ನಾಳ ಕ್ಷೇತ್ರದಲ್ಲಿ ರೆಂಜೆಗಿಡದ ವೃಕ್ಷಾರೋಪಣ ಕಾರ್ಯಕ್ರಮ

KannadaprabhaNewsNetwork |  
Published : Jul 18, 2026, 01:30 AM IST
ರೆಂಜೆಗಿಡದ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಇತಿಹಾಸಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ರೆಂಜೆಗಿಡದ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.ಕ್ಷೇತ್ರದ ಶ್ರೀ ಪರಿವಾರ ಸಹಿತ ದುರ್ಗಾಪರಮೇಶ್ವರೀ ದೇವರಿಗೆ ಜೀರ್ಣೋದ್ಧಾರ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ವನ್ನು ನಡೆಸುವ ಬಗ್ಗೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ, ಕ್ಷೇತ್ರದಲ್ಲಿ ಈ ಹಿಂದೆ ಕಣ್ವ ಮಹರ್ಷಿಗಳು ತಪಸ್ಸು ನಡೆಸಿದ ಸ್ಥಳದಲ್ಲಿ ಇದ್ದ ರೆಂಜೆ ಗಿಡದ ಸ್ಥಳದಲ್ಲಿ ಮತ್ತೆ ರೆಂಜೆ ಗಿಡವನ್ನು ನೆಟ್ಟು ಕಣ್ವ ಮಹರ್ಷಿಗಳ ನೆನಪು ಮಾಡುವ ಕಾರ್ಯ ಆಗಬೇಕು ಎಂದು ಕಂಡುಬಂದ ಹಿನ್ನಲೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ ಮಾರ್ಗದರ್ಶನದಲ್ಲಿ ರೆಂಜೆಗಿಡವನ್ನು ನೆಡಲಾಯಿತು.

ಬೆಳ್ತಂಗಡಿ: ಇತಿಹಾಸಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ರೆಂಜೆಗಿಡದ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.ಕ್ಷೇತ್ರದ ಶ್ರೀ ಪರಿವಾರ ಸಹಿತ ದುರ್ಗಾಪರಮೇಶ್ವರೀ ದೇವರಿಗೆ ಜೀರ್ಣೋದ್ಧಾರ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ವನ್ನು ನಡೆಸುವ ಬಗ್ಗೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ, ಕ್ಷೇತ್ರದಲ್ಲಿ ಈ ಹಿಂದೆ ಕಣ್ವ ಮಹರ್ಷಿಗಳು ತಪಸ್ಸು ನಡೆಸಿದ ಸ್ಥಳದಲ್ಲಿ ಇದ್ದ ರೆಂಜೆ ಗಿಡದ ಸ್ಥಳದಲ್ಲಿ ಮತ್ತೆ ರೆಂಜೆ ಗಿಡವನ್ನು ನೆಟ್ಟು ಕಣ್ವ ಮಹರ್ಷಿಗಳ ನೆನಪು ಮಾಡುವ ಕಾರ್ಯ ಆಗಬೇಕು ಎಂದು ಕಂಡುಬಂದ ಹಿನ್ನಲೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ ಮಾರ್ಗದರ್ಶನದಲ್ಲಿ ರೆಂಜೆಗಿಡವನ್ನು ನೆಡಲಾಯಿತು.ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್, ಸದಸ್ಯರಾದ ಅರುಣ್ ಶೆಟ್ಟಿ, ಶರತ್ ಕುಮಾರ್, ಹರೀಶ್ ಗೌಡ, ನೀನಾಕುಮಾರ್, ರೀತಾ ಚಂದ್ರಶೇಖರ್, ಮೋಹಿನಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಸಂತ ಮಜಲು, ಮಾಜಿ ಸದಸ್ಯರಾದ ಪ್ರಭಾಕರ್ ಶೆಟ್ಡಿ ತುಂಬೆಜಾಲ್, ದಿನೇಶ್ ಗೌಡ, ಕ್ಷೇತ್ರದ ಪ್ರಬಂಧಕ ಗಿರೀಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ಗೌಡ, ಶ್ರೀದುರ್ಗಾ ಮಾತೃಮಂಡಳಿ ಅಧ್ಯಕ್ಷೆ ಮಮತಾ ಆಳ್ವ, ಕಾರ್ಯದರ್ಶಿ ವಿನೋದಾ,ಗೇರುಕಟ್ಟೆ ವಲಯ ಉಪವಲಯ ಅರಣ್ಯಾಧಿಕಾರಿ ಸಂದೀಪ್ ಶ್ರೀ, ಕಳಿಯ ಗಸ್ತು ವನಪಾಲಕ ಪರಶುರಾಮ ಮೇಟಿ, ಎಸ್.ಕೆ.ಡಿ.ಆರ್.ಡಿ.ಪಿ ಸೇವಾಪ್ರತಿನಿಧಿ ಸೌಮ್ಯ, ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಡಾ. ಅನಂತ ಭಟ್, ದಿವಾಕರ ಆಚಾರ್ಯ, ಪ್ರಮುಖರಾದ ಪೂವಪ್ಪ ಶೆಟ್ಟಿ ಬಿಳಿಬೈಲು, ಉಮಾನಾಥ ಕುಲ್ಲುಂಜ, ಜಗನ್ನಾಥ ಪೂಜಾರಿ ವಂಜಾರೆ, ಕೂಸಪ್ಪ ಗೌಡ, ಗೋಪಾಲ ಮುದ್ದುಂಜ, ಲೋಕೇಶ್ ಎನ್, ಸತೀಶ್ ಭಂಡಾರಿ, ಜಯಚಂದ್ರ ಆಚಾರ್ಯ, ಮೀನಾಕ್ಷಿ ನಾಳ,ಸಂಧ್ಯಾ ನಾಳ, ಮೀನಾಕ್ಷಿ ಮಡಿವಾಳ್ತಿ, ಸುಚೇತ ಆಳ್ವ, ಕುಸುಮ ಪಂಚಮಲಕೋಡಿ, ವಿನೋಧಿನಿ, ಚಂದ್ರಾವತಿ, ಜ್ಯೋತಿ, , ಸೋಮಪ್ಪ ಕುಬಾಯ, ರಂಜನ್ ಮುದ್ದುಂಜ, ಬಾಲಕೃಷ್ಣ ಶೆಟ್ಟಿ,ಸತೀಶ್ ವಂಜಾರೆ, ವಸಂತ ವಂಜಾರೆ, ಸುಧಾಕರ್ ಮಜಲ್, ರಮೇಶ್ ವಂಜಾರೆ, ವಸಂತ ಶೆಟ್ಟಿ, ಅಶೋಕ್ ರಾಯಿಮಾರ್, ವಸಂತ ಶೆಟ್ಟಿ, ಕುಶಾಲಪ್ಪ ಕಲಾಯಿತೊಟ್ಟು, ಸುರೇಶ್ ಪೆರ್ಮುಡ, ಉಮೇಶ್ ಗೋವಿಂದೂರು, ಮೊದಲಾದವರು ಇದ್ದರು.ಬಳಿಕ ಪ್ರಶ್ನೆಚಿಂತನೆಯಲ್ಲಿ ಕಂಡಬಂದಂತೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾಧಿಗಳು ನೀಡಿ, ವಿಶೇಷ ಪೂಜೆಯನ್ನು ಸಲ್ಲಿಸಿ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊದಲ ಆಷಾಢ ಶುಕ್ರವಾರಕ್ಕೆ ಭಕ್ತರ ದಂಡು
ವೃಷಭಲಿಂಗೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಸಂಗಬಸವ ಶ್ರೀ ಆಯ್ಕೆ