ಹೆದ್ದಾರಿಗೆ ಬಾಗಿರುವ ಮರ: ಅಧಿಕಾರಿಗಳ ನಿರ್ಲಕ್ಷ್ಯ

KannadaprabhaNewsNetwork |  
Published : Mar 13, 2025, 12:50 AM IST
ಪೋಟೋ.: 12 ಎಚ್ ಎಚ್ ಆರ್ ಪಿ 1ಕೈಮರ ಸರ್ಕಲ್‌ನ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಹೆದ್ದಾರಿಗೆ ಬಾಗಿರುವ ಮರ. | Kannada Prabha

ಸಾರಾಂಶ

Tree leaning against highway: Officials' negligence

ಹೊಳೆಹೊನ್ನೂರು: ಅರಹತೊಳಲು ಕೈಮರದ ಎನ್.ಡಿ.ಸುಂದರೇಶ್ ವೃತ್ತದಲ್ಲಿ ರಸ್ತೆ ಬದಿಯ ಮರವೊಂದು ಸಂಪೂರ್ಣ ಹೆದ್ದಾರಿಗೆ ಬಾಗಿ ಅಪಾಯದ ಮುನ್ಸೂಚನೆ ನೀಡುತ್ತಿದೆ. ಕೈಮರ ಸರ್ಕ್‌ಲ್ ನಾಲ್ಕು ರಸ್ತೆಗಳು ಕೂಡುವ ಸ್ಥಳವಾಗಿದ್ದು ಯಾವಾಗಲೂ ಜನರಿಂದ ತುಂಬಿರುತ್ತದೆ. ಜೊತೆಗೆ ಈ ಮರದ ಕೆಳಗಡೆ 11 ಸಾವಿರ ಕಿಲೋವ್ಯಾಟ್‌ನ ವಿದ್ಯುತ್ ಲೈನ್‌ಗಳು ಹಾದುಹೋಗಿವೆ. ಮರದ ಕೊಂಬೆಗಳು ಮುರಿದು ಈ ಲೈನ್‌ಗಳ ಮೇಲೆ ಬಿದ್ದರೆ ಅನಾಹುತ ಗ್ಯಾರಂಟಿ. ಈ ಬಗ್ಗೆ ಗ್ರಾಮದ ಹಲವರು ಅನೇಕ ಬಾರಿ ಗ್ರಾಪಂಗೆ ದೂರು ನೀಡಿ ಮರವನ್ನು ಕಡಿತಲೆ ಮಾಡುವಂತೆ ಹೇಳಿದ್ದಾರೆ. ಗ್ರಾಮ ಪಂಚಾಯತಿ ಯವರು ಅರಣ್ಯ ಇಲಾಖೆಗೆ ಪತ್ರ ಬರೆದರೂ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಇದು ಹೀಗೆ ಮುಂದುವರಿದರೆ ಅನಾಹುತ ಸಂಭವಿಸುವುದು ನಿಶ್ಚಿತ. ಆದ್ದರಿಂದ, ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

---------------ಪೋಟೋ.: 12 ಎಚ್ ಎಚ್ ಆರ್ ಪಿ 1ಕೈಮರ ಸರ್ಕಲ್‌ನ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಹೆದ್ದಾರಿಗೆ ಬಾಗಿರುವ ಮರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ