ಕೊಪ್ಪಳ: ಶಿವ ಚಿದಂಬರೇಶ್ವರರ ನಿರಂತರ ನಾಮಸ್ಮರಣೆ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಹಾಗೂ ಪರಿವರ್ತನೆ ಕಾಣಲು ಸಾಧ್ಯ ಎಂದು ಪಂಡಿತ್ ನೀಲಕಂಠಯ್ಯ ದೀಕ್ಷಿತ್ ಹೇಳಿದರು.
ಯಾರನ್ನು ನೋಡಿದಾಕ್ಷಣ ನಮ್ಮ ಮನಸ್ಸು ಪರಿವರ್ತನೆ ಆಗುತ್ತದೆಯೊ,ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತದೆಯೊ ಅವರೇ ಸದ್ಗುರುಗಳು ಆಗುತ್ತಾರೆ. ನಮಗೆ ಅಂಥ ಸದ್ಗುರುಗಳ ಸಾನ್ನಿಧ್ಯ,ಸತ್ಸಂಗ ಲಭಿಸಿದೆ. ಜೀವನದ ಮುಕ್ತಿಗೆ ಸತ್ಸಂಗ ಮತ್ತು ಚಿದಂಬರೇಶ್ವರರ ಸ್ಮರಣೆ ಬೇಕು. ಇದರಿಂದ ದೇಹ ಪವಿತ್ರವಾಗುತ್ತದೆ ಎಂದರು.
ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಪಾದಯಾತ್ರೆ ತಂಡದವರು ಭಕ್ತರ ಸಮ್ಮುಖದಲ್ಲಿ ಚಿದಂಬರೇಶ್ವರರ ಹಾಡುಗಳ ಭಜನೆ ಮಾಡಿದರು.ಕರ್ಕಿಹಳ್ಳಿಯ ಸಂತ ಸುರೇಶ ಗುರುಮಹಾರಾಜ ಪಾಟೀಲ ಪಂಡಿತ್ ರಾಮಚಂದ್ರ ದೀಕ್ಷಿತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.