ಬೇಕರಿ ತಿಂಡಿಗಳಲ್ಲಿ ಟ್ರಾನ್ಸ್‌ ಕೊಬ್ಬು : ಪರ್ಯಾಯ ಪದಾರ್ಥ ಉಪಯೋಗಿಸಿ

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 11:12 AM IST
47 | Kannada Prabha

ಸಾರಾಂಶ

ಬೇಕರಿ ವೃತ್ತಿಪರರು ಟ್ರಾನ್ಸ್‌ ಕೊಬ್ಬು ಬದಲು ಪರ್ಯಾಯ ಪದಾರ್ಥಗಳನ್ನು ಉಪಯೋಗಿಸಿ ಎಂದು ಆಹಾರ ಸುರಕ್ಷತಾಧಿಕಾರಿ ದ್ರಾಕ್ಷಾಯಣಿ.ಎಸ್ ಬಡಿಗೇರ್ ಸೂಚಿಸಿದರು.

ಮೈಸೂರು:  ಬೇಕರಿ ವೃತ್ತಿಪರರು ಟ್ರಾನ್ಸ್‌ ಕೊಬ್ಬು ಬದಲು ಪರ್ಯಾಯ ಪದಾರ್ಥಗಳನ್ನು ಉಪಯೋಗಿಸಿ ಎಂದು ಆಹಾರ ಸುರಕ್ಷತಾಧಿಕಾರಿ ದ್ರಾಕ್ಷಾಯಣಿ.ಎಸ್ ಬಡಿಗೇರ್ ಸೂಚಿಸಿದರು.

ಸಾರ್ವಜನಿಕರ ಹೃದಯದ ಆರೋಗ್ಯ ಉತ್ತಮ ಪಡಿಸಲು ಹಾಗೂ ಕಾರ್ಖಾನೆ ಮಟ್ಟದಲ್ಲಿ ತಯಾರಾಗುವ ಟ್ರಾನ್ಸ್‌ ಕೊಬ್ಬು ಇವುಗಳನ್ನು ಆಹಾರ ಸರಪಳಿಯಿಂದ ನಿರ್ಮೂಲನೆ ಮಾಡುವ ಸಲುವಾಗಿ ಅರಿವು ಕಾರ್ಯಗಾರ ಇಡಿ ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿನ ವಿಶ್ವೇಶ್ವರ ನಗರದಲ್ಲಿ ನಡೆಸಲಾಯಿತು.

ಲೈವ್ಸ್‌ ಸಂಸ್ಥೆಯ ಹಿರಿಯ ತಾಂತ್ರಿಕ ಸಲಹೆಗಾರರಾದ ಡಾ. ಭಾರತಿ ಭಾರಧ್ವಜ್ ಮಾತನಾಡಿ ಟ್ರಾನ್ಸ್‌ ಕೊಬ್ಬು ಉಪಯೋಗದಿಂದ ಆಗುವ ಸಾರ್ವಜನಿಕ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀ ನಿವಾಸ್ ಇವರ ನಿರ್ದೇಶನದ ಮೇಲೆ ಮೈಸೂರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮಹಾನಗರ ಪಾಲಿಕೆ ವ್ಯಾಪ್ತಿಯ ಕಛೇರಿ ವತಿಯಿಂದ ಕೇಂದ್ರ ಎಫ್‌ಎಸ್‌ಎಸ್ಎಐ ನೀಡಿರುವ ಟ್ರಾನ್ಸ್‌ ಕೊಬ್ಬು (ಐಡೋಜನಿಕರಿಸಿದ. ತೈಲಗಳಿಂದ ಮಾಡಿದ ಸಂಸ್ಕರಿಸಿದ ಬೇಕರಿ ಆಹಾರಗಳಲ್ಲಿ ಉಪಯೋಗಿಸುವ ಕೊಬ್ಬು) ನಿಬಂಧನೆಯ ಅಡಿಯಲ್ಲಿ ನೀಡಿರುವ ಮಾನದಂಡನೆಯನ್ನು ಅನುಷ್ಠಾನಗೊಳಿಸಲು ಕಾರ್ಯಕ್ರಮವನ್ನು ಬೇಕರಿ ವೃತ್ತಿಪರರಿಗೆ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಎಸ್.ಆರ್‌. ಗಿರೀಶ್ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ , ಮೈಸೂರು ಬಾಣಸಿಗ ಸಂಘದ ಅಧ್ಯಕ್ಷ ಸೆಲ್ವಕುಮಾರ್, ಅಂಕಿತ ಅಧಿಕಾರಿ ಡಾ.ಎಸ್.ಎಲ್‌. ರವೀಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ