ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳಿಗೆ ಹೊಸ ಆಯಾಮಗಳನ್ನು ಹೊಸ ವ್ಯಕ್ತಿಗಳಿಂದ ಕಲಿಸಿಕೊಡುವುದೇ ವಿಶೇಷ ಉಪನ್ಯಾಸ ಮಾಲಿಕೆಯ ಉದ್ದೇಶ. ಕನ್ನಡ ನಾಡು,ನುಡಿಗೆ ಕೊಡುಗೆ ನೀಡಿದ ಮಾಸ್ತಿ, ಡಿವಿಜಿಯಂತಹ ಮಹನೀಯರ ಪರಿಚಯ ಪ್ರತಿಯೊಬ್ಬರಿಗೂ ಆಗಬೇಕು ಎಂದು ಕಥೆಗಾರ ವಸುಧೇಂದ್ರ ತಿಳಿಸಿದರು.ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಮಂಗಸಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿ ಇದೇ ಮೊದಲಬಾರಿ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಥೆಗಳು ಎಲ್ಲೆಲ್ಲೂ ಇರುತ್ತವೆ. ಆದರೆ ಅವನ್ನು ನೋಡುವ ಕಣ್ಣುಗಳು, ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಜೀವನದಲ್ಲಿ ಕುತೂಹಲವಿದ್ದರೆ ಕಥೆಗಳು ತಾನಾಗಿಯೇ ಹೊಳೆಯುತ್ತವೆ ಎಂದು ತಿಳಿಸಿದರು.ಇಂಗ್ಲಿಷ್‌ನಿಂದ ಭಾಷಾಂತರ ಕಷ್ಟ
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಮಾತನಾಡಿ, ಉತ್ತರ ವಿವಿ ಉಪನ್ಯಾಸ ಮಾಲಿಕೆಯ ಮೂಲಕ ದಾಪುಗಾಲು ಇಡುತ್ತಿದೆ. ಸದ್ಯವೇ ವಿವಿಯಿಂದ ಪ್ರಸಾರಾಂಗವನ್ನು ಸ್ಥಾಪಿಸುವ ಮೂಲಕ ಮೊರಸುನಾಡು ಕನ್ನಡ ಎಂಬ ಶಬ್ದಕೋಶವನ್ನು ಪ್ರಕಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೌಶಲ್ಯಾಭಿವೃದ್ಧಿಗೂ ಒತ್ತುಮೊದಲ ಹಂತದಲ್ಲಿ ಇಂದಿನೀಂದ ಮೇ.೩೧ ರವರೆಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜ್ಞಾನ ವೃದ್ದಿಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಕೌಶಲ್ಯಾಭಿವೃದ್ಧಿಗೂ ವಿವಿ ಕೆಲಸಮಾಡುತ್ತಿದೆ ಎಂದು ವಿವರಿಸಿದರು.ಕಾಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ, ವಿತ್ತಾಧಿಕಾರಿ ವಸಂತಕುಮಾರ್ ಇದ್ದರು.