ಛಾಯಾಗ್ರಾಹಕರನ್ನು ಗೌರವದಿಂದ ಕಾಣಿ

KannadaprabhaNewsNetwork |  
Published : May 30, 2024, 12:48 AM IST
ವಿಜಯಪುರದಲ್ಲಿ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಹಾಕರ ಸಂಘದ ನೇತೃತ್ವದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಜಗತ್ತಿನಲ್ಲಿ ಎಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯನ್ನು ಸ್ಮೈಲ್ ಪ್ಲೀಸ್ ಅನ್ನುವ ಹಕ್ಕು ಇರುವುದು ಮಾತ್ರ ಛಾಯಾಗ್ರಾಹಕ ಎಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ನ ನಿರ್ದೇಶಕ ರಮೇಶ ಬಿದನೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಗತ್ತಿನಲ್ಲಿ ಎಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯನ್ನು ಸ್ಮೈಲ್‌ ಪ್ಲೀಸ್ ಅನ್ನುವ ಹಕ್ಕು ಇರುವುದು ಮಾತ್ರ ಛಾಯಾಗ್ರಾಹಕ ಎಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ರಮೇಶ ಬಿದನೂರ ಹೇಳಿದರು.

ನಗರದ ಫರ್ನ್‌ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ನೂತನ ಚಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಾಹಕ ಸಂಘದ ನೇತೃತ್ವದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನದೊಂದಿಗೆ ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಎಲ್ಲಾ ನೋವು-ನಲಿವುಗಳ ಜೊತೆಯಲ್ಲಿ ಐತಿಹಾಸಿಕ ದಾಖಲೀಕರಣ ಮಾಡುವವರು ಛಾಯಾಗ್ರಾಹಕರು. ಅಂತಹ ವೃತ್ತಿ ಇಂದು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ. ಹೀಗಾಗಿ, ಛಾಯಾಗ್ರಾಹಕರಿಗೆ ಕಲಾವಿದರಿಗೆ ನಾವು ಗೌರವಿಸಬೇಕು ಎಂದರು.

ಸೋನಿ ಕಂಪನಿಯ ಹಿರಿಯ ಮಾರಾಟಗಾರ ನಿತೀನಕುಮಾರ ಮಾತನಾಡಿ, ರಾಜ್ಯದಲ್ಲಿ ಚಾಯಾಗ್ರಾಹಕರ ಬೆಳವಣಿಗೆಗೆ ಕಂಪನಿಯಿಂದ ಹಲವಾರು ಉಪಯುಕ್ತವಾದ ಮಾಹಿತಿಯ ಜೊತೆಗೆ ಅವಶ್ಯಕ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ವಿಜಯಪುರ ಚಾಯಾಗ್ರಾಹಕರು ಅತ್ಯಂತ ಹರ್ಷದಿಂದ ಇಲ್ಲಿ ಭಾಗವಹಿಸಿದ್ದಾರೆ ಎಂದರು. ಜಿಲ್ಲಾ ಚಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ರಮೇಶ ಚವ್ಹಾನ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಕೆರ್ ಕಲರ್ ಲ್ಯಾಬ್‌ನ ಮುರಾರಿ ಕರ್ವಾ, ವಸಂತ ಕುಮಾರ, ಮುಸ್ತಫಾ ಬಾಷಾ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!