ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಕೇಂದ್ರವಾರ ಕೋಲಾರದಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು. ಕೋಲಾರದಲ್ಲಿ ೫೮೦ ಬಸ್‌ಗಳ ಪೈಕಿ ಕೆಲವೇ ಕೆಲವು ಬಸ್‌ಗಳು ರಸ್ತೆಗಿಳಿಯದ ಪರಿಣಾಮ ಜಿಲ್ಲಾಡಳಿತ ಖಾಸಗಿ ಹಾಗೂ ಗುತ್ತಿಗೆ ನೌಕರರ ಮೂಲಕ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿತು. ಪ್ರಮುಖವಾಗಿ ತಿರುಪತಿ ಹಾಗೂ ಬೆಂಗಳೂರು ಭಾಗಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೆ ಕೋಲಾರ ಬಸ್ ನಿಲ್ದಾಣದಿಂದ ತಿರುಪತಿ, ಚಿತ್ತೂರು, ಹೊಸೂರು, ಬೆಂಗಳೂರಿಗೆ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರೆ ಮಂಗಳವಾರ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ಸುಗಳು ಡಿಪೋ ಬಿಟ್ಟು ಹೊರಗೆ ಬರಲಿಲ್ಲ.
ನಿಲ್ದಾಣದಲ್ಲಿ ಬಸ್‌ಗಳೇ ಇಲ್ಲಜಿಲ್ಲಾ ಕೇಂದ್ರವಾರ ಕೋಲಾರದಲ್ಲಿ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಡಿಪೋಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದ್ದಂತೆ ಕೆಎಸ್‌ಆರ್ಟಿಸಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಮುಷ್ಕರದ ಮಾಹಿತಿ ಇಲ್ಲದೆ ಬಹಳಷ್ಟು ಪ್ರಯಾಣಿಕರು ಮಂಗಳವಾರ ಬೆಳಗ್ಗೆ ೫ ಗಂಟೆಯಿಂದ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ಸುಗಳಿಲ್ಲದೆ ಪರದಾಡುತ್ತಿದ್ದರು.
ಖಾಸಗಿ ಬಸ್‌ಗಳಿಗೆ ಮೊರೆನಗರದ ಹಳೇ ಬಸ್ ನಿಲ್ದಾಣ, ಕ್ಲಾಕ್ ಟವರ್, ಬಂಗಾರಪೇಟೆ ಮಾರ್ಗದ ಸರ್ಕಲ್, ಕೋರ್ಟ್ ಸರ್ಕಲ್ ಮುಂತಾದ ಕಡೆ ಸಾರ್ವಜನಿಕರ ಬಸ್‌ಗಾಗಿ ಕಾಯುತ್ತಿರುವುದು ಮಂಗಳವಾರ ಬೆಳಗ್ಗೆ ಕಂಡು ಬಂದಿತು. ಇನ್ನು ಕೆಲವರು ನಗರ ಹೊರವಲಯದ ಬೈಪಾಸ್ ರಸ್ತೆಗಳಲ್ಲಿ ಖಾಸಗಿ ಬಸ್‌ಗಳಿಗೆ ಕಾಯುತ್ತಿದ್ದರು. ಅನಿವಾರ್ಯ ಕೆಲಸದ ನಿಮಿತ್ತ ಪ್ರಯಾಣಿಸುವರು ಖಾಸಗಿ ಬಸ್‌ಗಳನ್ನು ಹಿಡಿದು ಪ್ರಯಾಣಿಸುತ್ತಿದ್ದರು.
ದರಗಳಲ್ಲಿ ಯಾವುದೇ ರೀತಿ ಹೆಚ್ಚಾಗಿ ಪಡೆಯ ಬಾರದು ಎಂದು ಜಿಲ್ಲಾಧಿಕಾರಿಗಳು ಖಾಸಗಿ ಬಸ್ ಮಾಲೀಕರಿಗೆ ಕಟ್ಟು ನಿಟ್ಟಿನ ಆದೇಶದ ಹಿನ್ನಲೆಯಲ್ಲಿ ಮಾಮುಲಿ ದರವನ್ನೆ ಪ್ರಯಾಣಿಕರಿಂದ ಪಡೆಯುತ್ತಿದ್ದರು. ಟ್ರಾವೆಲರ್‍ಸ್‌ನವರುಗಳು ಹಾಗೂ ಟೆಂಪೋಗಳು ಸಹ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಲಾಭ ಮಾಡಿಕೊಳ್ಳಲು ರಸ್ತೆಗೆ ಇಳಿದಿದ್ದವು.ಮಹಿಳೆಯರಿಗೆ ಉಚಿತ ಟಿಕೆಟ್ ಇಲ್ಲಸಾರಿಗೆ ಮುಷ್ಕರದಿಂದಾಗಿ ದಿನನಿತ್ಯ ಪ್ರಯಾಣಿಕರು ಅಲ್ಲದೆ ವಿಶೇಷವಾಗಿ ಗ್ಯಾರೆಂಟಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಸಾರಿಗೆ ಮುಷ್ಕರವನ್ನು ಶಪಿಸುತ್ತಾ ಹಣ ನೀಡಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ನಗರದಲ್ಲಿ ಕಂಡು ಬಂದಿತು. ಬಾಕ್ಸ್..............
ಬಸ್ ಮೇಲೆ ಕಲ್ಲು ತೂರಾಟ ಕೋಲಾರ ತಾಲೂಕು ಹರಟಿ ಗೇಟ್ ಬಳಿ ಕೆಎಸ್ಸಾರ್ಟಿಸಿ ಬಸ್ ಮೇಲೆ ಮೂವರು ಮುಸುಕುದಾರಿಗಳು ಕಲ್ಲು ತೂರಾಟ ನಡೆದಿದ್ದು, ಬೇತಮಂಗಲದಿಂದ ಕೋಲಾರಕ್ಕೆ ಬರುತ್ತಿದ್ದ ಸಾರಿಗೆ ಬಸ್ಸಿನ ಮುಭಾಗದ ಗಾಜು ಒಡೆದಿದೆ. ಸರ್ಕಾರಿ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರಿಗೆ ಬಸ್ ಮಾರ್ಗಗಳನ್ನು ನೀಡಿ ಕಳುಹಿಸಿಕೊಡಲಾಗಿತ್ತು. ಇದನ್ನು ತಿಳಿದ ಕೆಲ ನೌಕರರು ಅಥವಾ ಇವರಿಗೆ ಬೆಂಬಲವಾಗಿ ನಿಂತಿರುವ ಕೆಲವು ಕಿಡಿಗೇಡಿಗಳು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. .