ತಿಪ್ಪೇಸ್ವಾಮಿ ಜಾನಪದ ಕ್ಷೇತ್ರ ಕಾರ್ಯದ ಸಂಪತ್ತು: ಕ್ಯಾತನಹಳ್ಳಿ ರಾಮಣ್ಣ

KannadaprabhaNewsNetwork |  
Published : Nov 25, 2026, 01:15 AM IST
3 | Kannada Prabha

ಸಾರಾಂಶ

ಅಪಾರ ಶ್ರಮ ವಹಿಸಿ ಜಾನಪದ ಕ್ಷೇತ್ರಕಾರ್ಯ ಮಾಡಿದ ದೀಮಂತ ವ್ಯಕ್ತಿತ್ವ ಪಿ.ಆರ್. ತಿಪ್ಪೇಸ್ವಾಮಿ ಅವರದ್ದಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಮಾದರಿಯೇ ಇಂದು ಅನೇಕ ಜಾನಪದ ವಿದ್ವಾಂಸರು ಸೃಷ್ಟಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪಿ.ಆರ್.ತಿಪ್ಪೇಸ್ವಾಮಿ ಅವರು ಜಾನಪದ ಕ್ಷೇತ್ರ ಕಾರ್ಯದ ಸಂದರ್ಭಗಳಲ್ಲಿ ಹಲ್ಲೆ, ಸಂಘರ್ಷವನ್ನು ಎದುರಿಸಿ ತಮ್ಮ ಜಾನಪದ ಸಂಪತ್ತನ್ನು ಅನನ್ಯಗೊಳಿಸಿದ್ದಾರೆ ಎಂದು ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ತಿಳಿಸಿದರು.

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪೀಠವು ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು, ಜಾನಪದ ವಸ್ತು ಸಂಗ್ರಹಾಲಯ ಬೆಳವಣಿಗೆಯಲ್ಲಿ ಪಿ.ಆರ್. ತಿಪ್ಪೇಸ್ವಾಮಿಯವರ ಪಾತ್ರ ಕುರಿತು ಮಾತನಾಡಿದರು.

ಅಪಾರ ಶ್ರಮ ವಹಿಸಿ ಜಾನಪದ ಕ್ಷೇತ್ರಕಾರ್ಯ ಮಾಡಿದ ದೀಮಂತ ವ್ಯಕ್ತಿತ್ವ ಪಿ.ಆರ್. ತಿಪ್ಪೇಸ್ವಾಮಿ ಅವರದ್ದಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಮಾದರಿಯೇ ಇಂದು ಅನೇಕ ಜಾನಪದ ವಿದ್ವಾಂಸರು ಸೃಷ್ಟಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಜಾನಪದ ವಸ್ತು ಸಂಗ್ರಹಾಲಯದಲ್ಲಿನ ದಾಸ್ತಾನೂ ಪುಸ್ತಕ ಕುರಿತು ಟಿಪ್ಪಣಿ ಬರೆದಿಟ್ಟಿದ್ದಾರೆ. ಈ ಮಾದರಿ ಜಗತ್ತಿನಲ್ಲಿ ಎಲ್ಲೂ ಸಿಗಲಾರದು ಎಂದರೆ ತಪ್ಪಾಗಲಾರದು. ತಿಪ್ಪೇಸ್ವಾಮಿ ಅವರು ಜಾನಪದ ಕ್ಷೇತ್ರಕಾರ್ಯದಲ್ಲಿ ಮುಳುಗಿ ಹಲವು ಕ್ಷೇತ್ರಗಳಲ್ಲಿ ಉತ್ಖನನ ಮಾಡಿದರು. ಇದು ಜಾನಪದ ಕ್ಷೇತ್ರಕ್ಕೆ ಅನನ್ಯ ಕೊಡುಗೆಯಾಗಿದೆ. ಅವರು ಎಷ್ಟು ಗಂಭೀರವೋ ಅಷ್ಟೂ ಹಾಸ್ಯ ದೃಷ್ಟಿಕೋನವಿತ್ತು ಎಂದು ಅವರು ಹೇಳಿದರು.

ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ, ಚತುರ್ಮುಖ ಬ್ರಹ್ಮನಂತೆ ಪಿ.ಆರ್. ತಿಪ್ಪೇಸ್ವಾಮಿ ಅವರು ಕ್ಷೇತ್ರಕಾರ್ಯ ಮಾಡಿದ್ದಾರೆ. ಕುವೆಂಪು ಅವರು ತಿಪ್ಪೇಸ್ವಾಮಿ ಅವರ ಬಗ್ಗೆ ಕವಿತೆ ಬರೆದಿದ್ದಾರೆ. ಮದುವೆಯಾಗದ ತಿಪ್ಪೇಸ್ವಾಮಿ ಅವರು ತಮ್ಮ ಜಾನಪದ ಸಂಗ್ರಹವೇ ಅವರ ಸಂಸಾರದಂತೆ ಜೀವಿಸಿದ್ದರು. ಅವರದು ಪ್ರದೇಶ ಮತ್ತು ಜಾತಿ ಭೇದವಿಲ್ಲದ ಬದುಕಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, ಪಿ.ಆರ್. ತಿಪ್ಪೇಸ್ವಾಮಿ ಅವರು ಮೈಸೂರು ವಿವಿ ಜಾನಪದ ಸಂಗ್ರಹಾಲಯವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. ವಿವಿಯಲ್ಲಿ ಪಿ.ಆರ್. ತಿಪ್ಪೇಸ್ವಾಮಿ ಅಧ್ಯಯನ ಪೀಠ ಆರಂಭ ಆಗಿರುವುದು ಸಂತಸದ ಸಂಗತಿ. ಅವರು ಜಾನಪದ ಚಿತ್ರಕಲೆಯ ಕಣಜವಾಗಿದ್ದರು. ಅವರ ವೈಯಕ್ತಿಕ ಡೈರಿಗಳ ಕಟ್ಟನ್ನು‌ ಬಿಚ್ಚಿದರೇ ನಮ್ಮ ಸಂಸ್ಕೃತಿಯ ಬಹುಮುಖ ಆಯಾಮಗಳು ಬಿಚ್ಚಿಕೊಳ್ಳುತ್ತವೆ. ಅವರ ಎಲ್ಲಾ ಡೈರಿಗಳನ್ನು ಮರುಮುದ್ರಣ ಮಾಡುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಪಿ.ಆರ್. ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಎಸ್. ಕರಿಕಲ್, ಕಾರ್ಯಕ್ರಮದ ಸಂಚಾಲಕರಾದ ಡಾ. ದುಂಡಯ್ಯ ಎಲ್ಲೆಮಾಳ, ಡಾ.ಕೆ.ಎಂ. ವರದರಾಜು, ಡಾ.ಎಚ್.ಪಿ. ಮಂಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ: ನಿಸಾರ್ ಅಹಮದ್
ರವಿ ಹಂಜ್‌ ಗಡಿಪಾರಿಗೆ ಬಸವಾಭಿಮಾನಿಗಳ ಆಗ್ರಹ