಮೇಘರಾಜ ಕೂಲಿ, ವಿಶ್ವನಾಥ ಹರವಿ, ಸಿ.ವ್ಹಿ.ಮತ್ತಿಗಟ್ಟಿ, ಎಫ್.ಸಿ. ಪಾಟೀಲ, ಜಿ.ಎನ್. ಯಲಿಗಾರ, ಭರಮಜ್ಜ ನವಲಗುಂದ, ಶಿವಾನಂದ ಮ್ಯಾಗೇರಿ, ಸಿ.ಎಸ್. ಪಾಟೀಲ, ಕೊಟ್ರಪ್ಪ ನಡೂರ, ಮಂಜುನಾಥ ಮಣ್ಣಣ್ಣವರ, ವಸಂತಾ ಬಾಗೂರ, ರಮೇಶ ಸಾತಣ್ಣವರ, ಬಸವರಾಜ ಗೊಬ್ಬಿ, ರೇಣುಕನಗೌಡ ಪಾಟೀಲ, ಸೂಜಿ ಮಹಾಂತೇಶ, ಅನಿಲ ಸಾತಣ್ಣವರ, ಬಸವರಾಜ ಮರ‍್ಜಿ, ಸಿ.ಡಿ. ಯತ್ನಳ್ಳಿ,ಎಸ್.ಎನ್. ಮುಗಳಿ, ಬಿ.ಎಸ್. ಅಂಗಡಿ, ಎಂ.ಬಿ. ಹಳೇಮನಿ, ರಮೇಶ ವನಹಳ್ಳಿ, ಸೋಮು ಆಜೂರ, ಗುರು ಅಣ್ಣಿಗೇರಿ, ಪ್ರಶಾಂತ ಬಡ್ಡಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಶ್ರೀಕಾಂತ ಪೂಜಾರ ಕಾರ‍್ಯಕ್ರಮ ನಿರ್ವಹಿಸಿದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ