1998ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಪ್ರತಿಯೊಬ್ಬ ಶಾಲಾ ವಿದ್ಯಾರ್ಥಿಯೂ ತನಗೆ ವಿದ್ಯಾದಾನ ಮಾಡಿದ ಶಿಕ್ಷಕರು ಹಾಗೂ ಶಾಲೆಯನ್ನು ಸದಾ ಪೂಜ್ಯತಾ ಭಾವದಿಂದ ಕಾಣಬೇಕು. ಕಾರಣ, ಅವರ ಭವಿಷ್ಯದ ಬದುಕಿಗೆ ಭದ್ರ ಬುನಾದಿ ಒದಗಿಸುವುದೇ ಶಿಕ್ಷಣ, ಶಿಕ್ಷಕ ಮತ್ತು ಶಾಲೆ ಇಂದಿಗೂ ಸಹ ಅನೇಕ ವಿದ್ಯಾರ್ಥಿಗಳು ತಾವುಕಲಿತ ಶಾಲೆಗೆ ಕೊಡುಗೆ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ ಇಂತಹವರ ಸಂಖ್ಯೆ ಹೆಚ್ಚಬೇಕು. ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲು ಮುಂದಾಗಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.ಮಂಗಳವಾರ ನಗರದ ಬಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ 1998ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸುಮಾರು 2.50 ಲಕ್ಷ ಮೌಲ್ಯದ ಶುದ್ಧ ಕುಡಿವ ನೀರಿನ ಘಟಕವನ್ನು ನಿರ್ಮಿಸಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಋಣವನ್ನು ತೀರಿಸುವಲ್ಲಿ ಮುಂದಾಗಿದ್ದಾರೆ. 28 ವರ್ಷಗಳ ನಂತರ ಶಾಲೆಗೆ ಕೊಡುಗೆ ನೀಡಿದ್ದಾರೆ. ಶಾಲೆ ಮತ್ತು ಶಿಕ್ಷಕ ಬಗ್ಗೆ ಅವರಲ್ಲಿರುವ ಶ್ರದ್ಧೆ, ವಿನಯ ಮತ್ತು ಗೌರವವನ್ನು ನಾನು ಪ್ರಶಂಸುತ್ತೇನೆ ಎಂದರು.
ಶಾಲೆಯ ಶಿಕ್ಷಕರ ಪರವಾಗಿ ಮಾತನಾಡಿದ ನಿವೃತ್ತ ಬಿಇಒ ಪಿ.ರಾಮಯ್ಯ, ನಾನು ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿದೆ. ಇದೇ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ವಿಶೇಷವೆಂದರೆ ಸುಮಾರು 75 ವರ್ಷಗಳ ಇತಿಹಾಸದ ಬಿಸಿ ನೀರು ಮುದ್ದಪ್ಪ ಪ್ರೌಢಶಾಲೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿಯಾಡಿದೆ.1998ನೇ ಸಾಲಿನ ವಿದ್ಯಾರ್ಥಿಗಳು ಸಹ ಶಾಲೆಗೆ ಕುಡಿಯುವ ನೀರಿನ ಘಟಕ ನೀಡಿ ತಮ್ಮ ಔದಾರ್ಯತೆ ಪ್ರದರ್ಶಿಸಿದ್ದಾರೆ. ಶಿಕ್ಷಕರನ್ನು ಸಹ ಸನ್ಮಾನಿಸಿದ್ದಾರೆ, ಗುರುಶಿಷ್ಯರ ಬಾಂಧ್ಯವಕ್ಕೆ ಮೆರಗು ನೀಡಿದ್ದಾರೆ ಎಂದು ಹೇಳಿದರು.ನಿವೃತ್ತ ಶಿಕ್ಷಕರಾದ ಬಿ.ರೇಣುಕದೇವಿ, ಬಿ.ಎಂ.ಮಂಜುನಾಥ, ಜಿ.ಬಸವರಾಜು, ಶಾಲೆ ಮುಖ್ಯಶಿಕ್ಷಕ ಮಂಜುನಾಥ, ಹಳೇವಿದ್ಯಾರ್ಥಿಗಳಾದ ಚಂದ್ರು, ಬಸವರಾಜು, ಮೊಹಬೂಬ್, ದೇವರಾಜ್, ಪ್ರಶಾಂತ್‌ನಾಯಕ, ನವೀನ್, ಅಭಿಷೇಕ್, ಸಂತೋಷ್, ಕಾವ್ಯ, ಜಿ.ಟಿ.ಮಮತಯಾದವ್, ವಿನುತ, ರಾಧಿಕ, ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.